Be careful not to give unnecessary form
ಕೂಡ್ಲಿಗಿ: ತಾಲ್ಲೂಕು ಕಚೇರಿಗಳ ದೊರೆಯುವ ಸೌಲಭ್ಯಕ್ಕಾಗಿ ಸಾರ್ವಜನಿಕರು ಆರ್ಜಿ ಸಲ್ಲಿಸಲು ಬಂದಾಗ ಅನಗತ್ಯ ಫಾರ್ಮ್‍ಗಳನ್ನು ನೀಡಬಾರದು ಎಂದು ತಾಲ್ಲೂಕು ಕಚೇರಿ ಆವರಣದಲ್ಲಿ ಆರ್ಜಿ ಬರೆಯುವವರಿಗೆ ಗ್ರೇಡ್-2 ತಹಶೀಲ್ದರ್ ನೇತ್ರಾವತಿ ಎಚ್ಚರಿಕೆ ನೀಡಿದರು.
ತಾಲ್ಲೂಕು ಕಚೇರಿ ಆವರಣದಲ್ಲಿ ವಿವಿಧ ನಮೂನೆಗಳನ್ನು ಸಾರ್ವಜನಿಕರಿಗೆ ಅನಗತ್ಯವಾಗಿ ನೀಡಲಾಗುತ್ತಿದೆ ಎಂಬ ದೂರಿನ ಮೇಲೆ ಮಂಗಳವಾರ ಪರಿಶೀಲಿಸಿದ ಆವರು, ಜಾತಿ ಮತ್ತು ಅದಾಯ ಪ್ರಮಾಣ ಪತ್ರ, ಸಂಧ್ಯ ಸುರಕ್ಷಾ, ವಿಧವಾ ವೇತನ, ಅಂಗವಿಲಕರ ವೇತನ ಸೇರಿದಂತೆ ತಾಲ್ಲೂಕು ಕಚೇರಿಯಿಂದ ಸಿಗುುವ ಸೌಲಭ್ಯಕ್ಕೆ ಆಧಾರ್ ಕಾರ್ಡ್, ಪಡಿತರ ಚೀಟಿ, ಸೇರಿದಂತೆ ಕೆಲವೇ ದಾಖಲೆಗಳನ್ನು ಪಡೆಯಲಾಗುತ್ತಿದೆ. ಆದರೆ ಹೊರಗಡೆ ಆರ್ಜಿ ಬರೆಯುವವರು ವಿವಿಧ ಬಗೆಯ ಫಾರ್ಮ್(ನಮೂನೆಗಳು) ಅನಗತ್ಯವಾಗಿ ಬರೆದುಕೊಡುತ್ತಿದ್ದೀರಿ. ಇವುಗಳಿಗೆ 100ರಿಂದ 150 ರೂಪಾಯಿಗಳನ್ನು ಪಡೆಯುತ್ತಾರೆ ಎಂಬ ದೂರುಗಳು ಬಂದಿವೆ. ಆದರೆ ನಾವು ಇಂತಹ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ. ಆಧಾರ್ ತಿದ್ದುಪಡಿ ಮಾಡಿಸಲು ಆಧಾರ್ ಕೇಂದ್ರದಲ್ಲಿಯೇ ಆರ್ಜಿ ನೀಡಲಾಗುತ್ತಿದ್ದು, ಅಲ್ಲಿಯೇ ತುಂಬಿ ಕೊಡಲಾಗುವುದು. ಇದನ್ನು ಹೊರಗಡೆ ನೀವು ಏಕೆ ತುಂಬಿಕೊಡುತ್ತೀರಿ ಎಂದು ಪ್ರಶ್ನಿಸಿದ ಅವರು, ಮುಂದೆ ಈ ರೀತಿ ಮಾಡುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ, ಅಲ್ಲಿದ್ದ ಕೆಲ ಫಾರ್ಮ್‍ಗಳನ್ನು ವಶಪಡಿಸಿಕೊಂಡರು. ನಂತರ ಆನ್ ಲೈನ್ ಆರ್ಜಿಗಳನ್ನು ಹಾಕುವಾಗ 60 ರೂಪಾಯಿಗಿಂತ ಹೆಚ್ಚಿನ ಹಣ ಪಡೆಯಬಾರದು ಎಂದು ಸೂಚನೆ ನೀಡಿದರು.
ಗ್ರಾಮ ಲೆಕ್ಕಾಧಿಕಾರಿ ಪ್ರಭು ಹಾಗೂ ತಾಲ್ಲೂಕು ಕಚೇರಿ ಸಿಬ್ಬಂದಿ ಇದ್ದರು.