Breaking News

ಸ್ವಾಭಿಮಾನಿ ಶರಣಮೇಳ ದಲ್ಲಿ ಭಾಗವಹಿಸಲು ಕರೆ.

Call to participate in Swabhimani Sharan.

ಜಾಹೀರಾತು

ಸ್ವಾಭಿಮಾನಿ ಶರಣ ಜರಗುವ ಸ್ಥಳ ಹೂವನೂರು, ಕೂಡಲ ಸಂಗಮ ಕ್ರಾಸ್, ತಾ।। ಹುನಗುಂದ ಜಿ। ಬಾಗಲಕೋಟೆ ಕರ್ನಾಟಕ ರಾಜ್ಯ ದಿನಾಂಕ: 2024, ಜನವರಿ 13 ರಿಂದ 15ರ ವರೆಗೆ

ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಸುಕ್ಷೇತ್ರದಲ್ಲಿ ವಿಶ್ವದ ಪ್ರಥಮ ಮಹಿಳಾ ಮಹಾಜಗದ್ಗುರುಗಳು ಹಾಗೂ ಧರ್ಮ ಕ್ರಾಂತಿಯ ಧೀರಯೋಗಿಯಾಗಿರುವ ಪ್ರವಚನ ಪಿತಾಮಹ ಪೂಜ್ಯ ಶ್ರೀ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳವರು ಹಾಗೂ ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು ಕೂಡಲ ಸಂಗಮ ಕ್ಷೇತ್ರವನ್ನು ಲಿಂಗಾಯತ ಧರ್ಮಿಯರ ಪವಿತ್ರ ಧರ್ಮಕ್ಷೇತ್ರವೆಂದು ಗುರುತಿಸಿ 1988 ರಲ್ಲಿ ಪ್ರಪ್ರಥಮ ಶರಣ ಮೇಳವನ್ನು ಆರಂಭಿಸಿದರು. 1992ರಲ್ಲಿ ಪೂಜ್ಯ ಡಾ. ಮಾತೆ ಮಹಾದೇವಿಯವರು ಬಸವ ಧರ್ಮದ ಮಹಾಜಗದ್ಗುರು ಪೀಠವನ್ನು ಸ್ಥಾಪಿಸಿ ಪೂಜ್ಯ ಲಿಂಗಾನಂದ ಸ್ವಾಮೀಜಿಯವರನ್ನು ಪ್ರಥಮ ಪೀಠಾಧ್ಯಕ್ಷರನ್ನಾಗಿ ಮಾಡಿದರು. ಪೂಜ್ಯ ಅಪ್ಪಾಜಿಯವರು 1995ರ ಜೂನ್ 30 ರಂದು ಲಿಂಗೈಕ್ಯರಾದ ನಂತರ ಜನವರಿ 13, 1996 ರಂದು ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಮಹಾಜಗದ್ಗುರು ಪೀಠದ 2ನೆ ಪೀಠಾಧಿಕಾರಿಗಳಾದರು.

1996ರಿಂದ 2019ರ ವರೆಗೆ ಪೂಜ್ಯ ಮಾತಾಜಿಯವರು 24 ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಶರಣ ಮೇಳ ನಡೆಸಿಕೊಂಡು ಬಂದರು. ಲಿಂಗಾಯತ ಧರ್ಮಕ್ಕೆ ಒಂದು ಚೌಕಟ್ಟನ್ನು ಹಾಕಿಕೊಟ್ಟರು. ಪೂಜ್ಯ ಮಾತಾಜಿಯವರು ಮಾರ್ಚ್ 14, 2019 ರಂದು ಲಿಂಗೈಕ್ಯರಾದರು. ಪರಮ ಪೂಜ್ಯ ಮಾತಾಜಿಯವರ ಸಂಕಲ್ಪಗಳನ್ನು ಸಾಕಾರಗೊಳಿಸಲು ಬಸವ ಧರ್ಮದ ಸಂಸ್ಥಾಪನಾ ದಿನದ ನಿಮಿತ್ಯ ಸ್ವಾಭಿಮಾನಿ ಶರಣ ಮೇಳ ಆಯೋಜಿಸಲು ತೀರ್ಮಾನಿಸಲಾಯಿತು. ಸ್ವಾಭಿಮಾನಿಗಳು, ತತ್ವನಿಷ್ಠರೂ ಹಾಗೂ ಲಿಂಗಾನಂದ ಅಪ್ಪಾಜಿ ಹಾಗೂ ಬಸವಾತ್ಮಜೆಯ ಕರುಳಿನ ಕುಡಿಗಳಾದ ತಾವು ತನು ಮನ ಧನದಿಂದ ಸಹಕರಿಸಬೇಕಾಗಿ ಕೋರುತ್ತೇವೆ.

ಜನವರಿ 13 ರಿಂದ 15 ರ ವರೆಗೆ ಮೂರು ದಿವಸಗಳ ಕಾಲ ಸ್ವಾಭಿಮಾನಿ ಶರಣ ಮೇಳ ಧರ್ಮಕ್ಷೇತ್ರ ಕೂಡಲ ಸಂಗಮದಲ್ಲಿ ನಡೆಯಲಿದೆ. ದಿನಾಂಕ : 13 ರಂದು ಸ್ವಾಭಿಮಾನಿ ಶರಣ ಮೇಳದ ಉದ್ಘಾಟನೆ ಧರ್ಮ ಚಿಂತನ ಗೋಷ್ಠಿ, ಯುವ ಗೋಷ್ಠಿ, ದಿನಾಂಕ : 14 ರಂದು ಸಮುದಾಯ ಪ್ರಾರ್ಥನೆ ಸಾಮೂಹಿಕ ಇಷ್ಟಲಿಂಗ ಪೂಜೆ, ಮಹಿಳಾ ಗೋಷ್ಠಿ, ದಿನಾಂಕ : 15 ರಂದು ಬಸವಯೋಗಿ ಸಿದ್ಧರಾಮೇಶ್ವರರ ಜಯಂತಿ ಮತ್ತು ಪಥ ಸಂಚಲನ ಜರುಗಲಿದೆ. ಶರಣ ಬಂಧುಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕಾಗಿ ಕೋರುತ್ತೇವೆ.

ಧರ್ಮಗುರು ಬಸವಣ್ಣನವರ ದಿವ್ಯ ಸಾನಿಧ್ಯದಲ್ಲಿ ಶರಣ ಮೇಳ ನಡೆಯಲಿದ್ದು, ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿರುವ ಈ ಶರಣ ಮೇಳದ ಸಮ್ಮುಖವನ್ನು ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿಯವರು ಬಸವ ಮಂಟಪ ಬೀದರ, ಪೂಜ್ಯ ಶ್ರೀ : ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರು ವಿಶ್ವಗುರು ಬಸವ ಮಂಟಪ ಬೆಳಗಾವಿ ವಹಿಸಿಕೊಳ್ಳಲಿದ್ದಾರೆ.ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ : ಪೂಜ್ಯ ಶ್ರೀ ಜಗದ್ಗುರು ಡಾ,ಚನ್ನಬಸವಾನಂದ ಸ್ವಾಮೀಜಿ 8073-442105, 0880206108

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.