Bishops should guide the youth – Dr. Siddarama Waghamare
ಬಸವಕಲ್ಯಾಣ: ಯುವಕರು ಇಂದು ಎಲ್ಲವನ್ನೂ ತುರ್ತಾಗಿ ಪಡೆಯಬೇಕೆಂಬ ಧಾವಂತದಲ್ಲಿದ್ದು ಅಶಾಂತಿ, ಅಸಹನೆಯಿಂದ ಕುದಿಯುತ್ತಿದ್ದಾರೆ. ಅಂದುಕೊAಡಿದ್ದು ತಕ್ಷಣವೇ ಪಡೆಯಬೇಕೆಂಬ ಹುಚ್ಚು ಕಲ್ಪನೆಯಲ್ಲಿ ದುಶ್ಚಟಗಳಲ್ಲಿ ಮುಳುಗಿ ಹೋಗುತ್ತಿದ್ದಾರೆ. ಮಠಾಧೀಶರು ಇಂತಹ ಯುವಕರಿಗೆ ಶರಣರ ಅನುಭಾವ ವಚನಗಳು ಮತ್ತು ಜೀವನಾದರ್ಶನದ ಮೂಲಕ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಅಖಿಲ ಭಾರತ ಗೋಂಧಳಿ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಸಿದ್ಧರಾಮ ವಾಘಮಾರೆ ಹೇಳಿದರು.
ಇಲ್ಲಿನ ಬೇಲೂರು ತ್ರಿಪುರಾಂತ ಉರಿಲಿಂಗ ಪೆದ್ದಿ ಮಠದ ಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳ ೫೧ನೇ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಮನುಷ್ಯನ ಹುಟ್ಟು ಮತ್ತು ಸಾವು ದೈವೀ ಲಿಖಿತ. ಮನುಷ್ಯನಾಗಿ ಹುಟ್ಟಿದ ಮೇಲೆ ಯಾರೂ ಜಾತಿ ಭೇದ ಮಾಡಬಾರದು. ವೀರಶೈವ ಲಿಂಗಾಯತ ಧರ್ಮ ಒಳಗೊಂಡAತೆ ಎಲ್ಲ ಮಠಗಳೂ ಜಾತಿ, ಧರ್ಮ ಮೀರಿ ಮನುಷ್ಯರನ್ನು ಐಕ್ಯತೆಯೆಡೆಗೆ ಸಾಗುವಂತೆ ಪ್ರೇರೇಪಿಸುತ್ತಿವೆ. ಶರಣರ ಹಿತ ನುಡಿಗಳು ಮನುಕುಲಕ್ಕೆ ದಾರಿದೀಪವಾಗಿವೆ. ಇಂದಿನ ಯುವಕರು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಿಂದ ವಿಮುಖರಾಗಿ ಕ್ಷಣಿಕ ಸುಖದ ಲೋಲುಪತೆಗೆ ಎಳಸುತ್ತಿದ್ದಾರೆ. ಇಂತಹ ಯುವಕರಿಗೆ ಮಠಾಧೀಶರು ಮಾತೃ ಪ್ರೇಮದ ಮೂಲಕ ದುಶ್ಚಟಗಳಿಂದ ದೂರ ಮಾಡಬೇಕೆಂದರು.
ಯುವಕರು ದೇಶದ ಆಸ್ತಿ ಅಂತ ಹೇಳುತ್ತೇವೆ. ಇಂದು ಯುವಕರೇ ಇಲ್ಲ ಸಲ್ಲದ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆಸ್ತಿ, ಅಂತಸ್ತು ನೋಡಿ ಗೌರವ ಕೊಡುವ ವಾಸ್ತವಕ್ಕೆ ಜನರು ಕೂಡ ಬಂದಿದ್ದಾರೆ. ಹಣ, ಅಧಿಕಾರದ ಲಾಲಸೆಗೆ ಬಿದ್ದಿರುವ ಯುವ ಜನತೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಯುವಕರ ಮನಃಸ್ಥಿತಿ ಅಧೋಗತಿಗೆ ಹೋಗಿದ್ದು ಜನರ, ಯುವಕರ ಮತ್ತು ಸಮಾಜದ ಸ್ವಾಸ್ಥö್ಯ ಕಾಪಾಡುವಲ್ಲಿ ಮಠಾಧೀಶರ ಪಾತ್ರ ಬಹುಮುಖ್ಯವಾಗಿದೆ. ದೇಶ ಇಂದು ಅಪ್ರಬುದ್ಧ ಯುವಕರ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿದೆ. ನುಡಿದಂತೆ ನಡೆಯಬೇಕೆಂದು ಹೇಳಿದ್ದ ಬಸವಣ್ಣನ ವಾಣಿಯನ್ನು ಯುವಕರು ಪಾಲಿಸಬೇಕು. ಈ ದಿಸೆಯಲ್ಲಿ ಉರಿಲಿಂಗ ಪೆದ್ದಿಮಠ ಯುವಕರನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.