Breaking News

ಪೋಷಕರ ನಡೆ, ಅಂಗನವಾಡಿ ಕಡೆ’

Parents’ move towards Anganwadi

ಜಾಹೀರಾತು


ಕುಷ್ಟಗಿ : ತಾಲ್ಲೂಕಿನ ಅಡವಿಭಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲಕಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ‘ಪೋಷಕರ ನಡೆ, ಅಂಗನವಾಡಿ ಕಡೆ’ ಎಂಬ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಾದ ಶ್ರೀ ಮತಿ ಯಲ್ಲಮ್ಮ ಹಂಡಿ ಇವರ ಆದೇಶದ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀ ಮತಿ ಶೋಭಾ ನಾಯಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು,
ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರದಲ್ಲಿ 3 ವರ್ಷದಿಂದ 6 ವರ್ಷದ ಮಕ್ಕಳಿಗೆ ವೇಳಾಪಟ್ಟಿಗೆ ಅನುಗುಣವಾಗಿ ಚಟುವಟಿಕೆ ನಡೆಸುವ ಬಗ್ಗೆ ಪಾಲಕರಿಗೆ ತಿಳಿಸಿಕೊಟ್ಟರು.
ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ, ಪಾಲಕರು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದರು.
ನಂತರ ಮಾತನಾಡಿದ ಅಂಗನವಾಡಿ ಶಿಕ್ಷಕಿ ಶ್ರೀ ಮತಿ ಸವಿತಾ ಆದಪ್ಪ ಕಬ್ಬಿಣದ್ ಇವರು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬು ನಾಣ್ಣುಡಿಯಂತೆ ಒಂದು ಸಸ್ಯದ ಬೆಳವಣಿಗೆಗೆ ಉತ್ತಮ ಗುಣಮಟ್ಟದ ಬೀಜವೇ, ಆಧಾರವಾಗಿರುತ್ತದೆ. ಅದೇರೀತಿ ಸಾಮಾನ್ಯ ತತ್ತ್ವವನ್ನು ಹೇಳುವ ಬೆಳೆಯುವ ಸಿರಿ – ಮೊಳಕೆಯಲ್ಲಿ ಎಂಬ ಗಾದೆ ಮಾನವನ ಬದುಕು, ವ್ಯಕ್ತಿತ್ವಗಳು ರೂಪುಗೊಳ್ಳುವ ಬಗೆಯನ್ನು ಸೂಚಿಸುತ್ತದೆ. ಮಾನವನ ವ್ಯಕ್ತಿತ್ವ ರೂಪುಗೊಳುವುದು ಬಾಲ್ಯದ ಎಳೆತನದ ಹಂತದಲ್ಲೇ. ಒಂದು ಕಟ್ಟಡದ ಭದ್ರತೆಗೆ ತಳಪಾಯ ಅತಿಮುಖ್ಯವಾದರೆ, ಬಾಲ್ಯಾವಸ್ಥೆ ಮಾನವನ ವ್ಯಕ್ತಿತ್ವ ವಿಕಸನದ ತಳಪಾಯವಾಗಿದೆ. ಬಾಲ್ಯದಲೇ ಉತ್ತಮ ಶಿಕ್ಷಣ, ನಡವಳಿಕೆ, ಸಭ್ಯತೆ, ಸದ್ಗುಣ, ಇವುಗಳನ್ನು ರೂಢಿಸಿಕೊಂಡು ಬೆಳೆದ ಮೇಲೆ ಅದೇ ಗುಣಗಳನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋದರೆ ಉತ್ತಮ ಪ್ರಜೆಯಾಗಬಹುದು. ಸ್ವಾಮಿ ವಿವೇಕಾನಂದರಾಗಿ ಪ್ರಸಿದ್ದಿ ಪಡೆದ ಮಹಾಪುರುಷನ ವ್ಯಕ್ತಿತ್ವ ಆತ ಬಾಲ್ಯದಲ್ಲಿ ನರೇಂದ್ರನಾಗಿದ್ದ ಕಾಲದಲೇ ಗಮನಾರ್ಹನಾಗಿ ಬೆಳೆಯ ತೊಡಗಿತು.
ಅದೇ ರೀತಿ ಬುದ್ಧ, ಬಸವ, ಅಂಬೇಡ್ಕರ್ ಮೊದಲಾದ ಮಹಾಪುರುಷರ ಜೀವನ ಒಂದು ಆದರ್ಶವಾಗಿದೆ. ಬೆಳೆಯುವ ಸಿರಿಯನ್ನು ಮೊಳಕೆಯಿಂದಲೇ ಚೆನ್ನಾಗಿ ಆರೈಕೆ ಮಾಡಬೇಕು. ಅದೇ ರೀತಿ ಬಾಲ್ಯದಿಂದಲೇ ಸಜ್ಜನರ, ಸಾಹಸಶೀಲರ, ಉತ್ತಮ ಗುಣಮಟ್ಟದ ಪುಸ್ತಕಗಳನ್ನಾಗಲೀ ಅಥವಾ ಅಂತಹ ಸಜ್ಜನರ ಸಹವಾಸದಿಂದಾಗಲೀ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಕ್ಕಳ ಕಲಿಕಾ ಚಟುವಟಿಕೆಯ ಆಟಿಕೆ ಸ್ವಾಮಾನುಗಳ ಪ್ರದರ್ಶನಗಳೊಂದಿಗೆ ಅತ್ಯಂತ ಮಾರ್ಮಿಕವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಸಹಾಯಕಿ ರತ್ನಮ್ಮ ಮೂಲಿಮನಿ ಹಾಗು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನೊಂದಣಿಗೊಂಡ ಎಲ್ಲಾ ಮಕ್ಕಳ ತಾಯಂದಿರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.