Breaking News

ಹೃದಯ ಜೋಪಾನ, ನೆಮ್ಮದಿ ಜೀವನಕ್ಕೆ ಸೋಪಾನ:ಡಾ.ಈಶ್ವರ ಸವಡಿ ಕರೆ

Heart health, step to a peaceful life: Dr. Iswara Savadi call

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ,26:ಸಪ್ಟೆಂಬರ್ 29 ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಇಂದು ಉಪವಿಭಾಗ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಡಾ.ಈಶ್ವರ ಸವಡಿ ಪ್ರತಿಯೊಬ್ಬರ ಹೃದಯ ದಿನದ 24 ಗಂಟೆಯೂ ನಿಯಮಿತವಾಗಿ ಬಡಿದುಕೊಳ್ಳುವುದೇ ಜೀವಂತಿಕೆಯ ಸೆಲೆ. ಅದು ನಿರಂತರ ಬಡಿದುಕೊಳ್ಳುತ್ತಿದ್ದರೆ ಜೀವನ. ಈ ಪುಟ್ಟ ಹೃದಯ ಪ್ರತಿಯೊಬ್ಬರ ಭಾವನೆಗಳ ಮೂಲವೂ ಆಗಿದೆ. ಅದಕ್ಕೆಂದೇ ಹೃದಯವಂತ ಎಂಬ ಪದ ಚಲಾವಣೆಯಲ್ಲಿದೆ. ಇಂಥ ಅಮೂಲ್ಯ ಹೃದಯವನ್ನು ಪ್ರತಿಯೊಬ್ಬರೂ ಸಂರಕ್ಷಣೆ ಮಾಡಿಟ್ಟುಕೊಳ್ಳಲೇಬೇಕು. ಹೃದಯದ ಕಾಳಜಿ ವಹಿಸಿ, ಅದುವೇ ಆರೋಗ್ಯದ ಗುಟ್ಟು ಎಂದು ಹೇಳಿದರು.

    ಗಂಗಾವತಿ ಸರ್ಕಾರಿ ಆಸ್ಪತ್ರೆಯ ಮುಖ್ಯ  ವೈದ್ಯಾಧಿಕಾರಿಗಳಾದ ಡಾ.ಈಶ್ವರ ಸವಡಿ ಸೆ.29ರಂದು ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಉಪವಿಭಾಗ ಆಸ್ಪತ್ರೆ ,ಹಾಗೂ ಸ್ಪೂರ್ತಿ ಆಯುರ್ವೇದಿಕ ಮೆಡಿಕಲ್ ಕಾಲೇಜ್ ಮತ್ತು ಡಾ.ಎಸ್.ವಿ.ಸವಡಿ ಆಯುರ್ವೇದ ಆಸ್ಪತ್ರೆ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಹೃದಯ ಸಂಬಂಧಿ ಕಾಯಿಲೆ, ಅದಕ್ಕೆ ಕಾರಣ, ಚಿಕಿತ್ಸೆ, ಉತ್ತಮ ಆರೋಗ್ಯಕ್ಕಾಗಿ ಹೃದಯ ಸಂರಕ್ಷಣೆ ಎಷ್ಟು ಮಹತ್ವಎಂಬುದರ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಹೃದಯದ ಬಗ್ಗೆ ನಿಷ್ಕಾಳಜಿ ಬೇಡ, ಪುಟ್ಟ ಹೃದಯದ ಮಿಡಿತ ಚೆನ್ನಾಗಿರಬೇಕೆಂಬ ಸದುದ್ದೇಶದಿಂದಲೇ ಜಿನೇವಾದಲ್ಲಿರುವ ವಿಶ್ವ ಹಾರ್ಟ್‌ ಫೆಡರೇಶನ್‌ ಪ್ರತಿವರ್ಷ ಸೆ. 29 ರಂದು ಜಾಗತಿಕ ಮಟ್ಟದಲ್ಲಿ ವಿಶ್ವ ಹೃದಯ ದಿನವನ್ನಾಗಿ ಆಚರಿಸುತ್ತಿದೆ. ಆರಂಭಿಕ ವರ್ಷಗಳಲ್ಲಿ ಸೆಪ್ಟೆಂಬರ್‌ ತಿಂಗಳ 4ನೇ ಭಾನುವಾರ ವಿಶ್ವ ಹೃದಯದ ದಿನ ಆಚರಿಸಲಾಗುತ್ತಿತ್ತು. ವಿಶ್ವ ಹಾರ್ಟ್‌ ಫೆಡರೇಶನ್‌ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜತೆಗೂಡಿ ಸೆ.29ರಂದು ವಿಶ್ವ ಹೃದಯ ರೋಗ ದಿನಾಚರಣೆ ಮೂಲಕ ಜಗತ್ತಿನಾದ್ಯಂತ ಹೃದಯ ಸಂಬಂಧಿ ರೋಗಗಳ ವಿರುದ್ಧ ಹೋರಾಡುವುದು ಮತ್ತು ಅವುಗಳು ಬಾರದಂತೆ ತಡೆದು ಹೃದಯವನ್ನು ಆರೋಗ್ಯವಾಗಿಡುವುದು ಈ ದಿನಾಚರಣೆಯ ಮೂಲ ಉದ್ದೇಶವಾಗಿದೆ ಎಂದು ಆಯುಷ್‌ ಡಾ.ಈಶ್ವರ ಸವಡಿ ವಿವರಿಸಿದರು.

ಈ ಸಂದರ್ಭದಲ್ಲಿ  ಡಾ.ಶರಣಪ್ಪ ಚಕ್ಕೊಟಿ, ಡಾ.ಅಭಿದ್, ಡಾ.ಖಲೀದರ್, ಡಾ.ನವೀನ್, ಆರೋಗ್ಯ ಸಿಬ್ಬಂದಿಗಳಾದ ಶಿವಾನಂದ ನಾಯ್ಕರ್, ರಾಜು, ಶ್ಯಾಮುವೆಲ್ ಸೇರಿದಂತೆ ಇತರರು ಇದ್ದರು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *