Breaking News

೨.೫ ಕೋಟಿ ರೂ.ಬಹುಮಾನ ನಿರಾಕರಿಸಿದ ರಾಹುಲ್‌ ದ್ರಾವಿಡ್

Rahul Dravid refused the Rs 2.5 crore prize

ಜಾಹೀರಾತು


ಬೆಂಗಳೂರು, ಜು. ೧೦- ಭಾರತದ ಮಹಾಗೋಡೆ ರಾಹುಲ್‌ ದ್ರಾವಿಡ್‌ ಅರು ಮತ್ತೊಮೆ ಹೃದಯಸ್ರ‍್ಶಿ ಗುಣವನ್ನು ಮೆರೆದಿದ್ದಾರೆ. ವೆಸ್ಟ್‌ಇಂಡೀಸ್‌‍ನ ಬರ‍್ಬಡೋಸ್‌‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ೭ ರನ್‌ಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಬಿಸಿಸಿಐ ೧೨೫ ಕೋಟಿ ರೂ.ಗಳ ಬಹುಮಾನದ ಮೊತ್ತವನ್ನು ಘೋಷಿಸಿತ್ತು ಈ ಸಂರ‍್ಭದಲ್ಲಿ ೧೧ ರ‍್ಷಗಳ ನಂತರ ಭಾರತ ತಂಡವು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಬಿಸಿಸಿಐ ಹೆಚ್ಚುವರಿಯಾಗಿ ೨.೫ ಕೋಟಿ ರೂ.ಗಳನ್ನು ಬಹುಮಾನದ ರೂಪದಲ್ಲಿ ನೀಡಲು ಮುಂದಾಗಿತ್ತು.
ಆದರೆ ಈ ಚಾಂಪಿಯನ್‌ ಪಟ್ಟ ಅಲಂಕರಿಸುವಲ್ಲಿ ನನ್ನೊಬ್ಬ ಶ್ರಮ ಮಾತ್ರವಿಲ್ಲ ಇಡೀ ಆಟಗಾರರ ಪರಿಶ್ರಮವೂ ಇದೆ ಎಂದು ಅರಿತ ರಾಹುಲ್‌ ದ್ರಾವಿಡ್‌, ಬಿಸಿಸಿಐಗೆ ಎಲ್ಲಾ ಆಟಗಾರರಿಗೂ ಸಮಾನ ಬಹುಮಾನ ಮೊತ್ತವನ್ನು ಘೋಷಿಸಬೇಕೆಂದು ಮನವಿ ಮಾಡಿದ್ದರು.

ರಾಹುಲ್‌ ದ್ರಾವಿಡ್‌ ಇಂತಹ ಹೃದಯಸ್ರ‍್ಶಿ ಭಾವನೆ ತೋರಿರುವುದು ಇದೇ ಮೊದಲಲ್ಲ. ೨೦೧೮ ರಲ್ಲಿ, ಭಾರತವು ೧೯ ಪುರುಷರ ವಿಶ್ವಕಪ್‌ ಟ್ರೋಫಿಯನ್ನು ಗೆದ್ದ ನಂತರ, ಆಗಿನ ಕೋಚ್‌ ದ್ರಾವಿಡ್‌ಗೆ ೫೦ ಲಕ್ಷ ರೂಪಾಯಿ ಬಹುಮಾನ, ಹಾಗೂ ತಂಡದ ಇತರ ಸದಸ್ಯರಿಗೆ ರೂ. ೨೦ ಲಕ್ಷ ಮತ್ತು ಆಟಗಾರರಿಗೆ ರೂ. ೩೦ ಲಕ್ಷ ಬಹುಮಾನವನ್ನು ಘೋಷಿಸಿತು
ಬಹುಮಾನದ ಹಣವನ್ನು ಕೋಚಿಂಗ್‌ ಸಿಬ್ಬಂದಿಗೆ ಸಮನಾಗಿ ಹಂಚುವಂತೆ ದ್ರಾವಿಡ್‌ ಭಾರತೀಯ ಕ್ರಿಕೆಟ್‌ ಮಂಡಳಿಯನ್ನು ಕೇಳಿದ್ದರು ಮತ್ತು ಮಂಡಳಿಯು ಅವರ ಮನವಿಗೆ ಒಪ್ಪಿಗೆ ಸೂಚಿಸಿತು.

`ಭಾರತ ತಂಡದೊಂದಿಗಿನ ರಾಹುಲ್‌ ದ್ರಾವಿಡ್‌ ಅವರ ಸೇವಾವಧಿಯಲ್ಲಿ ಅವರ ಸೇವೆ ಮತ್ತು ಅವರ ಪ್ರಯತ್ನಕ್ಕಾಗಿ ಶ್ರೀ ರಾಹುಲ್‌ ದ್ರಾವಿಡ್‌ ಮತ್ತು ಅವರ ಬೆಂಬಲ ಸಿಬ್ಬಂದಿ ತಂಡಕ್ಕೆ ನಾವು ಧನ್ಯವಾದಗಳನ್ನು ರ‍್ಪಿಸುತ್ತೇವೆ. ಅವರ ಗರಡಿಯಲ್ಲಿ ತಂಡವು ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿ ಯಶಸ್ಸಿನ ಘಟ್ಟ ತಲುಪಿದೆ.

ಅದೇ ರೀತಿ ೨೦೨೪ರ ಟ್ವೆಂಟಿ-೨೦ ವಿಶ್ವಕಪ್‌ ಟರ‍್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಈ ಅಭೂತಪರ‍್ವ ಕ್ಷಣವು ಸಾಕಷ್ಟು ದಿನಗಳ ಕಾಲ ಅವಿಸರಣೀಯವಾಗಿ ಉಳಿಯುತ್ತದೆ’ ಎಂದು ಬಿಸಿಸಿಐ ಕರ‍್ಯರ‍್ಶಿ ಜಯ್‌ಶಾ ಕನ್ನಡಿಗ ರಾಹುಲ್‌ ದ್ರಾವಿಡ್‌ರನ್ನು ಶ್ಲಾಘಿಸಿದ್ದಾರೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.