Breaking News

ಯಥಾಸ್ಥಿತಿವಾದಿಗಳಿಗೊಂದು ಎಚ್ಚರಿಕೆ ನೀಡಿರಿ.


A word of caution to the status quo.

ಜಾಹೀರಾತು

ಬಸವ ತತ್ವದ ಮೇಲಿನ ದಾಳಿ ಇಂದು ನಿನ್ನೆಯದಲ್ಲ. ಇದು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಯಾರು ಬಸವ ಪ್ರಣೀತ ಲಿಂಗಾಯತ ಧರ್ಮದ ಮೂಲ ತಿರುಳನ್ನು ಜನ ಮಾನಸಕ್ಕೆ ಅರುಹಲು ಮುಂದಡಿ ಇಡುತ್ತಾರೋ ಅವರಿಗೆ ಟೀಕೆ ಟಿಪ್ಪಣಿ ಕಟ್ಟಿಟ್ಟ ಬುತ್ತಿ.

ಆರೋಗ್ಯಕರ ಚರ್ಚೆ ಚಿಂತನೆಗೆ ಬಸವ ತತ್ವ ಮನ್ನಣೆ ಕೊಡುತ್ತದೆ. ಚರ್ಚೆ ಚಿಂತನೆಗಳೆ ಅದರ ಜೀವ ಜೀವಾಳ. ಆದರೆ ಯಥಾಸ್ಥಿತಿವಾದಿಗಳು ಚರ್ಚೆ ನಡೆಯಬೇಕಿರುವ ಸಂಗತಿಗಳನ್ನು ವಿವಾದಗಳನ್ನಾಗಿ ಪರಿವರ್ತಿಸಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡುತ್ತಾರೆ. ಬೇಕಂತಲೆ ಜನ ಸಾಮಾನ್ಯರ ಭಾವನೆಗಳನ್ನು ಕೆರಳಿಸುತ್ತಾರೆ. ಇದರ ಮೂಲಕ ಬಸವ ತತ್ವವನ್ನು ಹೇಳುವ ವ್ಯಕ್ತಿಯ ಮೇಲೆ ದಾಳಿ ನಡೆಸಿ, ಆ ತತ್ವ ಮತ್ತೆ ಮತ್ತೆ ಮೂಲೆ ಗುಂಪಾಗುವಂತೆ ನೋಡಿಕೊಳ್ಳುತ್ತಾರೆ.

ಹನ್ನೆರಡನೆಯ ಶತಮಾನದಲ್ಲಾದ ಶರಣರ ಮೇಲಿನ ಪೈಶಾಚಿಕ ದಾಳಿ, ಬರ್ಬರ ಹಿಂಸೆ, ವಚನಗಳ ಕಟ್ಟುಗಳನ್ನು ಸುಟ್ಟದ್ದು ಇದೆ ಹಿನ್ನೆಲೆಯಲ್ಲಿ. ಬಸವ ತತ್ವ ಜನ ಸಾಮಾನ್ಯನನ್ನು ತಲುಪಿಸದರೆ ಅವರ ಬದುಕಿನಲ್ಲಿ ಆವರಿಸಿರುವ ಕತ್ತಲು ಹೋಗುತ್ತದೆ. ಕತ್ತಲು ಹೋದರೆ ಧರ್ಮದ ಹೆಸರಿನಲ್ಲಿ ಧಗಲ್ಬಾಜಿಗಳು ಮಾಡುವ ಹಲಾಲುಖೋರತನ ಬಟಾ ಬಯಲಾಗುತ್ತದೆ. ಇವರು ತುತ್ತು ಅನ್ನಕ್ಕೂ ಕಂಗಾಲಾಗುವ ಸ್ಥಿತಿ ಬರುತ್ತದೆ.

ಇದೆಲ್ಲವನ್ನು ಚೆನ್ನಾಗಿ ಅರಿತಿರುವ ಪಟ್ಟಭದ್ರರು ಕ್ರಿಯಾಶೀಲವಾಗಿದ್ದಾರೆ. ಆದರೆ ಜನ ಸಾಮಾನ್ಯ ಮಂಕಾಗಿದ್ದಾನೆ. ಬಸವಾದಿ ಶರಣರ ಚಿಂತನೆಗಳನ್ನು ಅರಿತವರಾದ ಮಠಾಧೀಶರು, ಬರಹಗಾರರು, ರಾಜಕಾರಣಿಗಳು, ಹೋರಾಟಗಾರರು,ಮುಂತಾದವರೆಲ್ಲ ಒಂದಾಗಿ ಕೊಳ್ಳಿ ದೆವ್ವಗಳನ್ನು ಹಿಮ್ಮೆಟ್ಟಿಸಬೇಕಿದೆ.

ಸರಕಾರವೂ ಸಹ ಇಂಥ ಆರೋಗ್ಯಪೂರ್ಣ ಚಟುವಟಿಕೆಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ತನ್ನ ಸಂವಿಧಾನಿಕ ಹೊಣೆ ಹೊತ್ತುಕೊಳ್ಳಬೇಕಿದೆ.

ಇದೆ ತಿಂಗಳ ೨೨ ರಂದು ಬೆಂಗಳೂರಿನಲ್ಲೊಂದು ಸಭೆ ನಡೆಸಲಾಗುತ್ತಿದೆ. ಆಸಕ್ತರು ಭಾಗವಹಿಸಿ, ಯಥಾಸ್ಥಿತಿವಾದಿಗಳಿಗೊಂದು ಎಚ್ಚರಿಕೆ ನೀಡಿರಿ.

೦ ವಿಶ್ವಾರಾಧ್ಯ ಸತ್ಯಂಪೇಟೆ

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.