4th Remembrance of Rajur Panchakshara Swami : Monthly Shivanubhava

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಜಿಲ್ಲೆಯ ಕುಕನೂರು ತಾಲೂಕಿನ ರಾಜೂರ ಶರಣಬಸವೇಶ್ವರ ಸುಕ್ಷೇತ್ರದ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ 4ನೇ ವರಾಷದ ಪುಣ್ಯಸ್ಮರಣೋತಾಸವ ಹಾಗೂ ಪಂಚಾಕ್ಷರ ಬೆಳಕು 48ನೇ ಮಾಸಿಕ ಶಿವಾನುಭವ ಕಾರ್ಯಕ್ರಮಗಳು ದಿ.02,10.2024ರಂದು ನಡೆಯಲಿವೆ.
ಕಾರ್ಯಕ್ರಮದಂದು ಬೆಳಗ್ಗೆ 6 ಗಂಟೆಗೆ ಪಂಚಾಕ್ಷರ ಮಹಾಸ್ವಾಮಿಗಳ ಕರ್ತೃಗದ್ದುಗೆಗೆ ವಿಷೇಶ ರುದ್ರಾಭಿಷೇಕ ನಂತರ ಬೆಳಗ್ಗೆ 9ಗಂಟೆಗೆ ಕುಂಭ ಕಳಸ ಸಕಲ ವಾಧ್ಯಗಳೊಂದಿಗೆ ಪೂಜ್ಯರ ಭಾವ ಚಿತ್ರ ಮೆರವಣಿಗೆ ನಡೆಯುವುದು.
11-20ಕ್ಕೆ ಪೂಜ್ಯರ ಪುಣ್ಯ ಸ್ಮರಣೆ ಹಾಗೂ 48 ನೇ ಶಿವಾನುಭವ ಮತ್ತು
ಧರ್ಮ ಸಭೆ ಜರುಗುವುದು.
ಧರ್ಮ ಸಭೆಯ ಸಾನಿಧ್ಯವನ್ನು ಯಲಬುರ್ಗಾ ಶ್ರೀಧರ ಮುರುಡಿ ಮಠದ ಬಸವಲಿಂಗೇಶ್ವರ ಸ್ವಾಮಿಗಳು ವಹಿಸುವರು.
ಅಧ್ಯಕ್ಷತೆಯನ್ನು ಬೃಹನ್ಮಠ ಅಡ್ನೂರ-ರಾಜೂರ-ಗದಗನ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ವಹಿಸುವರು.
ಕಾರ್ಯಕ್ರಮದ ಸಮ್ಮುಖವನ್ನು ಗುಳೇದಗುಡ್ಡದ ಅಮರೇಶ್ವರ ಬೃಹನ್ಮಠ ಕೋಟಿಕಲ್ಲು ಡಾ.ನೀಲಕಂಠ ಮಹಿಸ್ವಾಮಿಗಳು ಹಾಗೂ ಗುಳೇದಗುಡ್ಡದ ಒಪ್ಪತ್ತೇಶ್ವರ ಮಹಾ ಸ್ವಾಮಿಗಳು ವಹಿಸುವರು.
ನೇತೃತ್ವವನ್ನು ಹರ್ಲಾಪೂರ ಅಭಿನವ ಕೊಟ್ಟೂರೇಶ್ವರ ಸ್ವಾಮಿಗಳು, ಎಸ್.ಎಚ್ ವೆಂಕಟಾಪೂರ,ಜಿಗೇರಿ, ಹೊಸೂರನ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಗದಗನ ವೀರೇಶ್ವರ ಪುಣಾಶ್ರಮದ
ಡಾ. ಕಲ್ಲಯ್ಯಜ್ಜನವರು ನೇತೃತ್ವ
ವಹಿಸುವರು.
ನಂತರ ಮಧ್ಯಾಹ್ನ 1ಗಂಟೆಗೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮಗಳು ನಡೆಯುವವು.
ವಿಶೇಷ ಸೂಚನೆ : ಭಕ್ತಾದಿಗಳೆಲ್ಲರೂ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿ ಪೂಜ್ಯರ ಶಿಲಾಮಂಟಪದ ಕಾರ್ಯ ನಡೆದಿದ್ದು ತನು-ಮನ-ಧನ ಸೇವೆಗೈದು ಲಿಂಗೈಕ್ಕೆ ಪೂಜ್ಯ ಪಂಚಾಕ್ಷರಪ್ಪವರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ರಾಜೂರ ಸಮಸ್ತ ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
