Breaking News

ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿದ ಶಿಬಿರ ಕಾನಾಮಡುಗು ಐಮುಡಿ ಶ್ರೀಗಳು

Camp Kanamadugu Aimudi Mr. gave new light to Bali which was in darkness

ಜಾಹೀರಾತು

ಕೂಡ್ಲಿಗಿ: ಹೆತ್ತವರನ್ನು ರಕ್ಷಣೆ ಮಾಡುವುದು ಮಕ್ಕಳ ಧರ್ಮ, ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಧರ್ಮ, ಭಕ್ತರ ರಕ್ಷಣೆ ಮಾಡುವುದು ಗುರುಗಳ ಧರ್ಮ, ಆದರೆ ಬಡವರ, ದೀನ ದಲಿತರ ಹಾಗೂ ಇಂತಹ ಕುಡುಕರನ್ನು ಸರಿದಾರಿಗೆ ತರುವ ಕೆಲಸ ಮಾಡುವುದಿದ್ದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿಂದ ಮಾತ್ರ ಸಾಧ್ಯ ಎಂದು ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ಶ್ರೀ ಐಮುಡಿ ಶರಣಾರ್ಯ ಮಹಾಸ್ವಾಮಿ ಹೇಳಿದರು.

ಕೂಡ್ಲಿಗಿ ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೂಡ್ಲಿಗಿ ಇವರಿಂದ ಆಯೋಜಿಸಿದ್ದ 1853ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಇಡೀ ಕುಟುಂಬವನ್ನು ಬೆಳಗಿಸಿದ ಈ ಮದ್ಯವರ್ಜನ ಶಿಬಿರವು ಸಮಾಜಕ್ಕೆ ಮಾದರಿ ಮತ್ತು ಆದರ್ಶಪ್ರಾಯವಾಗಿದೆ ಎಂದು ಅವರು ಆಶೀರ್ವಚನ ನೀಡಿದರು.

ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮತನಾಡಿ, ಕುಡಿತದಿಂದ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಆರೋಗ್ಯ, ದುಡ್ಡು, ಸಮಾಜ ಹಾಗೂ ನಿಮ್ಮ ಕುಟುಂಬವೇ ಹಾಳಾಗಿ ನೀವು ಬೀದಿಗೆ ಬರುತ್ತೀರಿ. ಈ ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಿ, ಸಮಾಜದಲ್ಲಿರುವ ಪ್ರತಿಯೊಬ್ಬನಿಗೂ ಸಂಸ್ಕಾರ ಕೊಡುವ ಕಾರ್ಯ ನಡೆಯಬೇಕು. ಒಬ್ಬ ವ್ಯಕ್ತಿಯನ್ನು ಪರಿವರ್ತನೆ ಮಾಡಿ ಸಂಸ್ಕಾರ ಕೊಡುವ ಕಾರ್ಯಶ್ರೇಷ್ಠ ಹಾಗೂ ಪುಣ್ಯದ ಕಾರ್ಯ. ಇಂತಹ ಶಿಬಿರಗಳು ಸಮಾಜಕ್ಕೆ ಮಾದರಿ ಎಂದು ಹೇಳಿದರು.

ಉಪ ತಹಶೀಲ್ದಾರ್ ನೇತ್ರಾವತಿ ಮಾತನಾಡಿ, ಡಾ| ಡಿ. ವಿರೇಂದ್ರ ಹೆಗ್ಗಡೆ, ಅನೇಕ ಸಮಾಜಮುಖಿ ಕೆಲಸ ಕಾರ್ಯಗಳಂತೆ ಮಾರ್ಗದರ್ಶನದ ಮದ್ಯವರ್ಜನ ಶಿಬಿರವು ಅನೇಕ ಜನರ ಜೀವನವನ್ನು ಉತ್ತಮ ಕೌಶಲ್ಯಯುತ ಜೀವನವನ್ನಾಗಿ ರೂಪಿಸಿದೆ. ಅವರ ಉತ್ತಮ ಕಾರ್ಯಗಳಿಂದ ಜನಜೀವನ ಸ್ವರ್ಗಸದೃಶವಾಗಿದೆ. ಮದ್ಯ ಮುಕ್ತರಿಗೆ ಸಮಾಜದಲ್ಲಿ ಒಂದು ಗೌರವವಿದೆ. ದುಶ್ಚಟಗಳಿಂದ ದೂರವಾದಾಗ ಮಾತ್ರ ಕುಟುಂಬ, ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯ ಎಂದು ಹೇಳಿದರು.

ಈ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕುಪ್ಪಿನಕೆರೆ ಬಣಕಾರ್ ವೀರಣ್ಣ ಮಾತನಾಡಿ, ಶಿಬಿರದ ಆರಂಭದಲ್ಲಿ ದುರ್ವರ್ತನೆ ತೋರಿದವರು ಶಿಬಿರದ ಅಂತ್ಯದಲ್ಲಿ ಪರಿವರ್ತನೆಯಾಗುವ ಮೂಲಕ ಇಡೀ ಕುಟುಂಬ ಪರಿವರ್ತನೆಯಾದ ಸಂತ್ರಪ್ತ ಭಾವನೆ ಎಲ್ಲರಲ್ಲೂ ಇದೆ ಎಂದು ಹೇಳಿದರು.

ಶಿಬಿರಾಧಿಕಾರಿ ನಾಗೇಶ್ ವೈ.ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು, ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಕ್ಷೇತ್ರದ ಹಿನ್ನೆಲೆ ಮತ್ತು ಶಿಬಿರದ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಈ ಶಿಬಿರದಲ್ಲಿ ಭಾಗವಹಿಸಿದ 93 ಶಿಬಿರಾರ್ಥಿಗಳು ತಮ್ಮ ತಮ್ಮ ನೋವುಗಳನ್ನು ಹೇಳಿಕೊಂಡು, ಮದ್ಯವ್ಯಸನವನ್ನು ತ್ಯಜಿಸುವುದಾಗಿ ಪ್ರಮಾಣ ಮಾಡಿದ್ದಾರೆ. ಈ ಶಿಬಿರವು 8 ದಿನಗಳ ನಡೆದು ಇಂದು ಮುಕ್ತಾಯ ಕಂಡಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಕಾವಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ,ಪಪಂ ಮುಖ್ಯಾಧಿಕಾರಿ ಎಂ.ಕೆ.ಮುಗುಳಿ,ಜನಜಾಗೃತಿ ವೇದಿಕೆಯ ಸಿದ್ದೇಶ್, ಗುಂಡಪ್ಪ, ಹಡಗಲಿ ವೀರಭದ್ರಪ್ಪ, ಎಲ್ ಪವಿತ್ರ, ಕೊಟ್ಟೂರಿನ ಯೋಗೇಶ್ವರ್, ಕೂಡ್ಲಿಗಿ ಯೋಜನಾಧಿಕಾರಿ ಸಂತೋಷ್ ಕುಮಾರ್,ಶಿಬಿರಾಧಿಕಾರಿ ದಿನೇಶ್, ಆರೋಗ್ಯ ಸಹಾಯಕಿ ರಂಚಿತಾ,ಮೇಲ್ವಿಚಾರಕ ಸಚ್ಚಿನ್, ಸೇರಿದಂತೆ ಕಚೇರಿಯ ಎಲ್ಲಾ ಮೇಲ್ವಿಚಾರಕರು, ಸಿಬ್ಬಂದಿ ವರ್ಗದವರು,ಸೇವಾ ಪ್ರತಿನಿಧಿಗಳು, ಅನೇಕ ಮುಖಂಡರು ಉಪಸ್ಥಿತರಿದ್ದರು.

About Mallikarjun

Check Also

ಪ್ರವಾಸೋದ್ಯಮ ದಿನಾಚರಣೆಕಾರ್ಯಕ್ರಮಕ್ಕೆಸಚಿವರಿಂದಚಾಲನೆ

Conducted by the Minister for the Tourism Day programme ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಅಪಾರ: ಎನ್.ಎಸ್.ಭೋಸರಾಜು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.