The work of misleading people: Minister’s fight is not right: A lesson for the future
ಸಿಂಧನೂರು,ಆ.೧೭ :ಅನಿರೀಕ್ಷಿತವಾಗಿ ತುಂಗಭದ್ರಾ ಜಲಾಶಯ ೧೯ನೇ ಕ್ರಸ್ಟ್ಗೇಟ್ ಕೊಚ್ಚಿಕೊಂಡು ಹೋಗಿದ್ದು, ಅಳವಡಿಕೆ ವಿಚಾರದಲ್ಲಿ ಈ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕೆಲವು ಸಂಘ ಸಂಸ್ಥೆಗಳು ರೈತರನ್ನು, ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಆರೋಪಿಸಿದರು.
ಈ ಕುರಿತು ಮಾತನಾಡಿರುವ ಅವರು, ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ಕೊಚ್ಚಿ ಹೋದಾಗಿನಿಂದಲೂ ತಜ್ಞರ ನೇತೃತ್ವದಲ್ಲಿ ಅಳವಡಿಸಲು ರಾಜ್ಯ ಸರಕಾರದ ಪರವಾಗಿ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ಸಚಿವರ, ಸಂಸದರು, ಶಾಸಕರು ಅವಿರತ ಶ್ರಮಿಸುತ್ತಿದ್ದಾರೆ. ಬಚಾವತ್ ಆಯೋಗದ ವರದಿಯನ್ವಯ ಎಡ-ಬಲದಂಡೆ ಕಾಲುವೆ, ನದಿಗೆ ನೀರು ನಿಗದಿಗೊಳಿಸಲಾಗಿದೆ. ತುಂಗಾಭದ್ರ ಬೋರ್ಡ್ ಕೇಂದ್ರ ಸರಕಾರದ ವ್ಯಪ್ತಿಯಲ್ಲಿ ಬರುತ್ತದೆ. ಜಲಾಶಯದ ೩೩ ಗೇಟ್‌ಗಳ ನಿರ್ವಹಣೆ, ದುರಸ್ಥಿ ನೀರಿನ ಸಂಗ್ರಹದ ಲೆಕ್ಕಾಚಾರ ನಿರ್ಧಾರ ಸಂಪೂರ್ಣ ಬೋರ್ಡ್ನ ವ್ಯಪ್ತಿಗೆ ಒಳಪಡುತ್ತದೆ. ಈ ಬಗ್ಗೆ ಗೊತ್ತಿದ್ದರೂ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ ಒಮ್ಮೆ ಮಾತ್ರ ಜಲಾಶಯಕ್ಕೆ ಭೇಟಿ ನೀಡಿ, ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾದರು. ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವದರಿಂದ ಕೇಂದ್ರದ ಒತ್ತಡ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆಪಾದಿಸಿದರು.
ನೀರಿನ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ರಾಜಕಾರಣ ಮಾಡುತ್ತಿರುವದು ಸರಿಯಲ್ಲ. ಶುಕ್ರವಾರ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ವಿರುದ್ದ ಕೆಲವು ಸಂಘ ಸಂಸ್ಥೆಗಳು ಪ್ರತಿಭಟನೆಗೆ ಮುಂದಾಗಿದ್ದು ಸರಿಯಲ್ಲ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಬಂದು ವೀಕ್ಷಣೆ ಮಾಡಿ, ಸರಕಾರದಿಂದ ಅಗತ್ಯ ಹಣಕಾಸಿನ ನೆರವು ನೀಡುವದಾಗಿ ಘೋಷಣೆ ಮಾಡಿದ್ದಾರೆ. ಒಂದು ವಾರದಿಂದ ಸಚಿವ ಶಿವರಾಜ ತಂಗಡಗಿ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ತಾವು, ರಾಘವೇಂದ್ರ ಹಿಟ್ನಾಳ, ಗವಿಯಪ್ಪ, ಆರ್.ಬಸನಗೌಡ ಸೇರಿದಂತೆ ಅನೇಕರು ಇಲ್ಲೇ ಇದ್ದು, ನೀರಾವರಿ ಇಲಾಖೆ ಕಾರ್ಯದರ್ಶಿ ಕುಲ್ಕಣಿ, ವ್ಯವಸ್ಥಾಪಕ ನಿರ್ದೇಶಕ ರಾಜೇಶ, ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಜಲಾಶಯಗಳ ಗೇಟ್ ತಜ್ಞ ಕನ್ನಯ್ಯ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜಲಾಶಯದಲ್ಲಿ ನೀರು ಉಳಿಸುವ ಮೂಲಕ ಈಗಾಗಲೇ ಮೂರು ಗೇಟ್ ಸಾಫ್ಟ್ ಗೇಟ್‌ಗಳನ್ನು ಆಳವಡಿಸಲಾಗಿದೆ ಎಂದರು.
ಒAದು ದಿನ ಕಾಟಾಚಾರಕ್ಕೆ ಎಂಬAತೆ ಬಂದು ಹೋದ ಬಿಜೆಪಿ, ಜೆಡಿಎಸ್ ನಾಯಕರು ಈಗ ನಾಪತ್ತೆಯಾಗಿದ್ದಾರೆ. ಅವರೇ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಬೇಕಿತ್ತು. ಬರಿ ರಾಜ್ಯದ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು. ತುಂಗಭದ್ರಾ ಜಲಾಶಯದ ವ್ಯಾಪ್ತಿಯ ರೈತರು, ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ, ಜೆಡಿಎಸ್‌ಗೆ ಮುಂದಿನ ದಿನಗಳಲ್ಲಿ ಜನರೇ ಪಾಠ ಕಲಿಸಬೇಕಿದೆ ಎಂದರು.