Karnataka State Farmers Association and Green Sena President: Sharanbasappa Danakai elected
ಯಲಬುರ್ಗಾ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರಾಗಿ ಶರಣಬಸಪ್ಪ ಕೆ ದಾನಕೈ ಅವರನ್ನು ,ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಬಣದ , ಜಿಲ್ಲಾ ಅಧ್ಯಕ್ಷರಾದ ಮುದಿಯಪ್ಪ ನಾಯಕ ಅವರು ಕುಕನೂರ ಪ್ರವಾಸಿ ಮಂದಿರದಲ್ಲಿ ಆಯ್ಕೆ ಮಾಡಿ ಜವಾಬ್ದಾರಿಯನ್ನು ವಹಿಸಿ ಹಸಿರು ಶಾಲು ಹಾಕಿ , ಸನ್ಮಾನಿಸಿ ಆದೇಶ ಪ್ರತಿಯನ್ನು ನೀಡಿದರು.ಸಂಘ ಅಭಿವೃದ್ಧಿಗಾಗಿ ಹಾಗು ರೈತರ ಪರವಾಗಿ ಸಂಘಟನೆ ಬಲಿಷ್ಟಗೊಳಿಸುವಲ್ಲಿ ಸದಾ ಶ್ರಮವಹಿಸುವದಾಗಿ ಯಲಬುರ್ಗಾ ತಾಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಹೇಳಿದರು. ಈ ವೇಳೆ ರಾಜ್ಯ ಸಮಿತಿಯ ಸದಸ್ಯ ಶರಣಪ್ಪ ಸೊಮಸಾಗರ, ಜಿಲ್ಲಾ ಮಹಿಳೆ ಅಧ್ಯಕ್ಷೆ ಹುಲಿಗೇಮ್ಮ ನಾಯಕ, ಹಾಗೂ ಸಂಘಟನೆಯ ಮುಖಂಡರಾದ ಸುಭಾಷ್ ನವಲಗುಂದ, ಪರಸುರಾಮ ಪೂಜಾರ, ರೇಣುಕಾ ಮೇಟಿ, ನೀಲಮ್ಮ ನಿಂಗಾಪೂರ, ಶಾರದಾ ಕೊಣ್ಣೂರ್ ಮಲ್ಲಿಕಾರ್ಜುನಯ್ಯ ಕೊಡಗಾನೂರ,ಜುಬೇದಾ ನವಲಗುಂದ ಸೇರಿದಂತೆ ಯಲಬುರ್ಗಾ ಹಾಗು ಕುಕನೂರ ತಾಲೂಕ ಸಮಿತಿಯವರು ಭಾಗವಹಿಸಿದ್ದರು.