Breaking News

ಲೋಕಕಲ್ಯಾಣಕ್ಕಾಗಿ ಮೌನಾನುಷ್ಟಾನ ಮಹಾಮಂಗಲ ಕಾರ್ಯಕ್ರಮ: ಕಲ್ಮಠ ಶ್ರೀ

Maunanushtana Mahamangala program for public welfare: Kalmath Shri

ಜಾಹೀರಾತು

ಮಾನ್ವಿ: ಪಟ್ಟಣದ ಬೆಟ್ಟದ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಲೋಕಕಲ್ಯಾಣಕ್ಕಾಗಿ ಹಾಗೂ ಧಾರ್ಮ ಜಾಗೃತಿಗಾಗಿ ಮಾನ್ವಿಯ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳು ಹಮ್ಮಿಕೊಂಡ ಮೌನಾನುಷ್ಟಾನ ಮಹಾಮಂಗಲ ಕಾರ್ಯಕ್ರಮದಲ್ಲಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳು ಆರ್ಶಿವಾಚನ ನೀಡಿ ಜಗತ್ತಿನ ಅದಿ ಮತ್ತು ಅಂತ್ಯದಲ್ಲಿ ಮೌನ ಇತ್ತು ಮೌನಾನುಷ್ಟನ ಸಾಧನೆಯಿಂದ ಮೋಕ್ಷವನ್ನು ಹೊಂದುವುದಕ್ಕೆ ಸಾಧ್ಯ. ನಮ್ಮ ದೇಹವು ಕೂಡ ಪಂಚಭೂತಗಳಿಂದ ಸೃಷ್ಟಿಯಾಗಿದೆ ನಮ್ಮದು ಎನ್ನಾದರು ಇದ್ದರೆ ಅದು ಈ ಕ್ಷಣಮಾತ್ರ ಮೌನಾನುಷ್ಟನದಿಂದ ಧ್ಯಾನವನ್ನು ಮಾಡಿದಾಗ ಈ ಕ್ಷಣದಲ್ಲಿ ನಮ್ಮನ್ನು ಕಾಡುವ ಕೋಪ,ಬೇಸರ,ಆಸೆಗಳನ್ನು ಹಾಗೂ ನಮ್ಮ ಅಂತರಂಗ ಹಾಗೂ ಬಹಿರಂಗಗಳೆರಡನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಮುಂದೆ ಸಾವು ಬಂದು ನಿಲ್ಲುವುದರೊಳ್ಳಗಾಗಿ ನಾವು ಈ ಕ್ಷಣವನ್ನು ಅರ್ಥಮಾಡಿಕೊಳ್ಳಬೇಕು ಬೆಟ್ಟದ ಮಲ್ಲಿಕಾರ್ಜುನ ಪ್ರದೇಶ ಅನೇಕ ಐತಿಹಾಸಿಕ ಮಹಾತ್ವವನ್ನು ಪಡೆದುಕೊಂಡಿರುವ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಲ್ಲಿ ನಿತ್ಯ ಪೂಜೆ ಅನುಷ್ಟಾನದೊಂದಿಗೆ ಕಳೆದ ೨೧ ದಿನಗಳಿಂದ ಲೋಕ ಕಲ್ಯಾಣಕ್ಕಾಗಿ ೨ಲಕ್ಷ ಜಪವನ್ನು ಮಾಡಲಾಗಿದೆ ಎಂದು ತಿಳಿಸಿದರು.
ಬೃಹನ್ಮಠ ನಿಲಗಲ್‌ನ ಶ್ರೀ ಡಾ.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು. ಕಾರ್ಯಕ್ರಮದಲ್ಲಿ ಅಡವಿ ಅಮರೇಶ್ವರ ಮಠದ ಶ್ರೀ ತೋಟಾಂದರ್ಯಮಹಾಸ್ವಾಮಿಗಳು , ಅರಳಹಳ್ಳಿಯ ಶ್ರೀ ಶರಣಬಸವ ದೇವರು ಸೇರಿದಂತೆ ವಿವಿಧ ಮಠಗಳ ಪೂಜ್ಯರು.ಮಾನ್ವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.