Sindhanur Patil College N.S.S. Ready to get the rank after reading the innovative efforts of the students of the unit
ಸಿಂಧನೂರು: ನಗರದ ಪಾಟೀಲ ಮಹಿಳಾ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿನಿಯರು ವಿನೂತನ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಪಾಟೀಲ್ ಕಾಲೇಜ್ ಅಂದ್ರೆ ಕೇವಲ ಓದಿನಲ್ಲಿ ಮಾತ್ರವೇ ಮುಂದಿದ್ದಾರೆ ಎನ್ನುವ ಹೆಗ್ಗಳಿಕೆಯ ಜೊತೆಗೆ ಈಗ ಶ್ರಮದಾನದಲ್ಲು ಒಂದು ಕೈ ಮೇಲು ಎನ್ನುವುದನ್ನು ತೋರಿಸಿದ್ದಾರೆ.
ನಗರಕ್ಕೆ ಸಮೀಪದ ದತ್ತು ಪಡೆದ ಗ್ರಾಮದ ಗದ್ದೆಯ ಕೆಸರಿನಲ್ಲಿ ಇಳಿದು ಅತಿ ಉತ್ಸಾಹದಿಂದ ಭತ್ತದ ನಾಟಿಗಳನ್ನು ಕಿತ್ತು ನೀರಿನಲ್ಲಿ ನಿಂತು ಸ್ವತಃ ಕೃಷಿ ಕಾರ್ಮಿಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ರೀತಿಯಲ್ಲಿ ಕೆಲಸಗಳನ್ನು ಮಾಡಿ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯ ಮೇಲು ಎನ್ನುವುದನ್ನು ನೆನಪಿಸುಮತೆ ಮತ್ತೆ ಮಾಡಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಂದ ಶಹಬ್ಬಾಷಗಿರಿಗೆ ಪಾತ್ರರಾಗಿದ್ದಾರೆ.
ಕಾಲೇಜಿನ ಆಡಳಿತಾಧಿಕಾರಿ ಭಾರತೀಕೃಷ್ಣ ನೆಕ್ಕಂಟಿ ಮಾತನಾಡಿ, ಮಹಿಳಾ ಸಬಲೀಕರಣವೇ ನಮ್ಮ ಮುಖ್ಯ ಧೈಯವಾಗಿದೆ. ಇತ್ತೀಚೆಗೆ ದತ್ತು ಪಡೆದ ಸರ್ಕಾರಿ ಶಾಲೆಯಲ್ಲಿ ನಮ್ಮ ಸ್ವಯಂಸೇವಕರು ತರಗತಿ ಕೊಠಡಿಗಳಿಗೆ ಬಣ್ಣ ಬಳಿದಿದ್ದಾರೆ ಅದೇ ತೆರನಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಗದ್ದೆಯಲ್ಲಿ ಕೆಲಸ ಮಾಡುವ ಮನಸ್ಸು ಮಾಡಿದ್ದಾರೆ. ಆದ್ದರಿಂದ ಅವರು ಭತ್ತದ ಹೊಲಗಳಲ್ಲಿನ ಪ್ರಾಯೋಗಿತ ಅನುಭವವನ್ನು ತಮ್ಮ ಜೀವನಕ್ಕೆ ರೂಢಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿದ್ಯಾರ್ಥಿಗಳ ಕಾರ್ಯವನ್ನು ಮುಕ್ತಕಂಠದಿAದ ಪ್ರಶಸಿದರು.
ಈ ಸಂದರ್ಭದಲ್ಲಿ: ಪಾಟೀಲ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆರ್. ಪಂಪಾಪತಿ ಪಾಟೀಲ್ ಅಲಬನೂರು , ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶರಣಬಸವ ವಕೀಲರು, ಪಾಟೀಲ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಸಿ.ಪಾಟೀಲ್ , ಪ್ರಾಚಾರ್ಯರಾದ ಮಾರುತಿ ಭಂಡಾರಕರ್, ಕಾಲೇಜಿನ ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಸುನೈನಾ ಲಲಿತಾ ,ಎನ್.ಎಸ್.ಎಸ್. ಕಾರ್ಯದರ್ಶಿ ನಿಕಿತಾ, ಸಾಂಸ್ಕೃತಿಕ ಕಾರ್ಯದರ್ಶಿ ಕಲ್ಯಾಣಿ, ಕ್ರೀಡಾ ಕಾರ್ಯದರ್ಶಿ ರಜನಿ, ಸಾಹಿತ್ಯಕ ಕಾರ್ಯದರ್ಶಿ ಸಬಿಹಾ, ಜಂಟಿ ಕಾರ್ಯದರ್ಶಿ ಫೌಜಿಯಾ ಸೇರಿದಂತೆ ಇತರರು