Breaking News

ಶೆಟ್ಟಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಶಂಕುಸ್ಥಾಪನೆ

Foundation stone laying of Ambedkar Bhawan in Shettihalli village.

ಜಾಹೀರಾತು

ತಿಪಟೂರು:ಶೆಟ್ಟಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಶಂಕುಸ್ಥಾಪನೆ. ಶಾಸಕರಾದ ಕೆ.ಷಡಕ್ಷರಿ . ತಿಪಟೂರು ತಾಲೂಕು ಶೆಟ್ಟಿಹಳ್ಳಿ ಗ್ರಾಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನ ಗುದ್ದಲಿ ಪೂಜೆ ನೆರವರಿಸಿ ಮಾತನಾಡಿ ಅಂಬೇಡ್ಕರ್ ಭವನ ಕಟ್ಟಿಕೊಂಡು ಸಾರ್ವಜನಿಕವಾಗಿ ಉಪಯೋಗಿಸಿಕೊಳ್ಳಿ ಈ ಗ್ರಾಮ ನನಗೆ ಹೊಸದೇನಲ್ಲ, ಪರಿಶಿಷ್ಟ ಜಾತಿ ಜನಾಂಗಕ್ಕೆ ಉಪಯುಕ್ತವಾಗುವಂತೆ ನೀವು ಕೇಳಿರುವ 50 ಮನೆ ನಿವೇಶನವನ್ನು ನಾನು ಪ್ರಾಮಾಣಿಕವಾಗಿ ಕಾನೂನು ವ್ಯಾಪ್ತಿಯಲ್ಲಿ ಅಧಿಕಾರಿಗಳಿಗೆ ಹೇಳಿ ಕೆಲಸ ಮಾಡಲು ಪ್ರಯತ್ನ ಪಡುತ್ತೇನೆ . ನಾವು ಎಲ್ಲ ಯೋಜನೆಗಳನ್ನು ಕೊಟ್ಟಿದ್ದೇವೆ. ಕೊಡದಿದ್ದರೆ ಬರಗಾಲದಲ್ಲಿ ತೊಂದರೆಯಾಗುವುದು ಎಂದು ನಿಮ್ಮ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನ್ಯಾಕೇನಹಳ್ಳಿ ಸುರೇಶ್ ಮಾತನಾಡಿ ಶೆಟ್ಟಿಹಳ್ಳಿ ಈ ಗ್ರಾಮ ನಮಗೆ ಯಾವಾಗಲೂ ಬೆಂಬಲಕ್ಕೆ ನಿಂತ ಊರಾಗಿದೆ. ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಕೊಡುತ್ತೇವೆ ನೀರಾವರಿ ಮತ್ತು ರಸ್ತೆಗಳಿಗೆ ಹೆಚ್ಚಿಗೆ ಆದ್ಯತೆ ನೀಡುತ್ತೇನೆ ನೀವು ಕೇಳಿರುವ 50 ಮನೆ ನಿವೇಶನಗಳನ್ನು ಗುರುತು ಮಾಡಲು ನಾನು ಸಹ ಸಹಕರಿಯಾಗುತ್ತೇನೆ.

ಕಾರ್ಯಕ್ರಮದಲ್ಲಿ ಕರಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗಂಗಮ್ಮ. ಉಪಾಧ್ಯಕ್ಷರಾದ ಮುನಿರಾಜ್.. ಪಿಡಿಒ ಕವಿತಾ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಕುಪ್ಪಾಳು ಅಧ್ಯಕ್ಷರಾದ ಸಿದ್ದಲಿಂಗ ಮೂರ್ತಿ. ಗ್ರಾ,ಪಂ ಸದಸ್ಯರಾದ ಕುಮಾರಯ್ಯ. ರವೀಶ್. ಕಾರ್ಯಕ್ರಮದ ಆಯೋಜಕರಾದ ಶೆಟ್ಟಿಹಳ್ಳಿ ಕಲ್ಲೇಶ್, ಬೈರಾಪುರ ಶೇಖರಯ್ಯ, ಡಿ ಎಸ್ಎಸ್ ಅಧ್ಯಕ್ಷರು, ಶಿವಣ್ಣ, ಶಿವಲಿಂಗಯ್ಯ, ತಿಮ್ಮಪ್ಪ, ಚಿಕ್ಕಣ್ಣ, ನಾಗರಾಜ್, ನವೀನ್ ಕುಮಾರ್, ಅರ್ಚಕರಾದ ರವಿಕುಮಾರ್, ಮಂಜುನಾಥ್, ಸಂತೋಷ್,ಗ್ರಾಮಸ್ಥರು ಉಪಸ್ಥಿತರಿದ್ದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.