A touch of sentimentality for Sri Guru Kottureswar Lakshdeepotsava is Hindu Muslim relations

ಕೊಟ್ಟೂರು : ಪಟ್ಟಣದ ಆರಾಧ್ಯ ದೈವ, ಕ್ಷೇತ್ರನಾಥ ಶ್ರೀ ಗುರುಬಸವೇಶ್ವರ ಸ್ವಾಮಿ ಲಕ್ಷ ದೀಪೋತ್ಸವದ ಅಂಗವಾಗಿ ನಡೆಯುವ ಕಾರ್ತೀಕೋತ್ಸವದ ಪ್ರಯುಕ್ತ ದೀಪಗಳನ್ನು ಹಸಿರು ಹೊನಲು ತಂಡ ಮತ್ತು ಹಳೆ ಕೊಟ್ಟೂರು ತಂಡಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ಪಟ್ಟಣದ ಬಸ್ ನಿಲ್ದಾಣದಿಂದ ರಥ ಬೀದಿಯವರೆಗೆ ಅಕ್ಕಪಕ್ಕದಲ್ಲಿ ದೀಪಗಳನ್ನು ಇಡುವ ಕೆಲಸದಲ್ಲಿ ಮುಸ್ಲಿಂ ಬಾಂಧವ ಸದಸ್ಯರು ಭಾಗವಹಿಸಿದ್ದು ಭಾವೈಕ್ಯದ ಸಂಕೇತದಂತೆ ಗೋಚರಿಸಿತ್ತು. ಅಲ್ಲದೇ ದೀಪಗಳನ್ನಷ್ಟೇ ಅಲ್ಲದೆ, ಕಸ ವಿಲೇವಾರಿಯನ್ನು ಸಹ ಸೋಮವಾರ ದಂದು ಮಾಡಲಾಗಿರುತ್ತದೆ. ಎರಡೂ ತಂಡಗಳ ಎಲ್ಲಾ ಸದಸ್ಯರು ಭಾಗವಹಿಸಿ ಶ್ರದ್ಧಾಭಕ್ತಿಯಿಂದ ಶ್ರೀಸ್ವಾಮಿಯ ಸೇವೆ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಎಂ ಶ್ರೀನಿವಾಸ್,ಶಿರಿಬಿ ಕೊಟ್ರೇಶ್, ಹೆಚ್ ವಿಜಯ ಕುಮಾರ್, ಕೆ ಕೊಟ್ರೇಶ್, ತಗ್ಗಿನಕೇರಿ ಕೊಟ್ರೇಶ್, ಅನಿಲ್, ಅಕ್ಷಯ್,ಪಿ ಗಣೇಶ್,ಗೌಸ್,ಬಿ ಮಂಜುನಾಥ್, ಸುಭಾನ್, ದಾದಾಪೀರ್, ಎಸ್ ಪರಶುರಾಮ್,ಬಿ ಆರ್ ವಿಕ್ರಂ, ಬಂಜಾರ್ ನಾಗರಾಜ್, ಯಲ್ಲಪ್ಪ, ನಾಗರಾಜ್, ಪ್ರಕಾಶ್ ಮಂಡಕ್ಕಿ, ಎರಡು ತಂಡಗಳ ಸದಸ್ಯರು ಇದ್ದರು