
ಗಂಗಾವತಿ, 26:ನಗರದಲ್ಲಿ ದಿನಾಂಕ 25-04-2024 ರಂದು ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ ಮತ್ತು ಡಾ:ಎಸ್.ವಿ.ಸವಡಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಟ್ಯಾಲೆಂಟ್ ಟೆಸ್ಟ್ ಏರ್ಪಡಿಸಲಾಗಿತ್ತು, ಈ ಒಂದು ಪರೀಕ್ಷೆಯ ಕಾರ್ಯಕ್ರಮವನ್ನು ಡಾ.ಈಶ್ವರ ಶಿ, ಸವಡಿ ಮುಖ್ಯ ವೈದ್ಯಾಧಿಕಾರಿಗಳು ಗಂಗಾವತಿ ಉಪ ವಿಭಾಗ ಆಸ್ಪತ್ರೆ ಇವರು ಉದ್ಘಾಟಿಸಿ ಮುಂದಿನ ತಮ್ಮ ಭವಿಷ್ಯಕ್ಕಾಗಿ ಮತ್ತು ಮುಂದೆ ಅವರು ಸ್ವಾವಲಂಬಿಗಳಾಗಿ ಬದುಕಲು ಇರುವ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಮುಂದೆ ತಾವು ಸ್ವಾವಲಂಬಿಗಳಾಗಿ ಬದುಕಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಸಂಸ್ಥೆಯ ಅದ್ಯಕ್ಷರಾದ ಡಾ.ಬಸವರಾಜ ಸವಡಿ ಅವರು ಮಾತನಾಡಿ, ಇದೊಂದು ಸುವರ್ಣ ಅವಕಾಶ ಈಗಾಗಲೇ 2024-25ನೇ ಸಾಲಿಗೆ ಪ್ರವೇಶಾತಿಗಳು ಪ್ರಾರಂಭಗೊಂಡಿರುತ್ತದೆ ಮತ್ತು ಈ ವರ್ಷ ಸಂಸ್ಥೆಯ ವತಿಯಿಂದ ಉತ್ತಮ ಅಂಕವನ್ನು ಪಡೆಯುವುದಕ್ಕಾಗಿ ಸಂಸ್ಥೆಯಿಂದ ಸ್ಪೂರ್ತಿ ಟ್ಯಾಲೆಂಟ್ ಟೆಸ್ಟ್ ಪರೀಕ್ಷೆಯನ್ನು ಏರ್ಪಡಿಸಲಾಗಿದೆ, ಇದರಲ್ಲಿ ರಾಂಕ್ ಬಂದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುವುದು ಎಂದು ತಿಳಿಸಿದರು. ಈ ಒಂದು ಪರೀಕ್ಷೆ ಯಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು. ಟ್ಯಾಲೆಂಟ್ ಪರೀಕ್ಷೆಯನ್ನು ಸಂಸ್ಥೆಯ ಪ್ರಾಂಶುಪಾಲರು ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಯಶಸ್ವಿಗೊಳಿಸಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ. ಬಸವರಾಜ್ ಸವಡಿ ಅವರು ಅಭಿನಂದನೆಯನ್ನು ತಿಳಿಸಿದರು.
Kalyanasiri Kannada News Live 24×7 | News Karnataka
