Breaking News

ಹಲವು ಗ್ರಾಮಗಳ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಬೇಟಿ ನೀಡಿ ಪರಿಶೀಲನೆ

MLA M.R. Manjunath inspected the ration fair price shops in many villages.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ :ಬಂಗಾರಪ್ಪ ಸಿ ಹನೂರು .
ಹನೂರು : ತಾಲೂಕು ವ್ಯಾಪ್ತಿಯ ಮಾರ್ಟಳ್ಳಿ ನ್ಯಾಯಬೆಲೆ ಅಂಗಡಿ ಸೇರಿದಂತೆ ಇನ್ನಿತರೆಡೆ ಶಾಸಕ ಎಂಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ನಿಗದಿತ ಸಮಯಕ್ಕೆ ಪಡಿತರ ನೀಡುತ್ತಿರುವ ಬಗ್ಗೆ ಮತ್ತು ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಪಡಿತರ ಹಣದ ವಿವರವನ್ನು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು ಸರ್ಕಾರದಿಂದ ಬರುವ ಸೌಲತ್ತನ್ನು ಸಾರ್ವಜನಿಕರು ನಿಗದಿತ ಸಮಯಕ್ಕೆ ಪಡೆಯಲು ಇಲ್ಲಿನ ನ್ಯಾಯಬೆಲೆ ಅಂಗಡಿಯವರು ಸಕಾಲದಲ್ಲಿ ನೀಡಬೇಕು ಜೊತೆಗೆ ಪಡಿತರ ನೀಡುವ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಪ್ರತಿ ಫಲಾನುಭವಿಗೆ ನೀಡುವ ಸರ್ಕಾರದ ಪಡಿತರಹಣ ಖಾತೆಗಳಿಗೆ ಜಮಾ ಆಗುತ್ತಿದೆ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗುತ್ತಿದೆ ಎಂಬುದನ್ನು ಸೂಕ್ತವಾಗಿ ಇಲ್ಲಿನ ನಿವಾಸಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು ನಂತರ ಹೊಸ ಪಡಿತರ ಚೀಟಿ ಹಾಗೂ ತಿದ್ದುಪಡಿಯ ಬಗ್ಗೆಯೂ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಪಡಿತರ ಪಡೆಯಲು ಬಂದಿದ್ದ ಮಹಿಳೆಯರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರುಗಳು ಇನ್ನಿತರರು ಹಾಜರಿದ್ದರು

About Mallikarjun

Check Also

ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡುವಲ್ಲಿ ಸ್ವಯಂ ಸೇವಕರ ಪಾತ್ರ ಬಹಳ ಮುಖ್ಯ: ನ್ಯಾ. ಶಶಿಧರ್ ಶೆಟ್ಟಿ

The role of volunteers is very important in informing the public about the law: Justice …

Leave a Reply

Your email address will not be published. Required fields are marked *