Forced to withdraw complaint filed against Hindu activists in case of Ganesha Varshaan.
ಗಂಗಾವತಿ: ಕಳೆದ ತಿಂಗಳು ಸೆಪ್ಟೆಂಬರ್-೨೯ ರಂದು ಗಂಗಾವತಿಯಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಗಣೇಶ ಸ್ಥಾಪನೆ ಮಾಡಿದ ಸ್ಥಳದಿಂದ ರಸ್ತೆಯುದ್ದಕ್ಕೂ ನಡೆದ ಮೆರವಣಿಗೆ ಸಂದರ್ಭದಲ್ಲಿ ಆರತಿಯನ್ನು ಬೆಳಗುತ್ತಾ ಬಂದಿದ್ದು, ಅದೇ ರೀತಿ ದಾರಿಯ ಮಧ್ಯದಲ್ಲಿ ಬರುವ ಮಸೀದಿ ಹತ್ತಿರ ಸಹ ಅದೇ ರೀತಿ ಆರತಿಯನ್ನು ಬೆಳಗಿದ್ದು, ಇದನ್ನೇ ನೆಪಮಾಡಿಕೊಂಡು ವಿನಾಕಾರಣ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಿದ್ದರೂ, ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ದೂರನ್ನು ದಾಖಲಿಸಿದ್ದು, ಹಿಂದೂಗಳನ್ನು ಹತ್ತಿಕ್ಕುವ ಹುನ್ನಾರ ನಡೆದಿರುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ, ಉತ್ತರ ಪ್ರಾಂತದ ಕೊಪ್ಪಳ ಜಿಲ್ಲಾ ಸಂಯೋಜಕರಾದ ಕೆ.ಎಂ ದೊಡ್ಡಬಸಯ್ಯ ಅವರು ಖಂಡನೆ ವ್ಯಕ್ತಪಡಿಸಿದರು.
ಅವರು ಇಂದು ಸದರಿ ಅಮಾಯಕ ಹಿಂದೂ ಕಾರ್ಯಕರ್ತರ ಮೇಲಿನ ದೂರನ್ನು ಹಿಂಪಡೆಯಲು ಒತ್ತಾಯಿಸಿ ಪತ್ರಿಕಾ ಹೇಳಿಕೆ ನೀಡಿದರು. ಈ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ತಹಶೀಲ್ದಾರರು ತನಿಖೆ ಕೈಗೊಂಡು ಪ್ರಕರಣವನ್ನು ಪರಿಶೀಲಿಸಿ ಅಮಾಯಕ ಹಿಂದೂ ಕಾರ್ಯಕರ್ತರ ಮೇಲಿನ ದೂರನ್ನು ಹಿಂಪಡೆಯುವAತೆ ಆದೇಶಿಸಿಬೇಕೆಂದು ಒತ್ತಾಯಿಸಿದರು. ಅಲ್ಲದೇ ಈ ಬಗ್ಗೆ ಸ್ಥಳೀಯ ಶಾಸಕರು ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಅಮಾಯಕ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣವನ್ನು ಹಿಂಪಡೆಯುವಂತೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಒತ್ತಾಯಿಸಿದೆ ಎಂದು ಕೊಪ್ಪಳ ಜಿಲ್ಲಾ ಸಂಯೋಜಕರು.ಕೆ.ಎಂ. ದೊಡ್ಡಬಸಯ್ಯ ಪ್ತಿರಕಟಣೆ ಮೂಲಕ ತಿಳಿಸಿದ್ದಾರೆ.