Breaking News

ಗಂಗಾವತಿ ಕ್ಲಸ್ಟರ್‌ನ ಕನ್ಯಾ ಶಾಲೆಯಲ್ಲಿ೨೧ ದಿನಗಳ ಓದುವ ಅಭಿಯಾನಕಾರ್ಯಕ್ರಮ

At Kanya School, Gangavati Cluster 21 days reading campaign program

ಜಾಹೀರಾತು

ಗಂಗಾವತಿ: ೨೧ ದಿನಗಳ ಓದುವ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಇಂದು ಗಂಗಾವತಿ ಕ್ಲಸ್ಟರ್‌ನ ಕನ್ಯಾ ಶಾಲೆಯಲ್ಲಿ ಶ್ರೀ ಸೋಮಶೇಖರ್‌ಗೌಡ ಹಿರಿಯ ಉಪನ್ಯಾಸಕರು ಡಯಟ್ ಇವರಿಂದ ಉದ್ಘಾಟನೆ ಮಾಡಲಾಯಿತು.
ಇದರಲ್ಲಿ ಗಂಗಾವತಿ ವಲಯದ ಬಿ.ಆರ್.ಪಿ ಶ್ರೀಮತಿ ಪ್ರೀತಿ ಮೇಡಂ, ಬಿ.ಆರ್ ಜೋಶಿ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗಂಗಾವತಿ, ಗಂಗಾವತಿ ಕ್ಲಸ್ಟರ್‌ನ ಸಿ.ಆರ್.ಪಿ.ಸಿ ಜೆ ನಾಗರಾಜ್ ಇವರು ಉಪಸ್ಥಿತರಿದ್ದರು ಹಾಗೂ ಈ ಶಾಲೆಯ ಮುಖ್ಯ ಗುರುಗಳು ಹಾಗೂ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸೋಮಶೇಖರ ಗೌಡ ಉಪನ್ಯಾಸಕರು ಓದು ಅಭಿಯಾನದ ಪ್ರಾಸ್ತಾವಿಕ ನುಡಿಯನ್ನು ತಿಳಿಸಿದರು, ಓದುವ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಪುಸ್ತಕವು ಪ್ರತಿ ವ್ಯಕ್ತಿಯ ಉತ್ತಮ ಗೆಳೆಯ ಎಂದು ತಿಳಿಸಿದರು. ಎಲ್ಲಾ ಪುಸ್ತಕಗಳನ್ನು ಮಕ್ಕಳಿಗೂ ಹಾಗೂ ಶಿಕ್ಷಕರಿಗೂ ವಿತರಿಸಿ ಬೆಳಗ್ಗೆ ೧೧ ರಿಂದ ೧೧:೩೦ ರವರೆಗೆ ಪ್ರತಿ ಮಗುವಿಗೂ ಪುಸ್ತಕ ಓದಲು ತಿಳಿಸಿದರು. ಹಾಗೆಯೇ ಗ್ರಂಥಾಲಯದ ಶಿಕ್ಷಕಿಯಾದ ಶ್ರೀಮತಿ ಮಂಜುಳಾ ಮಕ್ಕಳಿಂದ ತಯಾರಿಸಿದ ಮಕ್ಕಳ ಕೈಪಿಡಿಯನ್ನು ಕೂಡ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಶಿಕ್ಷಕರು ಪುಸ್ತಕ ಓದುವ ಕಾರ್ಯಕ್ರಮದಲ್ಲಿ ತಮಗೆ ಇಷ್ಟವಾದ ಪುಸ್ತಕಗಳನ್ನು ತೆಗೆದುಕೊಂಡು ಓದಿದರು. ಪುಸ್ತಕ ಓದು ಅಭಿಯಾನದ ಮೊದಲನೇ ದಿನದ ಕಾರ್ಯಕ್ರಮವು ಸಂಪೂರ್ಣವಾಗಿ ಯಶಸ್ವಿಗೊಂಡಿತು.
ಈ ಸಂದರ್ಭದಲ್ಲಿ ಶಾಲೆಯ ಸಂಗೀತ ಶಿಕ್ಷಕರಾದ ಶ್ರೀ ಪಂಚಾಕ್ಷರಕುಮಾರ್ ಪ್ರಾರ್ಥನೆ ಸಲ್ಲಿಸಿ ನಿರೂಪಣೆ ಮಾಡಿದರು.

About Mallikarjun

Check Also

ತುರ್ವಿಹಾಳ್: ಪಟ್ಟಣ ಪಂಚಾಯತಿಯಿಂದ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ.

Turvihal: Cleanliness is a service program by the town panchayat. ಸಿಂಧನೂರು : ಸೆ 20 ಕೇಂದ್ರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.