Only pharmacy graduates should get the facility.
ಗಂಗಾವತಿ:ಫ಼ಾರ್ಮಸಿ ಪದವೀಧರರಿಗೆ ಸರಕಾರಿ ನೌಕರರಿಗಳು ಬಹಳ ವಿರಳ, ಹೀಗಾಗಿ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ದೊರೆಯಬೇಕು ಎಂದು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತು ರಾಜ್ಯ ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅಭಿಪ್ರಾಯ ಪಟ್ಟಿದ್ದಾರೆ.
ಶುಕ್ರವಾರ ನಗರ ಸೇ೦ಟ್ ಫ಼ಾಲ್ಸ್ ಕಾಲೇಜ್ ಆಫ್ ಫ಼ಾರ್ಮಸಿಯ ಹಳೇ ವಿಧ್ಯಾರ್ಥಿಗಳ ಬಿಳ್ಕೊಡುಗೆ ಮತ್ತು ಹೊಸ ವಿಧ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಔಷಧ ವಿಜ್ಞಾನ ಪದವೀಧರರಿಗೆ ಔಷಧ ತಯಾರಿಕಾ ಕಂಪನಿಯಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ. ವಿಜ್ಞಾನ ಪದವೀಧರರು ಅಲ್ಲದವರಿಗೆ ಔಷಧ ಮಾರಾಟ ಪ್ರತಿನಿಧಿಗಳಾಗುತ್ತಿದ್ದಾರೆ.ಫ಼ಾರ್ಮಸಿಸ್ಟ ಅಲ್ಲದವರು ಔಷಧ ವ್ಯಾಪಾರಕ್ಕೆ ಇಳಿಯುತ್ತಿದ್ದಾರೆ ಇದಕ್ಕೆಲ್ಲಾ ಕಡಿವಾಣ ಹಾಕಲು ಕಾಲೇಜುಗಳ ಉಪನ್ಯಾಸಕ ಮಂಡಳಿ ಮತ್ತು ಆಡಳಿತ ಮಂಡಳಿಗಳು ಕೇಂದ್ರ ಸರಕಾರಕ್ಕೆ ಮತ್ತು ಫ಼ಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆ (ಪಿ.ಸಿ.ಐ)ಗೆ ಒತ್ತಡ ಹೇರಬೇಕು,ಇದು ಅವರ ಕರ್ತವ್ಯ ಕೂಡ ಎಂದರು.
ಫ಼ಾರ್ಮಸಿ ವಿಧ್ಯಾಭ್ಯಾಸ ಹದಿನಾಲ್ಕು ವರ್ಷ ಮೂರು ತಿಂಗಳ ಕೋರ್ಸ್ ಆಗಿದ್ದು, ಒಂಬತ್ತು ತಿಂಗಳುಗಳ ಇಂಡಸ್ಟ್ರೀಯಲ್ ಟ್ರೇನಿಂಗ್ ಸೇರಿಸಿ, ಹದಿನೈದು ವರ್ಷದ ಕೋರ್ಸನ್ನಾಗಿ ಪರಿವರ್ತಿಸಲು ಹಲವು ಬಾರಿ ಪತ್ರ ಬರೆದಿದ್ದರೂ ಪಿ.ಸಿ.ಐ.ಕ್ರಮ ಕೈಗೊಂಡಿಲ್ಲ.ಅಲ್ಲಿ ಬರೀ ರಾಜಕೀಯ ನಡೆಯುತ್ತಿದೆ ಎಂದು ಅಶೋಕಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಡಿಪ್ಲೊಮಾ ಫ಼ಾರ್ಮಸಿ ಅಭ್ಯಾಸದ ಪಟ್ಯ ಪುಸ್ತಕಗಳು ಬಿ.ಫ಼ಾರ್ಮಸಿ ಸಮಾನದ್ದಾಗಿವೆ.ಹೊರೆ ತಗ್ಗಿಸುವ ಕೆಲಸವಾಗುತ್ತಿಲ್ಲ ,ಕಾಲಕ್ಕೆ ತಕ್ಕಂತೆ ಅಭ್ಯಾಸ ಬದಲಾಗಬೇಕಿದ್ದರೂ ಆಗುತ್ತಿಲ್ಲ.ಫ಼ಾರ್ಮಸಿ ಶಿಕ್ಷಕರ ಸಂಘಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಹೇರೂರ ಕರೆ ನೀಡಿದರು.
ಇನ್ನೊರ್ವ ಅತಿಥಿ ಬಳ್ಳಾರಿ ತೊಗರಿ ಮಲ್ಲಪ್ಪ ಫ಼ಾರ್ಮಸಿ ಕಾಲೇಜು ಉಪನ್ಯಾಸಕ ಡಾ.ಆರ್.ಎಲ್.ಎನ್.ಮೂರ್ತಿ ಮಾತನಾಡಿ ವಿಧ್ಯಾರ್ಥಿಗಳು ಹವ್ಯಾಸಗಳನ್ನು ದೂರವಿಟ್ಟು ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಮತ್ತೊರ್ವ ಅತಿಥಿ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದ ನರಗುಂದ ಕಾಲೇಜ್ ಆಫ್ ಫ಼ಾರ್ಮಸಿಯ ಪ್ರಾಚಾರ್ಯ ಡಾ.ಶ್ರವಣ ಎಲ್.ನರಗುಂದ ಮಾತನಾಡಿ, ವಿಧ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸ ಮಾಡುವುದರಿಂದ ಯಶಸ್ಸು ಸಿಗಲು ಸಾಧ್ಯ.ಈ ನಿಟ್ಟಿನ ವಿಧ್ಯಾರ್ಥಿಗಳು ಯತ್ನಿಸಬೇಕೆಂದು ಕರೆ ನೀಡಿದರು.
ಅರಳಿಹಳ್ಳಿಯ ಬೃಹನ್ಮಠದ ಗವಿಸಿದ್ದಯ್ಯ ತಾತನವರು ಸಾನಿಧ್ಯವಹಿಸಿದ್ದರು.ಚನ್ನಾಗಿ ಅಭ್ಯಾಸ ಮಾಡುವ ಮೂಲಕ ತಂದೆ-ತಾಯಿಗಳ ಮತ್ತು ಗುರುಗಳ ಋಣ ತೀರಿಸಬೇಕೆಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸೇ೦ಟ್ ಫ಼ಾಲ್ಸ್ ಕಾಲೇಜ್ ಆಫ಼್ ಫ಼ಾರ್ಮಸಿಯ ಪಾಚಾರ್ಯರಾದ ಮಂಜುನಾಥ ಹಿರೇಮಠ ಪ್ರಾಸ್ಥಾವಿಕವಾಗಿ ಮಾತನಾಡಿದರು.ಸಂಸ್ಥೆಯ ಕಾರ್ಯದರ್ಶಿ ಸರ್ವೇಶ ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು.