Breaking News

ಬೆಂಗಳೂರಿನಿಂದ ಕಲಬರ‍್ಗಿಗೆ ಶಿಫ್ಟ್‌ ಆದ ಸಚಿವ ಸಂಪುಟ ಸಭೆ: ಕಾರಣವೇನು?

Cabinet meeting shifted from Bangalore to Kalabargi: What is the reason?

ಜಾಹೀರಾತು
Karnataka Congress Govt next cabinet meeting held In Kalaburagi

ಬೆಂಗಳೂರು, ಸೆಪ್ಟೆಂಬರ್‌ ೦೬: ಕಲ್ಯಾಣ ರ‍್ನಾಟಕ ಭಾಗದ ಅಭಿವೃದ್ದಿ ಹಾಗೂ ಕೈಗೊಳ್ಳಬೇಕಿರುವ ಜನಪರ ಕೆಲಸಗಳ ಕುರಿತು ಸಮಗ್ರ ರ‍್ಚೆ ನಡೆಸಲು ಮುಂದಿನ‌ ಸಚಿವ ಸಂಪುಟ ಸಭೆಯನ್ನು ಕಲಬುರಗಿ ಯಲ್ಲಿ ನಡೆಸಲು ಮುಖ್ಯಮಂತ್ರಿ ಗಳಾದ ಸಿದ್ದ ರಾಮಯ್ಯ ಅವರು ಹಾಗೂ ಸಂಪುಟದ ಎಲ್ಲ‌ ಸಚಿವರು ಒಪ್ಪಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ರ‍್ಗೆ ಅವರು ತಿಳಿಸಿದ್ದಾರೆ.

ಈ‌ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ರ‍್ಗೆ ಅವರು, ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಿಎಂ ಅವರಿಗೆ ಕಲಬುರಗಿ ಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಮನವಿ ಮಾಡಲಾಗಿತ್ತು.

WhatsApp Image 2024 09 06 At 4.56.48 PM 724x1024

ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಸಚಿವರು ಸಭೆ ನಡೆಸಲು ಒಪ್ಪಿಗೆ ಸೂಚಿಸಿದ್ದು ಸಭೆಯ ದಿನಾಂಕ ಸಧ್ಯದಲ್ಲೇ ನಿಗದಿಪಡಿಸಲಾಗುವುದು ಎಂದು‌ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿಗಾಗಿ ಸಂವಿಧಾನ ಕಲಂ 371 ಕ್ಕೆ ತಿದ್ದುಪಡಿ ತಂದು ಜೆ ಸೇರಿಸಿ ಶಿಕ್ಷಣ, ಉದ್ಯೋಗ ಹಾಗೂ ಅನುದಾನ ಒದಗಿಸಿಕೊಡುವುದಕ್ಕೆ ವಿಶೇಷ ಸ್ಥಾನಮಾನ ಜಾರಿಗೆ ಬಂದು ದಶಕಗಳು‌ ಕಳೆದಿರುವ ಈ ಸಂದರ್ಭದಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗುವಂತ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಇಡೀ ಸಚಿವ ಸಂಪುಟ ಕಲಬುರಗಿ ಗೆ ಆಗಮಿಸುತ್ತಿರುವುದು ಹರ್ಷ ತಂದಿದೆ. ನನ್ನ ಮನವಿಗೆ ಓಗೊಟ್ಟು ಸಭೆ ನಡೆಸಲು ಒಪ್ಪಿರುವ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ನನ್ನ,‌ನಮ್ಮ ಭಾಗದ ಎಲ್ಲ ಶಾಸಕರ ಹಾಗೂ ಈ ಭಾಗದ ಎಲ್ಲ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಕಲಬುರಗಿ ಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದರಿಂದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯದಂತ ಕ್ಷೇತ್ರಗಳ ಅಭಿವೃದ್ದಿಗೆ ಸಹಕಾರಿಯಾಗಲಿದೆ ಮತ್ತು ಇದರಿಂದ ಮಹತ್ತರ ಬೆಳವಣಿಗೆಯಾಗಲಿದೆ.ಈ ಭಾಗದ ಅಭಿವೃದ್ದಿಗೆ ನಾನು ಹಾಗೂ ನಮ್ಮ‌ ಸರ್ಕಾರ ಸದಾ ಕಟಿಬದ್ಧವಾಗಿದ್ದು ಉದ್ದೇಶಿತ ಸಭೆ ನಮ್ಮೆಲ್ಲ ಆಶೋತ್ತರಗಳಿಗೆ ಸ್ಪಂದಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

About Mallikarjun

Check Also

screenshot 2025 11 26 19 05 13 35 e307a3f9df9f380ebaf106e1dc980bb6.jpg

ಗ್ಯಾರಂಟಿ ಯೋಜನೆಗಳು ಕಡುಬಡವರ ಬೆಳಕು: ವೀರಬಸಯ್ಯ ಕಾಡಗಿಮಠ

ಗ್ಯಾರಂಟಿ ಯೋಜನೆಗಳು ಕಡುಬಡವರ ಬೆಳಕು: ವೀರಬಸಯ್ಯ ಕಾಡಗಿಮಠ Guarantee schemes are a light for the poorest of …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.