Breaking News

ಜಮಾಪುರ ಪ್ರಾಚಾರ್ಯರ ಅಶ್ಲೀಲ ನಡವಳಿಕೆ ಹಾಗೂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಖಂಡಿಸಿ ಮನವಿ

Petition condemning Jamapur principal’s obscene behavior and violence against students

ಜಾಹೀರಾತು


ಕಾರಟಗಿ,ಜಮಾಪುರ ಪ್ರಾಚಾರ್ಯರ ಅಶ್ಲೀಲ ನಡವಳಿಕೆ ಹಾಗೂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿರುವ ಕುರಿತು

ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿದ್ದಾಪುರ-ಜಮಾಪುರ ಗ್ರಾಮದ ಶಾಲೆಯ ವಿದ್ಯಾರ್ಥಿಗಳಾದ ನಾವುಗಳು ನಿಮ್ಮಲ್ಲಿ SFI ಸಂಘಟನೆ ಮೂಲಕ ಮನವಿ ಸಲ್ಲಿಸುವುದೇನೆಂದರೆ ವಸತಿ ನಿಲಯದಲ್ಲಿ ಅನೇಕ ಮೂಲಭೂತ ಸೌಲಭ್ಯಗಳ ಕೊರತೆ ಮಧ್ಯೆ ಶಿಕ್ಷಣ ಪಡೆಯುತ್ತಿದ್ದೇವೆ, ದಿನನಿತ್ಯ ಊಟದಲ್ಲಿ ಹುಳಗಳು ಬರುತ್ತಿದ್ದವು ಇದನ್ನು SFI ಸಂಘಟನೆ ಮುಖಂಡರ ಗಮನಕ್ಕೆ ಬಂದ ನಂತರ ಸಭೆ ಮಾಡಿ ಪ್ರಾಚಾರ್ಯರಿಗೆ ತಿಳಿಸಿದರು ಎರಡು ದಿನ ಮಾತ್ರ ಚೆನ್ನಾಗಿ ಮಾಡಿ ಮತ್ತೆ ಅದೆ ರೀತಿಯಲ್ಲಿ ಕಳಪೆ ಮಟ್ಟದ ಊಟವನ್ನು ನೀಡುತ್ತಿದ್ದಾರೆ, ಇದರ ಜೊತೆಗೆ ವಾರ್ಡನ್ ಮತ್ತು ಪ್ರಾಚಾರ್ಯರು ಸೇರಿಕೊಂಡು ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೆ ಮೂಲ ಅಂಕ ಪಟ್ಟಿಕೊಡಲು 1000 ರೂಪಾಯಿ ಹಾಗೂ ವಸತಿ ನಿಲಯದ ಕಟ್ಟಡಕ್ಕೆ ಸುಣ್ಣ,ಬಣ್ಣ ಹಚ್ಚಲು 700 ರೂಪಾಯಿ ಒಟ್ಟು 1700 ರೂಪಾಯಿ ಹಣವನ್ನು ಸುಮಾರು 210 ವಿದ್ಯಾರ್ಥಿಗಳಿಂದ ಸರ್ಕಾರ ನಿಯಮಗಳನ್ನು ಉಲ್ಲಂಘನೆ ಮಾಡಿ ವಸೂಲಿ ಮಾಡಿದ್ದಾರೆ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮದ ಪ್ರಕಾರ CET, NEET, JEE ಪ್ರವೇಶ ಪರೀಕ್ಷೆಯ ಅರ್ಜಿ ಶುಲ್ಕವು ಸಂಪೂರ್ಣವಾಗಿ ಕಳೆದ ಮೂರು ವರ್ಷಗಳಿಂದ ಪ್ರಾಚಾರ್ಯರಿಗೆ ಅನುದಾನ ಬಿಡುಗಡೆಯಾಗಿದ್ದರು ಆ ಹಣವನ್ನು ತಾವೇ ದುರ್ಬಳಿಕೆ ಮಾಡಿಕೊಂಡು ಪುನಃ ವಿದ್ಯಾರ್ಥಿಗಳಿಂದ ಹಣ ಪಡೆದು ಅರ್ಜಿ ಹಾಕಿಸಿರುತ್ತಾರೆ, ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪ್ರಾಚಾರ್ಯರು ದುರ್ಬಳಿಕೆ ಮಾಡಿಕೊಂಡು ಈ ರೀತಿಯಲ್ಲಿ ಪದೇಪದೇ ಸರ್ಕಾರಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಮೋಸ ಮಾಡಿ ವಂಚನೆ ಮಾಡಿದ್ದಾರೆ.

 ಕಾಲೇಜಿನ ಪ್ರಾಚಾರ್ಯರು ಹಣ ದುರ್ಬಳಕೆ ಒಂದು ಭಾಗವಾದರೆ ಅಲ್ಲಿನ ಸಿಬ್ಬಂದಿ ಜೊತೆ ಅಕ್ರಮ ಸಂಬಂಧದಿಂದಾಗಿ ಇತ್ತೀಚಿಗೆ ವಿದ್ಯಾರ್ಥಿಗಳ ಕೈಗೆ ನೇರವಾಗಿ ಸಿಕ್ಕಿ ಹಾಕಿಕೊಂಡಿದ್ದಾರೆ ದಿನಾಂಕ 11/10/2023 ರಂದು ರಾತ್ರಿ 12:50 ಕ್ಕೆ ಬಾಲಕರ ವಸತಿ ನಿಲಯ ಕಟ್ಟಡದ ಹಿಂಭಾಗದಿಂದ ಸಿಬ್ಬಂದಿ ಕೊಟ್ಟಡಿಗೆ ಹಿಂಭಾಗದಿಂದ ಒಳಗಡೆ ಹೋಗಿರುವುದನ್ನು ವಿದ್ಯಾರ್ಥಿಗಳು ನೋಡಿರುತ್ತಾರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವ ಕಾರಣ ಅಂದು ರಾತ್ರಿ ತಡರಾತ್ರಿ ಅವರಿಗೆ ಅಭ್ಯಾಸ ಮಾಡುತ್ತಿದ್ದರು, ಇದನ್ನು ಗಮನಿಸಿದ ಪ್ರಾಚಾರ್ಯರು ತಾವು ಸಿಬ್ಬಂದಿ ಕೊಟ್ಟಡಿಗೆ ಹೋಗಿಬರುವುದನ್ನು ವಿದ್ಯಾರ್ಥಿಗಳು ನೋಡಿರವುದನ್ನು  ಖಚಿತ ಪಡಿಸಿಕೊಂಡು ವಿದ್ಯಾರ್ಥಿಗಳ ಮುಂದೆ ಮುಂಜಾನೆ ಸಮಯ 3:20 ಕ್ಕೆ ಬಂದು ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿರುತ್ತಾರೆ, ಇದರಿಂದ ಮನನೊಂದ ವಿದ್ಯಾರ್ಥಿಗಳು ಇಂತಹ ಪ್ರಾಚಾರ್ಯರಿಂದ ಶಿಕ್ಷಣ ವ್ಯವಸ್ಥೆಗೆ ಕಳಂಕ ಹಾಗೂ ಮೊರಾರ್ಜಿ ದೇಸಾಯಿ ಶಾಲೆಗಳಿಗೆ ಕೆಟ್ಟ ಹೆಸರು ಮತ್ತು ಸರ್ಕಾರದ ನಿಯಮಗಳನ್ನು ಹಾಗೂ ಇಲಾಖೆಯ ಸರಕಾರದ ನಡವಳಿಗಳನ್ನು ಉಲ್ಲಂಘನೆ ಮಾಡಿರುವ ಪ್ರಾಚಾರ್ಯರನ್ನು ಸೇವೆಯಿಂದ ವಜಾಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಇಂದು ಪರೀಕ್ಷೆ ಮುಗಿಸಿಕೊಂಡು ನೇರವಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಬಂದಿದ್ದರು ಆದರೆ ಅವರು ಮನೆಯಲ್ಲಿ ಇಲ್ಲದ ಕಾರಣ *ತಹಶಿಲ್ದಾರರ ಕಾರಟಗಿ ಇವರ ಮೂಲಕ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಕಾರ್ಯನಿರ್ವಾಹಕ  ಅಧಿಕಾರಿಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಬೆಂಗಳೂರು ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ *ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಘಟನೆಯ ರಾಜ್ಯಾದ್ಯಕ್ಷರದ ಅಮರೇಶ ಕಡಗದ, ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ, ಪ್ರಮುಖರಾದ ವಿರೇಶ, ವಿದ್ಯಾರ್ಥಿಗಳಾದ ಪ್ರದೀಪ್, ಸುನಿಲ್, ವಿಜಯಕುಮಾರ್, ಮುತ್ತಣ್ಣ, ರವಿಕಿರಣ್, ಮಂಗಳೇಶ, ಬಾಲಚಂದ್ರ ಇತರರು ಇದ್ದರು*

About Mallikarjun

Check Also

ವಾರ್ಡ್ ಶಿಬಿರಗಳಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ-3ನ್ನು ಪಡೆದುಕೊಳ್ಳಿ:ನಾಗೇಶ್,

Obtain form-3 through online software in ward camps : Nagesh,, ಯಲಬುರ್ಗಾ : ಇ-ಆಸ್ತಿ ತಂತ್ರಾಶವನ್ನು ಸರಳೀಕರಣಗೊಳಿಸಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.