Breaking News

ಡಿಸೆಂಬರ್ 5 ರಂದು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹನೂರಿನಲ್ಲಿ ಪ್ರತಿಭಟನೆ :ಹೊನ್ನೂರು ಪ್ರಕಾಶ್ .

Protest in Hanur demanding various demands on December 5: Honnur Prakash.

ಜಾಹೀರಾತು


ವರದಿ :ಬಂಗಾರಪ್ಪ ಸಿ ಹನೂರು .

ಹನೂರು : ನಮ್ಮ ಭಾಗದ ರೈತರ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಡಿಸೆಂಬರ್ 5ರಂದು ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂಭಾಗ ಬಾರ್ಕೋಲ್ ಹಾಗೂ ಪೊರಕೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ತಿಳಿಸಿದರು

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು

ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ವಿವಿಧ ಪಕ್ಷದ ಜನಪ್ರತಿನಿಧಿಗಳು ಇದುವರೆಗೂ ಆಳಿದಂತ ಪ್ರತಿಯೊಬ್ಬರು ತಾಲೂಕನ್ನು ಕಡೆಗಣಿಸಿದ್ದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂಭಾಗ ಡಿಸೆಂಬರ್ 5ರಂದು ಬಾರ್ಕೋಲ್ ಮತ್ತು ಪೊರಕೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ತಾಲೂಕಿನಲ್ಲಿ ಅಧಿಕಾರಿ ಸಿಬ್ಬಂದಿಗಳು ರೈತರ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಬದಲಾಗಿ ಲಂಚ ಪಡೆಯುತ್ತಿದ್ದಾರೆ ಇದನ್ನು ಕಂಡು ಸಹ ಇಲ್ಲಿನ ಶಾಸಕರು ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ಜನಸಾಮಾನ್ಯ ಜನಸಾಮಾನ್ಯರನ್ನು ಕಿತ್ತು ತಿನ್ನುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವರ್ತನೆಯನ್ನು ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ತಾಲೂಕಿನ ವಿವಿಧ ಗ್ರಾಮಗಳಿಂದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಬಂದು ಹೋಗಲು ರಸ್ತೆ ಸರಿ ಇಲ್ಲ ನಿಗದಿತ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ ಮಳೆ ಬಂದರೆ ಕೆಲವು ಗ್ರಾಮಗಳು ಹಳ್ಳಗಳು ಅರಿಯುವುದರಿಂದ ಸೇತುವೆಗಳಿಲ್ಲದೆ ಹತ್ತಾರು ಕಿಲೋಮೀಟರ್ ಸುತ್ತಿ ಬರಬೇಕಾಗಿದೆ ಮತ್ತು ಪಡಿತರ ವ್ಯವಸ್ಥೆಯಲ್ಲಿಯೂ ಸಹ ಗ್ರಾಮಗಳಲ್ಲಿ ಅಧಿಕಾರಿಗಳು ಬಡ ಜನತೆಗೆ ನೀಡುವ ಪಡಿತರ ವ್ಯವಸ್ಥೆ ಸರಿಯಾಗಿ ನೀಡುತ್ತಿಲ್ಲ ರಾತ್ರಿ ವೇಳೆ ವಿದ್ಯುತ್ತನ್ನು ರೈತರಿಗೆ ಜಮೀನಲ್ಲಿ ನೀಡುತ್ತಿದ್ದಾರೆ ಬದಲಾವಣೆ ಮಾಡಿರುವುದಿಲ್ಲ ಬದಲಾಗಿ ವಿದ್ಯುತ್ ಪರಿಕರಗಳು ಸುಟ್ಟು ಹೋದರೆ ರೈತರಿಂದ 15ರಿಂದ 20,000 ಹಣ ವಸೂಲಿ ಮಾಡುತ್ತಿರುವ ಚಸ್ಕಾಂ ಇಲಾಖೆ ಅಧಿಕಾರಿಗಳು ಹೊಸದಾಗಿ ಬೋರ್ವೆಲ್ ಕೊರಸಿದ್ದಾರೆ ಟಿಸಿ ಅಳವಡಿಸಲು ಒಂದು ಲಕ್ಷ ಹಣ ನೀಡುವಂತೆ ರೈತರಿಂದು ಬಿಡಿಸುತ್ತಿದ್ದಾರೆ ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆಗೆ ತೊಂದರೆಯಾಗಿದೆ ರೈತರ ಹಿತ ಕಾಯಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಕೃಷಿಗೆ ಸ್ಪಂದಿಸಬೇಕಾದ ಅಧಿಕಾರಿಗಳೇ ಕಿರುಕುಳ ನೀಡುತ್ತಿದ್ದಾರೆ ಜಾನುವಾರುಗಳನ್ನು ಮೆಯ್ಯಲು ಅರಣ್ಯದಲ್ಲಿ ಬಿಡುತ್ತಿಲ್ಲ ಬಿಟ್ಟರೆ ಇವರ ಅಕ್ರಮ ಬಯಲಾಗುತ್ತದೆ ಎಂದು ರೈತರ ಮೇಲೆ ಸುಳ್ಳು ಮೊಕದ್ದಮ್ಮನಗಳನ್ನು ಹಾಕುತ್ತವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಜೊತೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸಹ ಕೆಳಮಟ್ಟದ ಸಿಬ್ಬಂದಿ ವರ್ಗದವರಿಗೆ ಕೆಲವು ಗ್ರಾಮಗಳಲ್ಲಿ ಪೌತಿ ಖಾತೆಗಳೇ ಆಗಿಲ್ಲ ನೂರಾರು ಸಾವಿರಾರು ಎಕ್ಟರ್ ಪ್ರದೇಶದಲ್ಲಿ ಒಂದೇ ಆರ್ಟಿಸಿಯಲ್ಲಿ ಬರುತ್ತಿದ್ದರು ಅಧಿಕಾರಿಗಳು ಪೊಡಿ ಮುಕ್ತಗೊಳಿಸಿ ರೈತರ ಆರ್ ಟಿ ಸಿ ಗಳನ್ನು ಪ್ರತ್ಯೇಕಗೊಳಿಸಿಲ್ಲ ಇದರಿಂದಾಗಿ ಸರ್ಕಾರಿ ಸೌಲತ್ತು ಪಡೆಯಲು ತೊಂದರೆಯಾಗಿದೆ ರೈತರಿಗೆ ಈ ಎಲ್ಲಾ ಒಟ್ಟಾರೆ ಸಮಸ್ಯೆಗಳ ಬಗ್ಗೆ ಇಂದಿನಿಂದಲೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೂ ಇಲ್ಲಿನ ಶಾಸಕರು ಮತ್ತು ಜನಪ್ರತಿನಿಧಿಗಳಿಗೂ ಮನವಿ ನೀಡಿದ್ದರು ಸಹ ಅಧಿಕಾರಿಗಳು ರೈತರಿಗೆ ಜನಸಾಮಾನ್ಯರಿಗೆ ಸ್ಪಂದಿಸುತ್ತಿಲ್ಲ ಶಾಶ್ವತ ಬರ ನಿರ್ವಹಣೆ ಮಾಡಲು ಅಧಿಕಾರಿಗಳು ಕ್ರಮ ವಹಿಸಿಲ್ಲ ನಮ್ಮಲ್ಲಿ ಬೆಳೆಯುವ ರಾಗಿಗೆ ರೈತರಿಂದ ನಿಯಮಗಳ ಹೇಳುತ್ತಾರೆ ಆದರೆ ಬೇರೆ ಜಿಲ್ಲೆಯಿಂದ ಬರುವ ರಾಗಿಗೆ ನಿಯಮಗಳೇ ಇಲ್ಲದೆ ತಳ್ಳಾಳಿಗಳಿಗೆ ಸಾತ್ ನೀಡುತ್ತಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾರೆ ಈ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಘೋಷ್ಠಿಯಲ್ಲಿ ತಿಳಿಸಿದರು

ಇದೇ ಸಂದರ್ಭದಲ್ಲಿ ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ರೈತ ಮುಖಂಡರಾದ ಶಾಂತಕುಮಾರ್ ಶಿವರಾಮ್ ಸೋಮಣ್ಣ ಚಿಕ್ಕರಾಜು ನವೀನ್ ಪರಮೇಶ್ವರ್, ವೆಂಕಟ್ ರಾಜ್ ನಾರಾಯಣ್ ಇನ್ನಿತರು ಹಾಜರಿದ್ದರು.

About Mallikarjun

Check Also

ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಮಾಡಿ, ಸಮಾಲೋಚನೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಕೆ

Today in Delhi, I met Union Civil Aviation Minister Kinjarapu Ramamohan Naidu, held discussions and …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.