Insulting Hindu deities-FIR filed
ಮಂಗಳೂರು: ಫ್ಯಾಕ್ಟ್ ವಿಡ್'
ಫೇಸ್ಬುಕ್ ಪೇಜ್’ ಮೂಲಕ ಹಿಂದೂ ದೇವತೆಗಳ ಅಪಮಾನ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ.
ಹಿಂದೂ ಜನಜಾಗೃತಿ ಸಮಿತಿ ಮತ್ತು ಧರ್ಮಾಭಿಮಾನಿ ನ್ಯಾಯವಾದಿಗಳಿಂದ ಈ ದೂರು ನೀಡಲಾಗಿದ್ದು, ತಪ್ಪಿತಸ್ಥರಿಗೆ ಕಾನೂನು ರೀತ್ಯ ಶಿಕ್ಷೆ ವಿಧಿಸುವಂತೆ ಮನವಿ ಮಾಡಲಾಗಿದೆ.
`ಫ್ಯಾಕ್ಟ್ ವಿಡ್’ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಾಂತ್ರಿಕ ಸಹಾಯದಿಂದ ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ. ಈ ಎಐ ಆಧಾರಿತ ಚಿತ್ರಗಳಿಂದ ಕೋಟ್ಯಂತರ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಸಂಬAಧಿತ ಸೈಬರ್ ಕ್ರೈಮ್ ವಿಭಾಗವು ಇದರ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಪೇಜ್ ನ ಅಡ್ಮಿನ್ ಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ವಿಜಯ ಕುಮಾರ ಇವರು ಆಗ್ರಹಿಸಿದ್ದಾರೆ.
ಈ ಕುರಿತು ಸೆ.೧೦ ರಂದು ಮಂಗಳೂರಿನ ಸೈಬರ್ ಕ್ರೈಮ್ ವಿಭಾಗಕ್ಕೆ ಸಮಿತಿಯ ಸಮನ್ವಯಕರು ಮತ್ತು ಧರ್ಮಪ್ರೇಮಿ ನ್ಯಾಯವಾದಿಗಳ ಒಕ್ಕೂಟವು ಸೇರಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐ ಆರ್ ದಾಖಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರö್ಯ ಎಂದು ತಮ್ಮ ಬಗ್ಗೆ ಬರೆದುಕೊಂಡ ‘ಫ್ಯಾಕ್ಟ್ ವಿಡ್’ `ಫೇಸ್ಬುಕ್ ಪೇಜ್’ ನಲ್ಲಿ ಪ್ರತಿದಿನ ೭ ರಿಂದ ೮ ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳು ಪ್ರಸಾರವಾಗುತ್ತಿವೆ. ಇದರಲ್ಲಿ ಹಿಂದೂ ಧರ್ಮದ ಶ್ರದ್ಧಾಸ್ಥಾನ ಭಗವಾನ್ ಶಿವ, ಕೃಷ್ಣ, ರಾಮ, ಗಣೇಶ ಮೊದಲಾದ ದೇವತೆಗಳು ಸ್ತ್ರೀಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವಂತೆ, ಓಡಿಸುತ್ತಿರುವಂತೆ, ಕುಸ್ತಿ ಆಡುತ್ತಿರುವಂತೆ ಹೀಗೆ ವಿವಿಧ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಪೋಸ್ಟ್ ಗಳಿಗೆ ಅನೇಕ ಮತಾಂಧರು ಧಾರ್ಮಿಕ ಭಾವನೆಗಳನ್ನು ನೋಯಿಸುವಂತೆ ಕಮೆಂಟ್ ಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೂಗಳನ್ನು ಕೆರಳಿಸುವ ಬಹುದೊಡ್ಡ ಷಡ್ಯಂತ್ರ ಇದರಲ್ಲಿ ಅಡಗಿದೆ.
ಈ ದೂರಿನಲ್ಲಿ ನ್ಯಾಯವಾದಿ ತೀರ್ಥೇಶ್ ಇವರು, ಫೇಸ್ಬುಕ್ ಪೇಜ್ ‘ಫ್ಯಾಕ್ಟ್ ವಿಡ್’ ನ್ನು ನಿಯಂತ್ರಿಸುತ್ತಿರುವ ಅಡ್ಮಿನ್ ಮತ್ತು ಸದ್ರಿ ಪೇಜ್ ನಲ್ಲಿ ಹಿಂದೂ ದೇವತೆಗಳ ಅವಹೇಳನ ಮಾಡುವ ಕಮೆಂಟ್ ಗಳನ್ನೂ ಹಾಕುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ೨೯೯, ೧೯೨, ೩೫೩ ಮತ್ತು ೬೭ ಐಟಿ ಆ್ಯಕ್ಟ್ ಸೆಕ್ಷನ್ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಧಾರ್ಮಿಕ ಭಾವನೆಗೆ ನೋವುಂಟು ಮಾಡಲು ಎಡೆಮಾಡಿಕೊಡುವ ಎಐ ಟೂಲ್ ಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಈ ವೇಳೆ ಧರ್ಮಾಭಿಮಾನಿ ವಕೀಲರಾದ ಈಶ್ವರ ಕೊಟ್ಟಾರಿ, ಯತೀಶ್, ವಿಜಯ ಕುಮಾರ್, ಸುಷ್ಮಾ, ಉದ್ಯಮಿಗಳಾದ ದಿನೇಶ್ ಎಂ. ಪಿ. ಚಂದ್ರಕಾAತ್ ಕಾಮತ್, ಪ್ರಶಾಂತ್ ಕಾಂಚನ್, ಬಾಲಗಂಗಾಧರ, ನಾರಾಯಣ ಅಮೀನ್ ಇವರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ವಿಜಯಕುಮಾರ ಇವರು ಉಪಸ್ಥಿತರಿದ್ದರು.