Walkathon for blood donation awareness at ESIC
ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಮಂಗಳವಾರ ರಾಜಾಜಿನಗರದ ಇಎಸ್‌ಐಸಿ ವೈದ್ಯಕೀಯ ಕಾಲೇಜು ಮತ್ತು ಮಾದರಿ ಆಸ್ಪತ್ರೆಯ ಟ್ರಾನ್ಸ್ ಪ್ಯೂಷನ್ ಮೆಡಿಸಿನ್ ವಿಭಾಗದ ವತಿಯಿಂದ ರಕ್ತದಾನ ಶಿಬಿರ, ರಕ್ತದಾನ ಜಾಗೃತಿ ನಾಟಕ ಪ್ರದರ್ಶನ, ವಾಕಥಾನ್ ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಧ್ಯಾ ಆರ್., ವೈದ್ಯಕಿಯ ಅಧೀಕ್ಷಕ ಡಾ.ಅಶೋಕ್ ಕುಮಾರ್ ಸಮಂತಾ, ಡೆಪ್ಯೂಟಿ ಮೆಡಿಕಲ್ ಸೂಪಿರಿಡೆಂಟ್ ಡಾ.ಯೋಗಾನಂದನ್, ಟ್ರಾನ್ಸ್ಪಿಷನ್ ಮೆಡಿಸಿನ್ ಮುಖ್ಯಸ್ಥ ಡಾ.ಷಣ್ಮುಗ ಪ್ರಿಯಾ, ಚರ್ಮರೋಗ ಮುಖ್ಯಸ್ಥ ಡಾ.ಗಿರೀಶ್, ಡಾ.ಶ್ರೀಲತಾ, ಡಾ.ಸುಚಿತ್ರ, ಡಾ.ಅಂಜುಜಾಯ್, ಡಾ.ರವಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.