Breaking News

ಈ ರಸ್ತೆಗಿಲ್ಲವೇ ಮುಕ್ತಿ,,,ಕುಕನೂರು ಪಟ್ಟಣದಿಂದ ಜವಳಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ,,,

Is there no liberation on this road? From Kukanur town to Jawal is the only route

ಜಾಹೀರಾತು
20240908 115659 COLLAGE Scaled

ವರದಿ: ಪಂಚಯ್ಯ ಹಿರೇಮಠ,,
ಕೊಪ್ಪಳ : ಕುಕನೂರು ಪಟ್ಟಣವು ಸುಮಾರು ನಲವತ್ತರಿಂದ ಐವತ್ತು ಸಾವಿರ ಜನಸಂಖ್ಯೆ ಗಡಿ ಹತ್ತಿರವಿದ್ದು, ತಾಲೂಕ ಕೇಂದ್ರವಾದರು ಇಲ್ಲಿ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಥೆಗೆ ಮುಕ್ತಿ ಯಾವಾಗ,,,?

ಇದು ಕುಕನೂರು ಪಟ್ಟಣದ ಬಸ್ ನಿಲ್ದಾಣದ ಮುಖ್ಯ ವೃತ್ತದಿಂದ ಜವಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಥೆ,,

ಸುಮಾರು ಹದಿನೈದು ವರ್ಷಗಳಿಂದ ಈ ರಸ್ತೆ ಅರೆಬರೆ ಕಾಮಗಾರಿಯಾಗಿದ್ದು, ಜವಳಕ್ಕೆ ಸಂಪರ್ಕ ಕಲ್ಪಿಸಲು ಇದೊಂದೆ ನೇರ ಮಾರ್ಗವಾಗಿದ್ದು ಪಾದಾಚಾರಿಗಳು ಹಾಗೂ ವಾಹನ ಸವಾರರಿಗೆ ತುಂಬಾ ತಲೆ ಬಿಸಿಯನ್ನುಂಟು ಮಾಡಿದೆ.

ಹೌದು ಈ ಜವಳ ಕಾಲೋನಿಯು ಸರಕಾರ ನೀಡಿರುವ ಬಡ ವಸತಿ ಪ್ರದೇಶವಾಗಿದ್ದು, ಇಲ್ಲಿ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ, ಇಲ್ಲಿರುವ ಕುಟುಂಬಗಳ ವಿದ್ಯಾರ್ಥಿಗಳು, ರೋಗಿಗಳು, ಗರ್ಭಿಣಿ ಸ್ತ್ರೀಯರು ಈ ರಸ್ತೆಯ ಮೂಲಕವೇ ಪ್ರತಿ ನಿತ್ಯ ಸಂಚರಿಸಬೇಕು, ಆದರೆ ಅವರು ಸಂಚರಿಸಲು ಸುಗಮ ಮಾರ್ಗವಿಲ್ಲದೇ ಪರದಾಡುವಂತಾಗಿದೆ.

ಈ ಕುರಿತು ಇಲ್ಲಿನ ನಿವಾಸಿಗಳು ಮಾತನಾಡಿ ನಾವು ಸುಮಾರು ವರ್ಷಗಳಿಂದಲೂ ಸಾಕಷ್ಟು ಬಾರಿ ಪಟ್ಟಣ ಪಂಚಾಯತಿಗೆ ಹಾಗೂ ವಾರ್ಡ ಸದಸ್ಯರಿಗೆ ಕೊನೆಗೆ ಶಾಸಕರಿಗೆ ತಿಳಿಸಿದರು ಪ್ರಯೋಜನವಾಗಿಲ್ಲಾ, ಅವರ ನಿರ್ಲಕ್ಷ್ಯದಿಂದ ನಾವೆಲ್ಲ ಪರದಾಡದುವಂತಾಗಿದೆ ಎಂದು ಆರೋಪಿಸಿದರು.

ಮಳೆಗಾಲದಲ್ಲಿ ಈ ರಸ್ತೆಯ ಮೂಲಕ ಚಲಿಸಬೇಕೆಂದರೇ ಮಾರುದ್ದದ ಗುಂಡಿಗಳು ಬಿದ್ದು, ನೀರು ತುಂಬಿಕೊಂಡು ರಸ್ತೆಯಾವುದು ಗುಂಡಿ ಯಾವುದು ಎನ್ನುವುದು ಒಂದು ತಿಳಿಯದೇ ಹಲವಾರು ಜನ ಬಿದ್ದು ಗಾಯಗೊಂಡ ಘಟನೆಗಳು ಸರ್ವೆ ಸಾಮಾನ್ಯವಾಗಿವೆ.

ಈ ರಸ್ತೆಯನ್ನು ಸರಿಪಡಿಸಿ ಡಾಂಬರೀಕರಣ ಮಾಡಿ ಸುಗಮ ಸಂಚಾರ ಮಾಡಲು ಇರುವ ಅಡ್ಡಿ, ಆತಂಕಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಓಡಾಟಕ್ಕೆ ಅನೂಕೂಲ ಕಲ್ಪಿಸಲು ಸ್ಥಳೀಯ ಆಡಳಿತ ಹಾಗೂ ಶಾಸಕರು ಗಮನ ಹರಿಸಬೇಕು ಎನ್ನುವುದು ಪ್ರಜ್ಞಾವಂತರ ಅಂಬೋಣವಾಗಿದೆ.

ಈ ರಸ್ತೆಗೆ ಹೊಂದಿಕೊಂಡಂತೆ ಕೆಇಬಿ ಕಚೇರಿ ಇದ್ದು ಪಟ್ಟಣದ ಹಾಗೂ ಸುತ್ತ ಮುತ್ತಲಿನ ಗ್ರಾಹಕರು ತಮ್ಮ ದೈನಂದಿನ ಕಾರ್ಯಗಳಿಗೆ ಪ್ರತಿದಿನ ನೂರಾರು ಗ್ರಾಹಕರು ಓಡಾಡುತ್ತಿದ್ದು ಅವರು ಹಿಡಿಶಾಪ ಹಾಕಿ ಓಡಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ಇದಲ್ಲದೇ ಅದೇ ರಸ್ತೆಗೆ ಹೊಂದಿಕೊಂಡು ಹರಿಯುವ ಗ್ರಾಮದ ಚರಂಡಿ ಕಲುಷಿತ ನೀರಿನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಇದ್ದು ಪೈಪ್ ಒಡೆದು ಕಲುಷಿತ ನೀರಿನೊಂದಿಗೆ ಮನೆಗಳಿಗೆ ನೀರು ಪೂರೈಕೆಯಾಗುತ್ತಿದ್ದರು ಪಟ್ಟಣ ಪಂಚಾಯತಿ ನಿರ್ಲಕ್ಷ್ಯ ವಹಿಸಿದೆ ಎಂದು ವಾರ್ಡನ ನಿವಾಸಿಗಳು ತಿಳಿಸಿದರು.

ನಿಂತ ಚರಂಡಿ ನೀರಿನಲ್ಲಿ ಹಂದಿ ನಾಯಿಗಳ ಓಡಾಡುವದರಿಂದ ಕೆಸರು, ಕಸ, ಮಲಿನ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದ್ದು, ಮುಳ್ಳುಕಂಟೆಗಳ ಗಿಡಗಳು ಬೆಳೆದು ಅರಣ್ಯದಂತೆ ಗೋಚರಿಸುತ್ತದೆ ಇದರಿಂದ ಸುತ್ತ ಮುತ್ತಲಿನ ನಿವಾಸಿಗಳು ಕಾಲರಾ, ಮಲೇರಿಯಾ ರೋಗದ ಭೀತಿಯಿಂದ ಬಳಲುವಂತಾಗಿದ್ದು, ಚರಂಡಿಯ ಮಲಿನ ನೀರು ಸರಾಗವಾಗಿ ಹರಿದು ಹೋಗವಂತೆ ಮಾಡಿ, ಮುಳ್ಳುಕಂಟಿಗಳನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಸುಗಮ ಮಾರ್ಗ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಮುಂದಾಗಬೇಕು ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ವಾರ್ಡ ನಿವಾಸಿಗಳು ಎಚ್ಚರಿಸಿದ್ದಾರೆ.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.