Breaking News

ಕಲಬರಕೆ ಇಲ್ಲದ ಆಹಾರ ನೀಡೋಣ ಇದು ಉದ್ಯಮದಾರರ ಮೂಲಮಂತ್ರವಾಗಬೇಕು

Let’s provide unadulterated food, this should be the mantra of entrepreneurs

ಜಾಹೀರಾತು

ಸಿಂಧನೂರು :- ಕಲಬರಕೆ ಇಲ್ಲದ ಆಹಾರ ನೀಡೋಣ ಇದು ಉದ್ಯಮದಾರರ ಮೂಲ ಮಂತ್ರವಾಗಬೇಕೆಂದು ತಾಲೂಕ ಆಹಾರ ಸುರಕ್ಷತಾ ಅಧಿಕಾರಿ ಸುರಕ್ಷಿತ ಅಧಿಕಾರಿ ಗುರುರಾಜ್ ರವರು ಆಹಾರ ಸುರಕ್ಷತೆಯನ್ನು ಕುರಿತು ಜಾಗೃತಿ ಮೂಡಿಸಿದರು.
ನಗರದ ಗಂಗಾವತಿ ರಸ್ತೆಯಲ್ಲಿ ಚಾಟ್ಸ್ ಅಂಡ್ ಗೀಲ್ಸ್ ನಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ರಾಯಚೂರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ರಾಯಚೂರು ಆಹಾರ ಸುರಕ್ಷತೆ ಕುರಿತು ಜಾಗೃತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಹೋಟೆಲ್ ರೆಸ್ಟೋರೆಂಟ್ ಹಾಗೂ ಬೇಕರಿ ಕಿರಣಿ ಅಂಗಡಿಗಳಲ್ಲಿ ಆಹಾರ ಸುರಕ್ಷತೆ ಗುಣಮಟ್ಟದ ತಪಾಸಣೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಆದೇಶದ ಮೇರೆಗೆ ಮಂಗಳವಾರದಂದು ವಿಶೇಷ ಡ್ರೈವ್ ಮಾಡಲಾಗಿದೆ. ಈ ಕಾರ್ಯಗಾರದಲ್ಲಿ ವಿಶೇಷ ಅತಿಥಿಗಳಾದ ಹಿರಿಯ ಆರೋಗ್ಯ ನಿರೀಕ್ಷಕರು ಕಿಶೋರ್ ರಾವ್
ಮತ್ತು ಆಹಾರ ಸುರಕ್ಷಿತ ಅಧಿಕಾರಿ ಗುರುರಾಜ್ ಇವರ ಸಮ್ಮುಖದಲ್ಲಿ ಕಿರಾಣಿ ಅಂಗಡಿ ಹೋಟೆಲ್,ರೆಸ್ಟೋರೆಂಟ್ ಹಾಗೂ ಬೇಕರಿ ಮಾಲೀಕರಿಗೆ ಆಹಾರದ ಸುರಕ್ಷತೆ, ಸ್ವಚ್ಛತೆ ಆಹಾರ ಕಲಬೆರಿಕೆ ಆಹಾರ ತಯಾರಿಸುವ ಬಗ್ಗೆ ವೈಯಕ್ತಿಕ ಸ್ವಚ್ಛತೆ ಹಾಗೂ ಅಡುಗೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಸಾರ್ವಜನಿಕರ ಆಹಾರವನ್ನು ಸೇವಿಸುವಾಗ ಖರೀದಿಸುವಾಗ ಈ ಅಂಶಗಳನ್ನು ಗಮನಿಸಬೇಕು. ಎಫ್ ಎಸ ಎಸ್ ಎ ಐ ಲೇಖಲೆಯನ್ನು ಗಮನಿಸಿ ಮತ್ತು ಅವಧಿಪೂರ್ಣ ದಿನಾಂಕವನ್ನು ಪರೀಕ್ಷಿಸಬೇಕು.ಸಾರ್ವಜನಿಕರು ಸಾಮಾನ್ಯ ಆಹಾರ ಕಲಬೆರಿಕೆಯನ್ನು ಪರೀಕ್ಷಿಸಲು www.FSSAI gov. In ಹೋಗಿ DART ಪುಸ್ತಕವನ್ನು ಉಪಯೋಗಿಸಿ ಇದರಿಂದ ಕಲಬೆರಿಕೆ ಆಹಾರವನ್ನು ಕಂಡು ಹಿಡಿಯಬಹುದು. ಕಳಪೆ ಗುಣಮಟ್ಟದ ಕಂಡುಬಂದಲ್ಲಿ ಆಹಾರ ಗುಣಮಟ್ಟ ಕಾಯ್ದೆ 2006 ಪ್ರಕಾರ ಅನ್ವಯ. ಕ್ರಮ ಕೈಗೊಳ್ಳಲಾಗುವುದು.
ಸಿಂಧನೂರು ತಾಲೂಕಿನ ಎಲ್ಲಾ ಆಹಾರ ವಸ್ತುಗಳ ತಯಾರಕರು, ಸಂಸ್ಕರಣೆ ಹಾಗೂ ಸಾಗಣೆ ಮಾಡುವವರಿಗೆ ,ಆಹಾರ ಸುರಕ್ಷತೆ ಕುರಿತು ಜಾಗೃತ ಕಾರ್ಯಗಾರ ಸಿಂಧನೂರು ತಾಲ್ಲೂಕ ಆಹಾರ ಸುರಕ್ಷತೆಯ ಬಗ್ಗೆ ಆಹಾರ ಉದ್ದಿಮೆದಾರರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಆಹಾರ ನೋಂದಣಿ / ಪರವಾನಿಗೆ ಆಂದೋಲನ ವಿತರಕರು ಮಾರಾಟಗಾರರು ಕಡ್ಡಾಯವಾಗಿ ನೊಂದಣಿ ಪರವಾನಿಗೆ ಪಡೆಯಬೇಕು.
ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಇವರ ಸಸ್ಯಾಹಾರಿ (ವೆಜ್), ಮಾಂಸಾಹಾರಿ (ಚಿಕನ್) ಮತ್ತು ಕಬಾಬುಳಲ್ಲಿ ಕೃತಕ ಬಣ್ಣವನ್ನು ಬಳಸುವುದು ನಿರ್ಬಂಧಿಸಿದೆ. ಒಂದು ವೇಳೆ ಉಲ್ಲಂಘಿಸಿದ, ಪ್ರಕರಣ ಕಂಡು ಬಂದಲ್ಲಿ ಆಹಾರ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59 ರ ಅಡಿಯಲ್ಲಿ ಏಳು ವರ್ಷ ಜೀವಾವಧಿ ಜೈಲು ಶಿಕ್ಷೆ ಹಾಗೂ ಹತ್ತು ಲಕ್ಷ ರೂಪಾಯಿಗಳ ವರೆಗೆ ದಂಡ ವಿಧಿಸಲಾಗುವುದೆಂದು ಹೇಳಿದರು.
ಕಿರಾಣಿ ಅಂಗಡಿ ಅಂಗಡಿಗಳ ವರ್ತಕರ ಅಧ್ಯಕ್ಷರಾದ ನಾಮದೇಮಗೌಡ್ರು, ಉಪಾಧ್ಯಕ್ಷರಾದ ರಾಮಯ್ಯ ಶೆಟ್ಟಿ, ಬೇಕರಿ ಅಂಗಡಿಗಳ ವರ್ತಕರಾದ ನಾಗರಾಜ್, ಹೋಟೆಲ್ ಅಂಗಡಿಗಳ ಅಧ್ಯಕ್ಷರಾದ ಪ್ರಸಾದ್, ಸಾವಜಿ ಅಂಗಡಿಗಳ ವರ್ತಕರ ಅಧ್ಯಕ್ಷರಾದ ನಾಗರಾಜ್ ಕಾಟ್ವಾ, ಕಿರಾಣಿ ಅಂಗಡಿಗಳ ವರ್ತಕರ ಅಧ್ಯಕ್ಷರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.