A request to release water to the farmers’ lands at the end of Mile 89 canal
ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಕಾರ್ಮಿಕರ ,ಮಾನವ ಹಕ್ಕುಗಳ,ಭ್ರಷ್ಟಾಚಾರ ವಿರೋಧಿ ಒಕ್ಕೂಟದ ತಾಲೂಕು ಸಮಿತಿಯಿಂದ ತಹಸೀಲ್ದಾರರವರಿಗೆ ಉಪತಹಸೀಲ್ದಾರ್ ವಿನಾಯಕರಾವ್ ರವರ ಮೂಲಕ ಮನವಿ ಸಲ್ಲಿಸಿ ಜಿಲ್ಲಾ ಗೌರವ ಅಧ್ಯಕ್ಷ ಜಲ್ಲಿ ಆಂಜನೇಯ್ಯನಾಯಕ ಮಾತನಾಡಿ ತುಂಗಭದ್ರ ಕಾಲುವೆ ವ್ಯಾಪ್ತಿಯಲ್ಲಿನ ಮೈಲ್ 89 ನೇ ಕಾಲುವೆ ಕೊನೆಯ ಭಾಗದ ನೀರಾಮಾನ್ವಿ, ಬೆಟ್ಟದೂರು, ಕಪಗಲ್ ಹರವಿ ಗ್ರಾಮಗಳ ರೈತರ ಜಮೀನುಗಳಿಗೆ ವಂತಿಗೆಯಂತೆ ನೀರು ಬಿಡದೆ ಇರುವುದರಿಂದ ರೈತರು ಬೆಳದ ಬೆಳೆಗಳು ಒಣಗುತ್ತಿವೆ ಅದರಿಂದ ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಗೆ ನೀರು ಹರಿಸಬೇಕು ಇಲ್ಲದೆ ಇದ್ದಲ್ಲಿ ಸೇ 22 ರಂದು ನೀರಮಾನ್ವಿ- ಮಾನ್ವಿ ಮುಖ್ಯರಸ್ತೆಯನ್ನು ತಡೆದು ಈ ಭಾಗದ ನೂರಾರು ರೈತರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರೈತ ಮುಖಂಡರಾದ ಮಲ್ಲಭದ್ರಪ್ಪಗೌಡ, ಅಮರೇಶಗೌಡ,ನವೀನ್ ಪೂಜಾರಿ,ಜಲ್ಲಿ ನಾಗರಾಜ, ಕರಿಬಸಪ್ಪಗೌಡ,ಬಸವಲಿಂಗಪ್ಪ, ಜಲ್ಲಿಭೀಮರಾಯ ನಾಯಕ ಸೇರಿದಂತೆ ಇನ್ನಿತರರು ಇದ್ದರು.