Breaking News

ಡಿಸೆಂಬರ್-೧೩ ರಂದು ಹೆಬ್ಬಾಳ ಬೃಹನ್ಮಠದ ಜಾತ್ರಾಮಹೋತ್ಸವದಲ್ಲಿ,ಶ್ರೀ ಬೊಳೋಡಿ ಬಸವೇಶ್ವರ ಪ್ರಶಸ್ತಿ ಪ್ರದಾನ

On December-13th at the Jatra Mahotsava of Hebbala Brihanmath, Shri Bolodi Basaveshwara Award was presented.

ಜಾಹೀರಾತು



ಗಂಗಾವತಿ: ತಾಲೂಕಿನ ಹೆಬ್ಬಾಳ ಬೃಹನ್ಮಠದ ಜಾತ್ರಾ ಮಹೋತ್ಸವವವು ಇದೇ ತಿಂಗಳ ೧೩ ಶುಕ್ರವಾರದಂದು ಜರುಗಲಿದೆ. ಜಾತ್ರಾ ಮಹೋತ್ಸವದ ದಿನದಂದು ಬೆಳಿಗ್ಗೆ ೧೧:೩೦ ಕ್ಕೆ ಧರ್ಮಸಭೆ ನಡೆಯಲಿದೆ. ಈ ಜಾತ್ರಾಮಹೋತ್ಸವದ ಶುಭ ಸಂದರ್ಭದಲ್ಲಿ ಹರ ಗುರು ಚರ ಮೂರ್ತಿಗಳ ಮತ್ತು ಶಿವರಶರಣರ ಸಾನಿಧ್ಯದಲ್ಲಿ ಹಾಗೂ ನಾಡಿನ ಜನಪ್ರತಿನಿಧಿಗಳು, ರಾಜಕೀಯ ಮುಖಂಡರ ಸಮ್ಮುಖದಲ್ಲಿ ಐದು ಜನ ಸಾಧಕರಿಗೆ ಶ್ರೀ ಬೊಳೋಡಿ ಬಸವೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೆಬ್ಬಾಳ ಬೃಹನ್ಮಠದ ಪೂಜ್ಯ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದರು.
ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಸಾಧನೆಗೈದು ರಾಜ್ಯದ ಸುವರ್ಣ ಮಹೋತ್ಸವದ ಪ್ರಶಸ್ತಿ ಪುರಸ್ಕೃತರಾದ ಹೃದ್ರೋಗ ತಜ್ಞ ಡಾ|| ಜಿ. ಚಂದ್ರಪ್ಪರವರಿಗೆ, ಕರ್ನಾಟಕ ರಾಜ್ಯ ವೈದ್ಯರ ಸಂಘದ ರಾಜ್ಯಾಧ್ಯಕ್ಷರಾದ ಡಾ|| ವಿ.ವಿ ಚಿನಿವಾಲರ್‌ರವರಿಗೆ, ಗೊರೇಬಾಳ ಮರುಳಸಿದ್ಧೇಶ್ವರ ಮಠದ ಡಾ|| ಸಿದ್ದಯ್ಯಸ್ವಾಮಿಯವರಿಗೆ, ಸಿಂಧನೂರಿನ ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಶ್ರೀ ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠರವರಿಗೆ, ಧಾರ್ಮಿಕ ಸಮಾಜ ಸೇವಕರಾದ ಶ್ರೀ ಶರಣಯ್ಯಸ್ವಾಮಿ ಪುರಾಣಿಕಮಠ ಕೊಪ್ಪಳರವರಿಗೆ, ಅಖಿಲ ಭಾರತ ವೀರಶೈವ ಮಹಾಸಭಾ ಕೊಪ್ಪಳ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ನಾಗಭೂಷಣಸ್ವಾಮಿ ಸಾಲಿಮಠ ಕೊಪ್ಪಳರವರಿಗೆ ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಮುತ್ಸದ್ದಿಗಳು ಹಾಗೂ ಹೆಬ್ಬಾಳ ಬೃಹನ್ಮಠದ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.