Breaking News

ಮೂಲಭೂತಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಗ್ರಾಮಆಡಳಿತ ಅಧಿಕಾರಿಗಳಿಂದಅನಿರ್ಧಿರ್ಷ್ಟಾವಧಿ ಮುಷ್ಕರ

Indefinite strike by village administration officials demanding provision of basic facilities.

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ರಾಜ್ಯ ಸರಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅವಶ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಕೂಡಲೇ ಒದಗಿಸಲು ಮುಂದಾಗಬೇಕು ಎಂದು ಕುಕನೂರು ತಾಲೂಕ ಬಳಗೇರಿ ಗ್ರಾಮ ಆಡಳಿತಾಧಿಕಾರಿ ರಾಣಿ ಹಳ್ಳಿ ಆಗ್ರಹಿಸಿದರು.

ಅವರು ಕುಕನೂರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ
ಸೆ.26ರಿಂದ ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯವ್ಯಾಪಿ ಹಮ್ಮಿಕೊಂಡ ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ ಮಾತನಾಡಿ ನಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿದ್ದಲ್ಲಿ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರದಲ್ಲಿ ಸಂಘದ ತಾಲೂಕಾಧ್ಯಕ್ಷ ಸುರೇಶ ಕ್ಯಾದಗುಂಪಿ ಮಾತನಾಡಿ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಬೆಂಗಳೂರು ಇವರ ನಿರ್ದೇಶನದಂತೆ ಸೆ.26 ರಿಂದ ಕರ್ತವ್ಯಕ್ಕೆ ಸಂಬಂಧಿದಂತೆ ಎಲ್ಲಾ ಬಗೆಯ ಮೊಬೈಲ್ ಯ್ಯಾಪ್, ವೆಬ್ ಅಪ್ಲಿಕೇಷನ್ ಸ್ಥಗೀತ, ಲೇಖನಿ ಸ್ಥಗಿತಗೊಳಿಸಿ ಬೇಡಿಕೆ ಈಡೇರುವವರೆಗೂ ಮುಷ್ಕರ ಮಾಡಲಾಗುವುದು ಎಂದು ತಿಳಿಸಿದರು.

17 ಮೊಬೈಲ್ ಯ್ಯಾಪ್ ಮತ್ತು ಅಪ್ಲಿಕೇಷನ್ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ ಯ್ಯಾಪ್ ಗಳ ಬಳಕೆಗೆ ಲ್ಯಾಪ್ ಟಾಪ್, ಇಂಟರನೆಟ್ ಸೌಲಭ್ಯ ಸಹ ನೀಡಿಲ್ಲ, ಅಲ್ಲದೆ ಕಚೇರಿಯಲ್ಲಿ ಟೇಬಲ್, ಚೇರ್, ಪ್ರೀಂಟರ್, ಇಂಟರನೆಟ್ ಕನೇಕ್ಷನ್ ಗಳ ಮೂಲಭೂತ ಸೌಲಭ್ಯ ಸಹ ಕಲ್ಪಿಸಿಲ್ಲ ಇದರಿಂದ ಕೆಲಕ್ಕೆ ತುಂಬಾ ತೊಂದರೆಯುಟಾಗುತ್ತಿದೆ ಎಂದರು.

ಅಲ್ಲದೆ 30 ವರ್ಷದ ಸೇವಾವಧಿ ನಂತರ ಪದೋನ್ನತಿ ನೀಡುತ್ತಿದ್ದು, ನಿವೃತ್ತಿ ಅಂಚಿನಲ್ಲಿ ಪದೋನ್ನತಿ ನೀಡದೆ ಬೇಗ ನೀಡಬೇಕು. ಕೆಲಸದ ಅವಧಿಯ ಮೊದಲು ಹಾಗೂ ಕೆಲಸದ ನಂತರ ಅವಧಿಯಲ್ಲಿ ಎಲ್ಲಾ ಬಗೆಯ ವರ್ಚುವಲ್ ಸಭೆಗಳನ್ನು ನಿಷೇಧಿಸಬೇಕು ಹಾಗು ಇತರೆ ವಿವಿಧ ಬೇಡಿಕೆಗಳನ್ನು ಈಡೇರಿಸಿ ಸಾರ್ವಜನಿಕ ಹಾಗೂ ಸರಕಾರಿ ಕೆಲಸಗಳನ್ನು ನಿರ್ವಹಿಸಲು ಅನೂಕೂಲ ಕಲ್ಪಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ನಮ್ಮ ಮನವಿಯನ್ನು ತಹಶೀಲ್ದಾರ ಮೂಲಕ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಮಹೇಶಗೌಡ, ತಾಲೂಕ ಖಜಾಂಚಿ ವೀರಣ್ಣ ತೆಗ್ಗಿನಮನಿ, ಪ್ರಧಾನ ಕಾರ್ಯದರ್ಶಿ ಫೀರಸಾಬ ಲಕ್ಕುಂಡಿ, ಶರಣಪ್ಪ ಹಳ್ಳಿ, ಶರೀಫ್ ಸಾಬ, ಮಹಾಂತೇಶ, ಶಿಲ್ಪಾ, ಜಯಶ್ರೀ ಹಾಗೂ ಗ್ರಾಮ ಸಹಾಯಕ ವಾಲಿಕಾರ ಸಂಘದ ಅಧ್ಯಕ್ಷ ಮಹ್ಮದಸಾಬ ಕಕ್ಕಿಹಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ಸಿಬ್ಬಂದಿಯವರು ಹಾಜರಿದ್ದರು.

About Mallikarjun

Check Also

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಸ್ವಾಗತಾರ್ಹ: ಸಚಿವ ಬೋಸರಾಜು ಹರ್ಷ

Naming after Maharshi Valmiki for Raichur University is welcome: Minister Bosaraju Harsha ಬೆಂಗಳೂರು ಅಕ್ಟೋಬರ್‌ 17: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.