The protest of the village administrative officers will not back down from the strike until the demands are made
ಮಾನ್ವಿ :ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕಾ ಘಟಕದ ವತಿಯಿಂದ ಗುರುವಾರ ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಜಲ್ಲಿ ಹನುಮಂತಪ್ಪನಾಯಕ ಅವರು ಮಾತನಾಡಿ ಇತ್ತೀಚಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸರಕಾರದ ನಿಗದಿತ ನಿಯಮ ಸಮಯವನ್ನು ಮೀರಿ ಕರ್ತವ್ಯವನ್ನು ನಿರ್ವಹಿಸುವಂತೆ ಒತ್ತಡ ಹೇರಲಾಗುತ್ತಿದೆ. ಜೊತೆಗೆ ಈಗಾಗಲೆ ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಸಂಯೋಜನೆ, ಈ ಆಫಿಸ್, ಆದಾರ ಸೀಡ್, ಲ್ಯಾಂಡ್ ಬೀಟ್, ಬಗೈರ ಹುಕುಂ, ಹಕ್ಕು ಪತ್ರ ಸಮೂನೆ)-5ರ ವೆಬ್ ಅಪ್ಲಿಕೇಷನ್, ಪೌತಿ ಆಮದೋಲನಾ ಆಪ್. ಸಂರಕ್ಷಣೆ (ಬೆಳೆ ಕಟಾವು ಮೋಬೈಲ್ ಆಪ್) ಸಿ- ವಿಜಲ್, ನವೋದಯ, ಗೆರುಡ ಆಪ್. ಭೂಮಿ, ಎಲೆಕ್ಟ್ರ-ವೋಟರ್ ಹೇಲ್ ಲೈನ ಬೆಳೆ ಸಮೀಕ್ಷೆ, ಬೆಳೆ ಸಮೀಕ್ಷೆಯ ಅನುಮೋದನೆ ವೆಬ್ ಆಪ್, ಪಿ ಎನ್ ಕಿಸಾನ್, ವೆಬ್ ಆಪ್. ಕೃಷಿ ಗಣತಿ, ನಿರಾಮಂ ಗಣತಿ, ದೀಶಾಂಕ ಸೇರಿದಂತೆ ಸುಮಾರು 17 ಅಧಿಕ ಮೊಬೈಲ್/ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್ ಸಾಧನ, ಲ್ಯಾಪ್ ಟಾಪ್ ಅದಕ್ಕೆ ಅವಶ್ಯಕವಾಗಿರುವ ಇಂಟರ್ ನೆಟ್, ಸ್ಯಾನರ್ ಗಳನ್ನು ಒದಗಿಸಿಲ್ಲ. ಜತೆಗೆ ಸಾರ್ವಜನಿಕ ಸೇವೆ ಒದಗಿಸಲು ಗ್ರಾಮ ಆಡಳಿತ ಅಧಿಕಾರಿಗಳು ಕುಳಿತುಕೊಳ್ಳಲು ಒಂದು ಕೋಠಡಿಯ ವ್ಯವಸ್ಥೆಯೂ ಕೂಡ ಸರಕಾರದಿಂದ ನಮಗೆ ಒದಗಿಸಿರುವುದಿಲ್ಲಿ ಹೀಗಿರುವಾಗ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಾವು ನೋವುಗಳು ಸಂಭವಿಸುತ್ತಿವೆ ಮಾತ್ರವಲ್ಲದೇ ನಿರಂತರವಾಗಿ ಮಾರಣಾಂತಿಕ ಹಲ್ಲೆ ನಡೆಯುತ್ತಿರುವ ಘಟನೆಗಳು ನಡೆದು ಹೋಗಿವೆ. ಇಂತಹ ಸಂದರ್ಭದಲ್ಲಿ ಸರಕಾರ ನಮಗೆ ಗೆ ಯಾವೂದೇ ಶಸ್ತ್ರಾಸ್ತ್ರವಿಲ್ಲದೇ ಯುದ್ಧಕ್ಕೆ ಹೋಗು ಎಂದು ಹೇಳುತ್ತಿದೆ ಅದು ಹೇಗೆ ಸಾಧ್ಯ ಎಂಬುದನ್ನು ಸರಕಾರ ಅರ್ಥೈಸಿಕೊಳ್ಳಬೇಕಿದೆ. ಎಲ್ಲ ಮೊಬೈಲ್ ಅಪ್‌ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರಒತ್ತಡ ಹೇರುತ್ತಿರುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗುತ್ತಿವೆ. ಇದರೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರಕಾರದಿಂದ ಸುಸಜ್ಜಿತ ಕಚೇರಿ ಜತೆಗೆ ಉತ್ತಮ ಗುಣಮಟ್ಟ ಟೆಬಲ್ ಕುರ್ಚಿ ಅಲ್ಮೇರಾ, ಅತ್ಯುತ್ತಮ ಗುಣಮಟ್ಟ ಮೊಬೈಲ್ ಫೋನ್ ಸಿಯುಜಿ ಸಿಮ್ ಮತ್ತು ಡೆಟಾ,ಗೂಗಲ್ ಕ್ರೋಮ್ ಬುಕ್ ಉಳ್ಳ ಲ್ಯಾಪ್ ಟ್ರಾಪ್, ಪ್ರಿಂಟರ್ ಮತ್ತು ಸ್ಕ್ಯಾನರ ಸೇರಿದಂತೆ ಮೂಲ ಸೌಲಭ್ಯಗಳು ಹಾಗೂ ಸೇವಾ ನಿಯಮಗಳಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಸರ್ಕರ ಕೂಡಲೇ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್‌ಗಳಾದ ವಿನಾಯಕ್ ರಾವ್,ವಿರುಪಣ್ಣ, ವಾಸವಿ,ಪ್ರಾ.ಶಾ.ಶಿ.ಸಂಘದ ತಾ.ಅಧ್ಯಕ್ಷರಾದ ಸಂಗಮೇಶ ಮುಧೋಳ್ ,ಹನುಮಂತರಾವ್ ಬೆಂಬಲ ನೀಡಿದರು.
ತಾ.ಪ್ರ.ಕಾರ್ಯದರ್ಶಿ ಅಮರೇಶ ನೀರಮಾನ್ವಿ. ಸದಸ್ಯರಾದ ಮಹಮ್ಮದ್ ಅಬ್ದುಲ್ ಗಫೂರ್ ಸಾಬ್, ಮೌನೇಶ, ಸುಶೀಲಾ, ರಾಧ, ಶ್ವೇತ, ಸಿಂಧೂ, ಕುಸುಮ ,ಶ್ರೀಕಾಂತ, ಅಶೋಕ , ರಮೇಶ, ಯಲ್ಲಪ್ಪ, ಸೋಯಬ್, ಸೇರಿದಂತೆ ಗ್ರಾಮ ಸಹಾಯಕರು ಇನ್ನಿತರರು ಇದ್ದರು.