Chikkodi: Appeal to the Chikkodi unit manager demanding to fix the arrangement of buses on the Nippani-Chikkodi route.
ಚಿಕ್ಕೋಡಿ-ನಿಪ್ಪಾಣಿ ಮತ್ತು ನಿಪ್ಪಾಣಿ-ಚಿಕ್ಕೋಡಿ ಮಾರ್ಗ ಮದ್ಯೆ ದಿನನಿತ್ಯ ನೂರಾರು ಬಸ್ಸಗಳು ಓಡಾಡುತ್ತಿವೆ, ಆದರೆ ಯಾವ ಸಮಯಕ್ಕೆ ಬೇಕು ಆ ಸಮಯಕ್ಕೆ ಬಸ್ಸಗಳು ಇರುವುದಿಲ್ಲ, ಮುಂಜಾನೆ 9:30 ರಿಂದ 10:30 ರ ಹಾಗೂ ಸಂಜೆ 4:30 ರಿಂದ 5:30 ರ ವೇಳೆಯಲ್ಲಿ ಶಾಲಾ ಮಕ್ಕಳ ಪ್ರಯಾಣ ಇರುತ್ತದೆ, ಆದರೆ ಈ ಸಮಯದಲ್ಲಿ ಬಸ್ಸಗಳು ಇರದೇ, ಸಮಯಕ್ಕೆ ಮುಂಚೆನೇ ಒಮ್ಮೆಲೆ 3-4 ಬಸ್ಸಗಳು ಓಡುತ್ತಲಿವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಚಾಲಕ-ನಿರ್ವಾಹಕರು ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಓಡಿಸದೇ ಜನದಟ್ಟನೆಯಾಗುತ್ತದೆ ತಮಗೆ ತೊಂದರೆ ಬೇಡಾ ಎಂದು, ವೇಳಾಪಟ್ಟಿಯನ್ನು ಉಲ್ಲಂಘಿಸಿ ತಮ್ಮ ಇಷ್ಟದಂತೆ ಓಡಿಸುತ್ತಿದ್ದಾರೆ, ಇದರಿಂದ ಜನರಿಗೆ ತೊಂದರೆ ಹಾಗೂ ಸಂಸ್ಥೆಗೆ ಹಾನಿ ಮಾಡುತ್ತಿದ್ದಾರೆ ಎಂದು ಹೇಳಿದರು, ಆರ್. ಡಿ. ಮಹಾವಿದ್ಯಾಲಯದ ಪ್ರಾಂಶುಪಾಲರಾದ, ಪ್ರೋ. ಉತ್ತಮ ಶಿಂದೆ ಮಾತನಾಡಿ, ಮುಂ. 9:30 ರಿಂದ 10:30 ರ ಹಾಗೂ ಸಂಜೆ 4:30 ರಿಂದ 5:30 ರ ಸಮಯದಲ್ಲಿ ಕಣಿಷ್ಟ 0:15 ನಿಮಿಷ್ಯಕ್ಕೆ ಒಂದರಂತೆ ಬಸ್ಸುಗಳನ್ನು ಓಡಿಸಲು ಸೂಚಿಸಿ ಹಾಗೂ ಪ್ರತಿಯೊಂದು ತಂಗುದಾನಗಳಲ್ಲಿ ಬಸ್ಸ ನಿಲ್ಲಿಸುವ ವ್ಯವಸ್ಥೆ ಮಾಡಿ, ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಶ್ರಿ ಅಲ್ಲಮಪ್ರಭು ಅನ್ನದಾನ ಸಮಿತಿ ಅಧ್ಯಕ್ಷರಾದ ರಣಜೀತ ಶಿಂದೆ, ಗಣ್ಯ ವ್ಯಾಪಾರಸ್ಥರಾದ ರವೀಂದ ಹಂಪಣ್ಣವರ ಹಾಗೂ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ ಉಪಸ್ಥಿತರಿದ್ದರು.