Shastricamp school compound urged to take action against contractors for poor work.

ಮಾನವಿ: ಶಾಸ್ತ್ರಿಕ್ಯಾಂಪ್ ಶಾಲೆಯ ಕಪೌಂಡ್ ಕಳಪೆ ಕಾಮಗಾರಿ ಮಾಡುತಿರುವ ನರೇಗಾ ಅಡಿಯಲ್ಲಿ ನಿರ್ಮಾಣ ಮಾಡುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಕಾರ್ಯನಿರ್ವಾಹಕ ಅಧಿಕಾರಿ ಖಾಲೀದ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತಿ ವ್ಯಪ್ತಿಗೆ ಬರುವ ಶಾಸ್ತ್ರಿಕ್ಯಾಂಪ್ ಪ್ರಾಥಮಿಕ ಶಾಲೆಯ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಾಣ ಗೊಳ್ಳುತ್ತೀರುವ ಕಪೌಂಡ್ ಕಾಮಗಾರಿಯನ್ನು ಹೀಗಾಲೇ ಕಳಪೆ ಎಂದು ಊರಿನ ಯುವಕರು, ಗ್ರಾಮಸ್ಥರು ಸಾಬೀತು ಪಡಿಸಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ, ಹಾಗೂ ಸಂಬಂಧ ಪಟ್ಟ ಅಧಿಕಾರಿಗೆ ತಿಳಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವದಿಲ್ಲ ಅದ್ದರಿಂದ ಈ ಶಾಲೆಯಲ್ಲಿ ಓದುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಯಾವದೇ ಅನಾಹುತ ಸಂಭವಿಸಿದರೆ ಮೂಲ ಕಾರಣ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಟೆಕ್ನಿಕಲ್ ಅಸಿಸ್ಟೆಂಟ್,ಇತರರು ಜವಾಬ್ದಾರಿಗಳು ಆಗುತ್ತಾರೆ ಅದ್ದರಿಂದ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕಾಮಗಾರಿಯನ್ನು ನಿಲ್ಲಿಸಿ ಬೇರೆ ಅವರಿಗೆ ನೀಡಬೇಕು ಒಂದು ವೇಳೆ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಗ್ರಾಮಸ್ಥರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕೃಷ್ಣ ಎಸ್ ಡಿ ಎಮ್ ಸಿ ಅಧ್ಯಕ್ಷ, ವೆಂಕಟೇಶ, ಜಯರಾಮ, ದೇವಣ್ಣ, ಜಲಾಲ್ ,ಶರಣ ಗ್ರಾಮಸ್ಥರು ಇದ್ದರು.
Kalyanasiri Kannada News Live 24×7 | News Karnataka
