Breaking News

ಗಂಗಾವತಿಯ ನೀಲಕಂಠೇಶ್ವರಕ್ಯಾಂಪಿನ ಹೌಸಿಂಗ್ ಬೋರ್ಡ್ಗಳ ಜಾಗೆಯ ಕಬಳಿಸುವ ಪ್ರಯತ್ನಕ್ಕೆ ಖಂಡನೆ: ಶಂಕರ ಐಲಿ

Gangavati’s Neelkantheswara Camp Housing Board’s attempt to grab space condemned: Shankar Ailey

ಜಾಹೀರಾತು

ಗಂಗಾವತಿ: ಗಂಗಾವತಿ ನಗರದ ೨೫ನೇ ವಾರ್ಡ್ ನೀಲಕಂಠೇಶ್ವರ ಕ್ಯಾಂಪ್‌ನಲ್ಲಿನ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯ ಸ.ನಂ. ೧೯೪, ೧೯೫ & ೧೯೬ ಹಾಗೂ ಇತರ ಹಿಸ್ಸಾಗಳಲ್ಲಿ ಮಾನ್ಯ ಲೋಕೋಪಯೋಗಿ ಇಲಾಖೆ ಗಂಗಾವತಿ ಇವರ ನಿರ್ವಹಣೆಯಲ್ಲಿ ೧೯ ವಸತಿ ಗೃಹಗಳು ಇದ್ದು, ಕೋಟ್ಯಾಂತರ ಸದರಿ ಕೋಟ್ಯಾಂತರ ರೂಪಾಯಿಯ ಮೌಲ್ಯಗಳ ಆಸ್ತಿಗಳನ್ನು ಕೆಲವೊಂದು ಖಾಸಗಿ ಪ್ರಭಾವಿ ವ್ಯಕ್ತಿಗಳು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ಹೊಂಚು ಹೂಡಿರುವುದನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ರಕ್ಷಣಾ ಸೇನೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾದ ಶಂಕರ ಐಲಿ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಹೌಸಿಂಗ್ ಬೊರ್ಡ್ ಜಾಗೆಯನ್ನು ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಆಗ್ರಹಿಸಿ ಸರ್ಕಾರಕ್ಕೆ ಹಾಗೂ ವಿವಿಧ ಇಲಾಖೆಗಳಿಗೆ ಪತ್ರ ಸಲ್ಲಿಸಿ ಮಾತನಾಡಿದರು. ಕರ್ನಾಟಕ ಹೌಸಿಂಗ್ ಬೋರ್ಡ್ನ ಗೃಹಗಳು ಶೀಥಿಲಗೊಂಡಿದ್ದು ಇನ್ನೂ ಕೆಲವು ಬಳಕೆಯಲ್ಲಿರುತ್ತವೆ. ಈಗಾಗಲೇ ಭೂಗಳ್ಳರು ಗಂಗಾವತಿ ನ್ಯಾಯಾಲಯದಲ್ಲಿ ತಮ್ಮ ಹೆಸರಿನಲ್ಲಿ ಧಾವೆ ಹಾಕಿಸಿಕೊಂಡು ಇತರ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಆಸ್ತಿಯನ್ನು ಲಪಟಾಯಿಸಲು ಸಂಚು ಮಾಡಿರುತ್ತಾರೆ. ಸದರಿ ನ್ಯಾಯಾಲಯವು ಅವರ ಧಾವೆಯನ್ನು ತಿರಸ್ಕರಿಸಿದ್ದರೂ, ಸದರಿ ಪ್ರಭಾವಿ ಖಾಸಗಿ ವ್ಯಕ್ತಿಗಳು ಮುಂದಿನ ಘನ ನ್ಯಾಯಾಲಯಕ್ಕೆ ಮೊರೆ ಹೊಗಲು ಸಿದ್ಧರಿರುತ್ತಾರೆ. ಕಾರಣ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಗಳನ್ನು ಕಬಳಿಸಲು ಹೊಂಚು ಹಾಕಿ ಸಂಚು ರೂಪಿಸಿರುವ ಇಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಸದರಿ ೧೯ ಲೋಕೋಪಯೋಗಿ ಇಲಾಖೆಯ ನಿರ್ವಹಣೆ ವಸತಿ ಗೃಹಗಳನ್ನು ಅಭಿವೃದ್ಧಿಗೊಳಿಸಿ ಸರ್ಕಾರದ ಅಧೀನದಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಕುಳಗಳು ಸಂಚು ರೂಪಿಸಿ ಸರ್ಕಾರಿ ಆಸ್ತಿಗಳನ್ನು ಕಬಳಿಸಿಕೊಳ್ಳಲಿದ್ದಾರೆ. ಇನ್ನೂ ಕೆಲವು ಖಾಸಗಿ ವ್ಯಕ್ತಿಗಳು ಕರ್ನಾಟಕ ಗೃಹ ಮಂಡಳಿ ನಿಗಮದ ಬೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ೧೯೯೭- ೯೮ನೇ ಸಾಲಿನಲ್ಲಿ ಪುರಸಭೆ ಗಂಗಾವತಿಯಲ್ಲಿ ನೇರ ನೋಂದಣಿ ಮಾಡಿಸಿಕೊಂಡು ತಮ್ಮ ಮನಬಂದAತೆ ನಕಾಶೆಯನ್ನು ರೂಪಿಸಿಕೊಂಡು ಬೃಹತ್ತಾಕಾರದ ವಾಣಿಜ್ಯ/ವಸತಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಸದರಿಯವರು ನಿರ್ಮಿಸಿಕೊಂಡಿರುವ ಕಟ್ಟಡಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸಿ, ಸ್ಥಳ ಪರಿಶೀಲನೆ ಮಾಡಿಸಿ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಲು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರಾದ ಚಂದ್ರಪ್ಪ ಐಲಿ, ಬಸವರಾಜ ಐಲಿ, ವೆಂಕಟೇಶ ಡಿ.ಎನ್., ಮಹೆಬೂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.