Breaking News

ಕೇವಲ ಬ್ಯಾನರ್ ಗೆ ಸಿಮೀತರಾದರೇಕಾಂಗ್ರೆಸ್ ಕಾರ್ಯಕರ್ತರು,,,

Congress workers are only limited to the banner.

ಜಾಹೀರಾತು

ಕಾಂಗ್ರೆಸ್ ಮುಖಂಡರಿಂದ ಪತ್ರಕರ್ತರ ನಿರ್ಲಕ್ಷ್ಯ,,,

ಕಾರ್ಯಕರ್ತನಿಂದ ರಾರಾಜಿಸುತ್ತಿವೆ ಶಾಸಕ ರಾಯರಡ್ಡಿಯವರ ಹುಟ್ಟಹಬ್ಬದ ಶುಭಾಶಯಗಳ ಬ್ಯಾನರ್,,,

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಯಲಬುರ್ಗಾ ಶಾಸಕ ರಾಯರಡ್ಡಿಯವರ 68 ನೇ ವರ್ಷದ ಹುಟ್ಟು ಹಬ್ಬಕ್ಕೆ ಸುಮಾರು 15 ದಿನಗಳ ಮುಂಚಿತವಾಗಿ ಯಲಬುರ್ಗಾ ತಾಲೂಕಿನಾದ್ಯಂತ ಅವರ ಅಭಿಮಾನಿ, ಕಾರ್ಯಕರ್ತರಿಂದ ಎಲ್ಲಿ ನೋಡಿದಲ್ಲಿ ಶುಭಾಶಯ ಬ್ಯಾನರ್ ರಾರಾಜಿಸುತ್ತಿವೆ.

ಹೌದು,, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಿಲ್ಲಾಡಳಿತದ ಮೂಲಕ ಹಲವಾರು ರೀತಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ಲಾಸ್ಟಿಕ್ ನಿಷೇದದ ಕುರಿತು ಬಾಷಣ ಬಿಗಿದರು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾವಳಿ ಮೀತಿಮಿರಿದೆ.

ಪ್ರತಿದಿನ ಜಿಲ್ಲಾಡಳಿತ, ತಾಲೂಕ ಆಡಳಿತ ಸೇರಿದಂತೆ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕಸ ವಿಲೆವಾರಿ ಮಾಡುವ ವಾಹನದ ಮೂಲಕ ಜಾಗೃತಿ ಮೂಡಿಸುವ ಕಾರ್ಯವಾಗುತ್ತಿದೇ ವಿನಃ ಅದು ಸಮರ್ಪಕ ಅನುಷ್ಠಾನವಾಗುತ್ತಿಲ್ಲಾ ಇದು ಅಧಿಕಾರಿಗಳ ನಿರ್ಲಕ್ಷ್ಯ ಎನ್ನುವುದು ಗಮನಿಸಬೇಕಾದ ಸಂಗತಿ.

ಹೌದು,, ಪರಿಸರಕ್ಕೆ ಮಾರಕವಾಗಿರು ಪ್ಲಾಸ್ಟಿಕ್ ನಿಷೇದದ ಮದ್ಯೆ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಾದ್ಯಂತ ಶುಭಾಶಗಳ ಬ್ಯಾನರ್ ಅಳವಡಿಸಲು ಕಾನೂನು ನಿಯಮ ಇರಬೇಕು ಇದರಿಂದ ಪರಿಸರ ಕಾಪಾಡಲು ಸಹಕಾರಿಯಾಗುತ್ತದೆ ನಿಯಮ ಮೀರಿ 15-20 ದಿನಗಳ ಕಾಲ ಬ್ಯಾನರ್ ಗಳನ್ನು ಮುಖ್ಯ ರಸ್ತೆಗಳಲ್ಲಿ ಹಾಕಿದಲ್ಲಿ ಪರಿಸರ ನಾಶದ ಜೊತೆಗೆ ವಾಹನ ಸವಾರರಿಗೆ ತೊಂದರೆ ಹಾಗೂ ಕಿರಿ ಕಿರಿಯಾಗುತ್ತದೆ. ಇದರಿಂದ ಅನಾಹುತಗಳು ಇಗುವ ಸಂಬವಗಳು ಇವೆ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.

ಯಲಬುರ್ಗಾ, ಕುಕನೂರು ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಶಾಸಕ ಬಸವರಾಜ ರಾಯರಡ್ಡಿಯವರು 68ನೇ ವರ್ಷದ ಹುಟ್ಟು ಹಬ್ಬದ ಆಚರಣೆ ಮಾಡುತ್ತಿದ್ದು, ಪತ್ರಿಕೆಗಳಿಗೆ ಜಾಹೀರಾತುಗಳನ್ನು ಕೇಳಿದರೇ ನಿರ್ಲಕ್ಷ್ಯದ ವರ್ತನೆಯಿಂದ ಒಬ್ಬರ ಮೇಲೊಬ್ಬ ಮುಖಂಡರು ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಈ ಕುರಿತು ಕಾಂಗ್ರೆಸ್ ಪಕ್ಷದ ಕೆಲವೊಂದಿಷ್ಟು ನಿಷ್ಠಾವಂತ ಕಾರ್ಯಕರ್ತರಿಗೆ ಜಾಹೀರಾತು ಕೇಳಿದರೇ, ನಾವು ಅಭಿಮಾನಕ್ಕೆ ಮನೆಯ ದುಡ್ಡಿನಿಂದ ಬ್ಯಾನರ್ ಹಾಕಿದ್ದೇವೆ ಎಂದರೇ, ಇನ್ನೂ ಕೆಲವರು ನಮಗೆ ಅವರಿಂದ ಏನು ಲಾಭವಿಲ್ಲಾ, ನಾವು ಅಭಿಮಾನಿಗಳು ಎಂದು ಹೇಳಿ ಪತ್ರಕರ್ತರಿಗೆ ಮುಜುಗರವನ್ನುಂಟು ಮಾಡಿದರು.

ಮುಖಂಡರು ಎನಿಸಿಕೊಳ್ಳುವವರಿಗೆ ಪತ್ರಿಕೆಗಳ ಮುಖ ಪುಟದಲ್ಲಿ ಇವರ ಮುಖ ಕಾಣಿಸಬೇಕು ಹಾಗೂ ಪತ್ರಿಕೆಗಳಲ್ಲಿ ಇವರ ಹೆಸರು ಬೋಲ್ಡ್ ಆಗಿ ಕಾಣಬೇಕು ಎನ್ನುವ ಪ್ರಚಾರ ಪ್ರೀಯರಿಗೇನು ಕೊರತೆ ಇಲ್ಲಾ.

ಶಾಸಕರ ಹುಟ್ಟು ಹಬ್ಬದ ನಿಮಿತ್ಯ ವಿವಿದೆಡೆಗಳಲ್ಲಿ ಹಾಲು, ಬ್ರೇಡ್ ಹಾಗೂ ಕೇಕ್ ಕತ್ತರಿಸುವ ಮುಖಂಡರೇ ಪತ್ರಿಕೆಗಳಲ್ಲಿ ಈ ವಿಷಯ ಪ್ರಕಟಗೊಳ್ಳಲು ನಾವು ಬೇಕು, ಆದರೆ ನಮ್ಮ ಪತ್ರಿಕೆಗಳಲ್ಲಿ ನಿಮ್ಮ ಮುಖಕಾಣವ ಜಾಹೀರಾತುಗಳು ಬೇಡವೇ, ಪತ್ರಿಕೆಗಳಲ್ಲೂ ತಾರತಮ್ಯ ನೀತಿ ಅನುಸರಿಸುವ ನಿಮಗೆ ರಾಜ್ಯದ ನಾಲ್ಕನೇ ಅಂಗವಾದ ಪತ್ರಿಕೆಗಳ ಉಳಿವು ನಿಮಗೆ ಬೇಕಿಲ್ಲವೇ ನೀವೇ ಹೇಳಿ,,,

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.