Breaking News

ಅಮರ್ ಭಗತ್‌ಸಿಂಗ್ ಕಾಲೋನಿಗೆ ನಗರಸಭೆ ಎಲ್‌ಇಡಿ ಲೈಟ್‌ಗಳ ಅಳವಡಿಕೆ

Installation of municipal LED lights for Amar Bhagatsingh Colony

ಜಾಹೀರಾತು
KPL16cm05 Scaled


ಗಂಗಾವತಿ:ನಗರದ ಕಂಪ್ಲಿ ರಸ್ತೆಯಲ್ಲಿರುವ ೧೭ನೇ ವಾರ್ಡ್ನ ಅಮರ್ ಭಗತ್‌ಸಿಂಗ್ ನಗರದ ಮುಖ್ಯ ರಸ್ತೆಯಲ್ಲಿ ನೂತನವಾಗಿ ಎಲ್‌ಇಡಿ ಲೈಟ್‌ಗಳನ್ನು ಸೋಮವಾರ ಅಳವಡಿಕೆ ಮಾಡಲಾಯಿತು.
ನಗರಸಭೆ ಸದಸ್ಯರಾದ ನೀಲಕಂಠ ಕಟ್ಟಿಮನಿ ಮಾತನಾಡಿ, ನಗರಸಭೆಗೆ ಸುಮಾರು ತಿಂಗಳುಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷರು ಇಲ್ಲದೆ ಸಾಕಷ್ಟು ತೊಂದರೆಗಳು ಕಂಡು ಬರುತ್ತಿದ್ದವು. ಸದ್ಯ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಆಯ್ಕೆಯಾಗಿದ್ದು, ಅವರ ನೇತೃತ್ವದಲ್ಲಿ ನಗರದ ವಾರ್ಡ್ಗಳ ಅಭಿವೃದ್ಧಿಗೆ ವೇಗ ಬರಲಿದೆ. ಸದ್ಯ ೧೭ನೇ ವಾರ್ಡ್ನ ಅಮರ್ ಭಗತ್‌ಸಿಂಗ್ ನಗರ ಕಾಲೋನಿಗೆ ನಗರಸಭೆಯ ಎಸ್‌ಎಫ್‌ಸಿಯ ೯ ಲಕ್ಷ ರೂಗಳ ಅನುದಾನ ಬಿಡುಗಡೆಯಾಗಿದ್ದು, ವಾರ್ಡ್ನ ಮಹಿಳೆಯರಿಗೆ, ವಯಸ್ಕರಿಗೆ, ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಾಲೋನಿಯ ಮುಖ್ಯ ರಸ್ತೆಗೆ ಎಲ್‌ಇಡಿ ಲೈಟ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಲೈಟ್ ಅಳವಡಿಕೆಗಾಗಿ ೬.೫೦ ಲಕ್ಷ ರೂಗಳನ್ನು ವೆಚ್ಚ ಮಾಡಲಾಗುತ್ತಿದೆ. ಇನ್ನೂಳಿದ ೨.೫೦ ಲಕ್ಷ ರೂಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್‌ಗಳನ್ನು ದುರಸ್ತಿ ಮಾಡಲಾಗುವುದು. ಅಷ್ಟೇ ಅಲ್ಲದೆ ಮುಂದಿನ ದಿನಗಳಿಗೆ ನಗರೋತ್ಥನ ಅನುದಾನದಲ್ಲಿ ಕೂಡ ವಾರ್ಡ್ನ ಮುಖ್ಯ ರಸ್ತೆ ಅಭಿವೃದ್ಧಿಯನ್ನು ಪಡಿಸಲಾಗುವುದು. ಮಹಿಳೆಯರಿಗೆಗಾಗಿ ಸಮೂಹಿಕ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ನಂತರ ಎಲ್‌ಇಡಿ ಲೈಟ್‌ಗಳನ್ನು ಅಳವಡಿಕೆ ಮಾಡಲಾಯಿತು. ವಾರ್ಡಿನ ಪ್ರಮುಖರಾದ ಮಾರುತಿ, ಶಿವಣ್ಣ, ಮಲ್ಲಪ್ಪ, ತ್ಯಾವರಪ್ಪ, ಬಸಪ್ಪ, ಶರಣಪ್ಪ, ವೀರೇಶ, ವೆಂಕಟೇಶ ಹಾಗೂ ಇತರರಿದ್ದರು.

About Mallikarjun

Check Also

ಉಪ ಲೋಕಾಯುಕ್ತರಿಂದ ಅ.30, 31 ರಂದು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

Public inquiry reception program by the Deputy Lokayukta on October 30th and 31st ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.