World’s first female Jagadguru Dr. Urge central government to award “Padma Shri” to Mata Mahadevitai.
ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆ ಮಹಾದೇವಿ ತಾಯಿಯವರಿಗೆ “ಪದ್ಮಶ್ರೀ” ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಡಾ. ಬಸವಪ್ರಕಾಶ ಸ್ವಾಮೀಜಿ. ಒತ್ತಾಯಿಸಿ ದರು.
ವಿಶ್ವ ಸಾಹಿತ್ಯದಲ್ಲಿ ಭಾರತೀಯ ಅಧ್ಯಾತ್ಮ ಕ್ಷೇತ್ರದಲ್ಲಿ ತನ್ನದೇ ಆದ ಸಾಮಾಜಿಕ ನೈತಿಕ ಕಲೆ ಸಾಹಿತ್ಯ ಆಧ್ಯಾತ್ಮಿಕ ಹಾಗೂ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಡಾ. ಮಾತೆ ಮಹಾದೇವಿ ತಾಯಿಯವರು
“ಹೆಪ್ಪಿಟ್ಟ ಹಾಲು “. ಅಕ್ಕಮಹಾದೇವಿಯ ಜೀವನ ಕುರಿತಾದ ತರಂಗಿಣಿ ಮೊದಲಾದ ಎರಡು ನೂರಕ್ಕೂ ಹೆಚ್ಚು ಗ್ರಂಥಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದವರು.
ಅದರಲ್ಲೂ ಮಾನ್ಯವಾಗಿ ಲಿಂಗಾಯತ ಧರ್ಮಕ್ಕೆ ಸಂಸ್ಕಾರಗಳಲ್ಲಿ ಅಸಮಾನ್ಯ ಪಾಂಡಿತ್ಯದಿಂದ.12ನೇ ಶತಮಾನದ ಶರಣರ ನಂತರ ಷಟಸ್ಥಲ ಚೌಕಟ್ಟಿಗೆ ಮೆರಗನ್ನು ಕೊಟ್ಟ ಕೀರ್ತಿ ಡಾ. ಮಾತಾಜಿ ಅವರಿಗೆ ಸಲ್ಲುತ್ತದೆ. ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಎನಿಸಿಕೊಂಡ ಮಾತಾಜಿ ಅವರು ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದು. ನಾಡಿನಧ್ಯಂತ ದೇಶದಾದ್ಯಂತ ವಿಶ್ವದಾದ್ಯಂತ ಅನುಯಾಯಿಗಳನ್ನು ಹೊಂದಿದ್ದಾರೆ.
ಅನೇಕ ಜಂಗಮ ಮೂರ್ತಿ ಶಿಷ್ಯರನ್ನು ಹೊಂದಿದ್ದಾರೆ. ರಾಷ್ಟ್ರೀಯ ಬಸವದಳ ಲಿಂಗಾಯತ ಧರ್ಮ ಮಹಾಸಭಾ
ಎಂಬ ದೈತ್ಯ ಸಂಘಟನೆಗಳ ಕ್ರಾಂತಿಕಾರಿ ಸ್ಥಾಪಕರಾಗಿದ್ದಾರೆ.
ಹಾಗೂ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ.
ವಿಶ್ವಕ್ಕೆ ಪ್ರಥಮ ಮಹಿಳಾ ಜಗದ್ಗುರು ಎನಿಸಿಕೊಂಡ ಪರಮಪೂಜ್ಯರಿಗೆ.
ಅತಿ ಶೀಘ್ರದಲ್ಲಿ ಭಾರತ ಸರ್ಕಾರವು ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಪದ್ಮಶ್ರೀ” ಪ್ರಶಸ್ತಿಯನ್ನು ಪೂಜ್ಯ ಮಾತೆ ಮಹಾದೇವಿ ತಾಯಿಯವರಿಗೆ.
ಮರಣೋತ್ತರವಾಗಿ ನೀಡಿ ಗೌರವಿಸಬೇಕೆಂದು ಸಕಲ ಬಸವ ಅನುಯಾಯಿಗಳ ಆಶಯವಾಗಿದೆ_
ಡಾ. ಬಸವಪ್ರಕಾಶ ಸ್ವಾಮೀಜಿ.