Auction process of confiscation of assets of non-tax payers.

ಕುಕನೂರು : ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಸತಿ, ವಾಣಿಜ್ಯ ಕೈಗಾರಿಕೆ ಹಾಗೂ ಇನ್ನಿತರೇ ಆಸ್ತಿ ತೆರಿಗೆ ಕಟ್ಟದೇ ಇರುವ ಆಸ್ತಿ ಮಾಲೀಕರ ಚರ ಸ್ವತ್ತುಗಳ ಜಪ್ತಿ, ಹಾಗೂ ಹರಾಜು ಪ್ರಕ್ರಿಯೇ ಕೈಗೊಂಡು ತೆರಿಗೆ ವಸೂಲಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ 1993ರ ಪ್ರಕರಣ 200ರನ್ವಯ ಜಿಲ್ಲಾ ಪಂಚಾಯತ್ ಕೊಪ್ಪಳ ಹಾಗೂ ತಾಲೂಕ ಪಂಚಾಯತ ಕುಕನೂರು ಹಾಗೂ ಗ್ರಾಮ ಪಂಚಾಯತಿಗಳು ಸೇರಿ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ತೆರಿಗೆ ಹಣ ಪಾವತಿ ಮಾಡದವರ ಆಸ್ತಿ ಮಾಲೀಕರ ಚರ ಸ್ವತ್ತುಗಳ ಜಪ್ತಿ, ಹಾಗೂ ಹರಾಜು ಪ್ರಕ್ರಿಯೇ ಕೈಗೊಂಡು ತೆರಿಗೆ ವಸೂಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕುಕನೂರಿನಲ್ಲಿ ಸುಮಾರು 100 ವಾಣಿಜ್ಯ ಉದ್ದೇಶಿತ ಆಸ್ತಿಗಳು, ಕೈಗಾರಿಕೆಗಳು ತೆರಿಗೆ ಪಾವತಿ ಮಾಡಿರುವುದಿಲ್ಲಾ, ಸುಮಾರು 1500ಮನೆಗಳು, ವಸತಿ ಉದ್ದೇಶಿತ ಆಸ್ತಿಗಳು 3-4 ವರ್ಷಗಳಿಂದ ತೆರಿಗೆ ಪಾವತಿ ಮಾಡಿರುವುದಿಲ್ಲಾ, ಅಂತಹ ಆಸ್ತಿಗಳ ಮಾಲಿಕರುತಕ್ಷಣವೇ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ನಿಗದಿತ ಪಾವತಿ ತೆರಿಗೆ ಪಾವತಿ ಮಾಡಿ ರಸೀದಿ ಪಡೆಯಲು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ತಪ್ಪಿದಲ್ಲಿ ನಿಯಮಾನುಸಾರ ಅಂತವರ ಚರಾಸ್ತಿಗಳ ಜಪ್ತಿ ಮಾಡುವ ಮತ್ತು ಹರಾಜು ಮಾಡುವ ಮೂಲಕ ತೆರಿಗೆ ವಸೂಲಾತಿಗೆ ಕಾರ್ಯನಿರತರಾಗಲಾಗುವುದು ಎಂದು ಕುಕನೂರು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.