On August 29, the election for the election of the chairman and vice-chairman of Manvi municipality
ಮಾನ್ವಿ: ಮಾನ್ವಿ ಪುರಸಭೆಯ ಚುನಾವಣಾಧಿಕಾರಿಗಳಾಗಿರುವ ತಹಸೀಲ್ದರ್ ರಾಜುಪಿರಂಗಿ ಮಾತನಾಡಿ ಪುರಸಭೆ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಅಯ್ಕೆಗಾಗಿ ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ( ಅ)ಮಹಿಳೆ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟಜಾತಿ ಮಹಿಳೆ ಮೀಸಲಾತಿ ಇದ್ದು ಪುರಸಭೆ ಕಾರ್ಯಲಾಯದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆ.29 ರಂದು ಬೆ.10 ಗಂಟೆ ಯಿಂದ 11 ಗಂಟೆ ವರೆಗೆ ನಾಮನಿರ್ದೇಶನಗಳನ್ನು ಸಲ್ಲಿಸಬಹುದಾಗಿದೆ. ಮಧ್ಯಾಹ್ನ 1 ರಿಂದ ನಾಮ ನಿರ್ದೇಶನಗಳನ್ನು ಪರಶೀಲನೆ ನಡೆಸಲಾಗುವುದು. 1.10 ಕ್ಕೆ ನಾಮಪತ್ರಗಳನ್ನು ಹಿಂತೆಗೆದು ಕೊಳ್ಳಬಹುದಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದಲ್ಲಿ ಮೊದಲು ಅಧ್ಯಕ್ಷರ ನಂತರ ಉಪಾಧ್ಯಕ್ಷರ ಚುನಾವಣೆಯನ್ನು ಕೈ ಎತ್ತುವ ಮೂಲಕ ನಡೆಸಲಾಗುವುದು.