Let us make history of leprosy
ಗಂಗಾವತಿ: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕುಷ್ಟ ರೋಗ ನಿವಾರಣ ಅಧಿಕಾರಿಗಳ ಕಚೇರಿ ಕೊಪ್ಪಳ ಉಪ ವಿಭಾಗ ಆಸ್ಪತ್ರೆ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ, ಗಂಗಾವತಿ ಇವರ ಸಯುಕ್ತ ಆಶ್ರಯದಲ್ಲಿ ಕುಷ್ಟ ರೋಗದ ವಿರುದ್ಧ ಹೋರಾಡೋಣ ಕುಷ್ಟ ರೋಗವನ್ನು ಇತಿಹಾಸ ಗೊಳಿಸೋಣ ಎನ್ನುವ ಘೋಷವಾಕ್ಯದೊಂದಿಗೆ ಮಹಾತ್ಮ ಗಾಂಧೀಜಿಯವರಿಂದ ಹಿಡಿದು ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜನಸಾಮಾನ್ಯರ ವರೆಗೆ ಕುಷ್ಟ ರೋಗ ನಿರ್ಮೂಲನೆಗೆ ಅವಿರತ ಪ್ರಯತ್ನ ಸಾಗುತ್ತಿದೆ ಇದರ ಅಂಗವಾಗಿ ಇಂದು ವೆಂಕಟಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಗೌರಿಶಂಕರ್ ಹಾಗೂ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಅಂಜುಮ್ತಾಜ್ ಹಾಗೂ ಸಂತೋಷ್ ಮತ್ತು ಉಪ ವಿಭಾಗ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾಕ್ಟರ್ ರಮೇಶ್ ಕಾರ್ಯಕ್ರಮ ಜಿಲ್ಲಾ ಮೇಲ್ವಿಚಾರಕರಾದ ಜಯಪ್ರಕಾಶ್ ವೀರಭದ್ರಪ್ಪ ಸುರೇಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಾದ ದೇವಮ್ಮ ಜಡಿಯಪ್ಪ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಕಾರ್ಯಕ್ರಮದಲ್ಲಿ ಸುಮಾರು 156 ಜನ ಚರ್ಮರೋಗಿಗಳಿಗೆ ಪರೀಕ್ಷೆ ಮಾಡಿ ಅವರಲ್ಲಿ ಒಬ್ಬರಿಗೆ ಕುಷ್ಟ ರೋಗ ದೃಢಪಡಿಸಿ ಎಂಡಿಟಿ ಚಿಕಿತ್ಸೆ ಸ್ಥಳದಲ್ಲಿಯೇ ಪ್ರಾರಂಭಿಸಲಾಯಿತು