150000 thousand sanctioned for Maruteshwar temple

ಕೊಪ್ಪಳ ತಾಲೂಕಿನ ವೆಂಕಟಾಪುರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ 150000 ಸಾವಿರ ಮೊತ್ತದ DD ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮ ದಲ್ಲಿ ಶ್ರೀ ಮಾರುತೇಶ್ವರ ಟ್ರಸ್ಟ್ ನ ಅಧ್ಯಕ್ಷರು ಯಮನೂರಪ್ಪ ಜೋಗಿನವರ ಕಾರ್ಯದರ್ಶಿ ಹಣಮಪ್ಪ ಬಂಗ್ಲೆರ್ , ಗೌರವಾಧ್ಯಕ್ಷರು ಬಸಪ್ಪ ಜೋಗಿನವರ, ಗ್ರಾಮ ಪಂಚಾಯತ ಸದಸ್ಯರು ಹನುಮಪ್ಪ ತಾತ್ಲರ್,ಮತ್ತು ಕಮಿಟಿಯ ಸರ್ವ ಸದಸ್ಯರು, ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿ ಮತ್ತೆ ಸ್ವ ಸಹಾಯ ಸಂಘದ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ನಮಗೆ ಪ್ರಗತಿನಿಧಿ ಅಷ್ಟೇ ಅಲ್ಲದೆ ಗ್ರಾಮ ಮಟ್ಟದಲ್ಲಿ ದೇವಸ್ಥಾನ ಜೀರ್ಣೋದ್ದಾರ ಕ್ಕೂ ಕೂಡ ಕೈ ಜೋಡಿಸುತ್ತಿರುವ ಶ್ರೀ ಕ್ಷೇತ್ರದ ಧರ್ಮಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು ಮತ್ತು ಋಣಿಯಗಿರುತ್ತೇವೆ ಎಂದು ತಿಳಿಸಿದರು, ಕಾರ್ಯಕ್ರಮದಲ್ಲಿ ಗೌರವಾನ್ವಿತ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರಕಾಶ ರಾವ್ ಸರ್ ಅವರು ಸಂಸ್ಥೆಯ ಕಾರ್ಯಕ್ರಮಗಳ ಕುರಿತಾಗಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮ, ಜೊತೆಗೆ ಯೋಜನೆಯ ಹಲವು ಕಾರ್ಯಕ್ರಮಗಳ ಕುರಿತಾಗಿ ಗ್ರಾಮದ ಸಜ್ಜನರಿಗೆ ಮಾಹಿತಿ ನೀಡಿದರು, ತಾಲೂಕಿನ ಯೋಜನಾಧಿಕಾರಿಗಳು ಶ್ರೀ ರಘುರಾಮ ಸರ್, ಮೇಲ್ವಿಚಾರಕ ಭೀಮಪ್ಪ, ಸೇವಾಪ್ರತಿನಿಧಿ ರವೀಂದ್ರ ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
