Breaking News

ಪ್ರತಿ‌ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡಬೇಕು-ಸೋಮನಗೌಡ ಬಾದರ್ಲಿ

Every child should be given education along with rites – Somanagowda Batherli

ಜಾಹೀರಾತು


ಸಿಂಧನೂರು : ಪ್ರತಿ‌ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡಬೇಕು .ಸಂಸ್ಕಾರ ಇಲ್ಲದ ಶಿಕ್ಷಣ ವ್ಯರ್ಥ ಎಂದು ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಹೇಳಿದರು.
ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆ – ಶ್ರೀ ಗುರು ಮಹಾ ಸಂಗಮ ‌ತಾಲೂಕಿನ ಅತ್ಯುತ್ತಮ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಉದ್ಘಾಟಿಸಿ ನುಡಿಗಳನ್ನು ಹಂಚಿಕೊಂಡ ಅವರು ಸರ್ಕಾರಿ ಶಾಲೆಗಳು ಬೆಳೆಯಬೇಕು,ಖಾಸಗಿ ಶಾಲೆಗಳು ಉಳಿಯಬೇಕು.ಪ್ರತಿ ಮಕ್ಕಳು ಶಾಲೆಗೆ ಹೋಗುವ ಪೂರ್ವದಲ್ಲಿ ತಂದೆ – ತಾಯಿ,ಹಿರಿಯರಿಗೆ ನಮಸ್ಕರಿಸಿ ಹೋಗಬೇಕು ಎಂಬ ಸಂಸ್ಕಾರ ಬೆಳೆಸಬೇಕು .ಯಾಕೆಂದರೆ ಶಾಲೆ ಕಲಿತ ನಾವೆಲ್ಲಾ ಬೆಳೆದು ದೊಡ್ಡವರಾಗಿ ತಂದೆ ತಾಯಿಯರನ್ನು ವೃದ್ದಾಶ್ರಮಗಳಲ್ಲಿ ಬಿಡುತ್ತಿರುವುದು ದುರ್ದೈವ ಎಂದರು.
ಪ್ರಾಸ್ತಾವಿಕ ವಾಗಿ ವೆಂಕಟೇಶ ರಾಗಲಪರ್ವಿ ಮಾತನಾಡಿ ಅಯ್ಯಮ್ಮ ಭೀಮನಗೌಡ ಬಾದರ್ಲಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬಸನಗೌಡ ಬಾದರ್ಲಿ ಪೌಂಡೇಶನ್ ಸಹಯೋಗದಲ್ಲಿ ಹಲವು ಕಾರ್ಯಕ್ರಮಗಳನ್ನು ,ಸಾಮಾಜಿಕ ಸೇವೆ ಮಾಡುತ್ತಾ ಬಂದಿದ್ದಾರೆ.ರಕ್ತ ಭಂಡಾರ, ಆರೋಗ್ಯ ತಪಾಸಣೆ,ನಿರುದ್ಯೋಗ ಯುವಕರಿಗೆ ಉದ್ಯೋಗ ಶಿಬಿರ,ಸತತ 20 ವರ್ಷಗಳ ಕಾಲ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಹೋಗುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ,ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ,ಕಿಟ್ ,ಸೇರಿದಂತೆ ಹಲವು ಸೌಲಭ್ಯ ಗಳನ್ನ ಒದಗಿಸಿಕೊಟ್ಟಿದ್ದಾರೆ ಒಳಬಳ್ಳಾರಿ ಯಲ್ಲಿ ಸಾಮೂಹಿಕ ವಿವಾಹಗಳನ್ನು,ಪ್ರತಿಭಾನ್ವೇಷಣೆ ,ಕೊರೊನಾ ದಲ್ಲಿ ಪಾಲಕರನ್ನು ಕಳೆದುಕೊಂಡ ತಬ್ಬಲಿ ಮಕ್ಕಳಿಗೆ ತಲಾ 25 ಸಾವಿರ ರೂ ಎಫ್ ಡಿ‌ ಮಾಡಲಾಗಿದೆ. ಮತ್ತು ಪ್ರಸ್ತುತ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಿನ ಜನ ಬಯಸಿ ಬಂದರೆ ಸಹಾಯ ಮಾಡುವಂತಹ ಕೆಲಸ ಮಾಡುತ್ತಿದ್ದಾರೆಂದರು.ವೇದಿಕೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ 138 ಶಿಕ್ಷಕರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿ ,ಬ್ಯಾಗ್ ಗಳನ್ನು ವಿತರಿಸಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ಯನ್ನು ಶಾಸಕರು ವಿಧಾನ ಪರಿಷತ್ ಬಸನಗೌಡ ಬಾದರ್ಲಿ ವಹಿಸಿದ್ದರು ಮತ್ತು ಮುಖ್ಯ ಅತಿಥಿಯಾಗಿ ಉಪನ್ಯಾಸವನ್ನು ಸಾಹಿತಿ ಪ್ರೊ.ಸಿದ್ದು ಯಾಪಲಪರ್ವಿ ತಿಳಿಸಿದರು.
ನಂತರ ಕ್ಷೇತ್ರ ಸಮನ್ವಯಾಧಿಕಾರಿ ಬಸಲಿಂಗಪ್ಪ ಮಾತನಾಡಿ ಗುರುವಿನ ಗುಲಾಮನಾಗುವತನ ದೊರೆಯದ ಮುಕುತಿ ಎಂದಿದ್ದಾರೆ .ಒಂದು ದೇಶದ ಏಳಿಗೆ ಆ ದೇಶದ ಶಾಲಾ ಕೊಠಡಿ ಗಳಲ್ಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ತಾಲೂಕು ಸರ್ಕಾರಿ‌ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ವಾಯ್.ನರೇಂದ್ರ ನಾಥ,ವಿರೇಶ ಅಗ್ನಿ ವೆಂಕನಗೌಡ ವಟಗಲ್,ಶಿವಕುಮಾರ ಜವಳಿ,ಪ್ರಭುಲಿಂಗ ಗದ್ದಿ,ಜಗದೀಶ ಕಲ್ಮಂಗಿ, ಮಲ್ಲಪ್ಪ ಗೋನ್ವಾರ, ಗಂಗನಗೌಡ,ರವೀಂದ್ರ ಗೌಡ,ಬಸವರಾಜ ಅಂಗಡಿ,ನಯಿಮ್ ಪಾಷಾ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.