Massive protest by State Farmers Association, Green Sena on 24th September.
ಕೊಪ್ಪಳ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಕರ್ನಾಟಕ ರೈತ ಸಂಘ ಹಸಿರು ಸೇನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ದಿ. 24ರ ಮಂಗಳವಾರ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟ ಅವಧಿ ಧರಣಿ ಮಾಡಲಾಗುವುದು ಎಂದು ಕರ್ನಾಟಕ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು ಸೆ.24 ರಂದು ಮಂಗಳವಾರ ಕುಕನೂರ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದಿಂದ ಕೋಳಿ ಪೇಟೆ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಮಹಾಮಾಯಾ ತೇರಿನಗಡ್ಡಿ ವೃತ್ತದಿಂದ ಮತ್ತು ವೀರಭದ್ರಪ್ಪ ವೃತ್ತದಿಂದ ಅಂಬೇಡ್ಕರ್ ವೃತ್ತ ಮಾರ್ಗವಾಗಿ ಮತ್ತೆ ವೀರಭದ್ರಪ್ಪ ವೃತ್ತದ ಮಾರ್ಗವಾಗಿ ಎಪಿಎಂಸಿ ಗೇಟ್ ಮುಂದೆ ಬೃಹಪ್ರತಿಬಟನೆ ಹಾಗೂ ಅನಿರ್ದಿಷ್ಟವಧಿ ಧರಣಿ ಮಾಡಲಾಗುವುದು.
ಈ ಪ್ರತಿಭಟನೆ ಧರಣಿಯಲ್ಲಿ ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷರಾದ ವಿ.ಆರ್. ನಾರಾಯಣ ರೆಡ್ಡಿಯವರ ನೇತೃತ್ವದಲ್ಲಿ ಪ್ರತಿಭಟನೆ ಧರಣಿ ಮಾಡಲಾಗುವುದು.
ಈ ಪ್ರತಿಭಟನೆ ರೈತರಿಗೆ ಆಗುವ ಅನ್ಯಾಯ ಹಾಗೂ ವರ್ತಕರ ಅಕ್ರಮ ದಂಧೆ ವಿರುದ್ಧ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಜೀರಸಾಬ ತಳಕಲ್ ಮಾತನಾಡಿ ನಮ್ಮ ಬೇಡಿಕೆ ಈಡೇರಿಸುವವರೆಗೆ ನಮ್ಮ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿ ಯಾವುದೇ ಕಾರಣಕ್ಕೂ ಬಿಡುವ ಮಾತೇ ಇಲ್ಲಾ ಎಂದರು.
ಬೇಡಿಕೆಗಳು :
ಎಪಿಎಂಸಿ ಪ್ರಾಂಗಣದಲ್ಲಿಯೇ ಟೆಂಡರ್ ಮಾಡಬೇಕು,
ಪ್ಲಾಸ್ಟಿಕ್ ಚೀಲ ಬಿಟ್ಟು ಕಾಟನ್ ಚೀಲದಲ್ಲಿ ತೂಕ ಮಾಡಬೇಕು.
ಎಪಿಎಂಸಿ ಕಾನೂನು ಪ್ರಕಾರ ಬಾದನ್ನು ತೆಗೆದುಕೊಳ್ಳಬಾರದು.
ಎಪಿಎಂಸಿ ಹೊರಗಡೆ ವ್ಯಾಪಾರ ಬಂದ್ ಮಾಡಬೇಕು.
ರೈತರಿಂದ ಹಮಾಲರು ಒತ್ತಡ ಹಾಕಿ ಯಾವುದೇ ದಾನ್ಯವನ್ನು ತೆಗೆದುಕೊಳ್ಳಬಾರದು.
ಎಪಿಎಂಸಿಯಲ್ಲಿ ಒಂದು ರೈತ ಭವನ ನಿರ್ಮಾಣ ಮಾಡಬೇಕು.
ದಿನಕ್ಕೆ ಸಾವಿರಾರು ಚೀಲ ಕಾಟ ಮಾಡಿ ಅಲ್ಪ ಸ್ವಲ್ಪ ಚೀಲದ ಟ್ಯಾಕ್ಸನ್ನು ಎಪಿಎಂಸಿಗೆ ಕಟ್ಟುತ್ತಾರೆ ಇದರಿಂದ ಸರ್ಕಾರಕ್ಕೆ ತುಂಬಾ ನಷ್ಟವಾಗುತ್ತದೆ ಇನ್ನೂ ಹಲವಾರು ಅಕ್ರಮ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.
ಸಂದರ್ಭದಲ್ಲಿ ರೈತರಾದ ಲಕ್ಷ್ಮಣ್ ಕೋರಿ, ಗವಿಸಿದ್ದಪ್ಪ ಮುದ್ದಾಬಳ್ಳಿ, ಬಸಪ್ಪ ಮಂಡಲಗಿರಿ, ಮಹದೇವಪ್ಪ ಕೌದಿ, ವೀರಯ್ಯ ಕಳ್ಳಿಮಠ, ಹುಚ್ಚಪ್ಪ ಸಣ್ಣ ನಿಂಗಣ್ಣವರ, ಹನುಮಪ್ಪ ಸುಣಗಾರ, ತಿಪ್ಪಣ್ಣ ಪೂಜಾರ, ಬಸವರಾಜ ನರಗುಂದ, ಬಸನಗೌಡ ಮುದ್ದಾಬಳ್ಳಿ, ಬಸಪ್ಪ ಹೊಂಬಳ, ಅನಿಲ ಹುದರತ್ತಿ, ಬರಮಪ್ಪ ಹಿರೇನಿಂಗಣ್ಣವರ ಇನ್ನೀತರ ರೈತ ಮುಖಂಡರು ಇದ್ದರು.