AIDSO district coordinator Gangaraj Allalli has requested to solve the problem of toilet and rooms in Government Junior College for Girls in Kushtagi.
ಕುಷ್ಟಗಿ ತಾಲ್ಲೂಕಿನಲ್ಲಿರುವ ಬಾಲಕೀಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ಬಾಲಕಿಯರಿಗೆ ಕೇವಲ ಎರಡು ಮೂತ್ರಾಲಯ, ಒಂದೇ ಶೌಚಾಲಯವಿದೆ. ಇದು ವಿದ್ಯಾರ್ಥಿನಿಯರ ಕಲಿಕೆಗೆ ತುಂಬ ತೊಂದರೆಯಾಗುತ್ತಿದೆ, ಇಂತ ದಯನೀಯ ಸ್ಥಿತಿಯಲ್ಲೇ ಕಾಲೇಜಿನಲ್ಲಿ ಪಾಠ, ಪ್ರಯೋಗಗಳು ನಡೆಯುತ್ತಿವೆ.
ಗ್ರಾಮೀಣ ಪ್ರದೇಶದ, ಬಡವರು, ಕೂಲಿಕಾರರು, ಆರ್ಥಿಕವಾಗಿ ಹಿಂದುಳಿದವರ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿರುವ ಪಟ್ಟಣದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನ ದುಃಸ್ಥಿತಿಯ ಕುರಿತು ವಿವಿಧ ಪತ್ರಿಕೆಗಳಲ್ಲಿ ರಾಜ್ಯ ಮಟ್ಟದಲ್ಲಿ ವರದಿಯಾಗಿದ್ದು,
ಜಾಗ ಗುರುತಿಸಿದ್ದರೂ ಶೌಚಾಲಯ ನಿರ್ಮಾಣದ ಕೆಲಸ ಆರಂಭಗೊಂಡಿಲ್ಲ , ಹೊಸ ಕೊಠಡಿಗಳ ನಿರ್ಮಾಣ ಕೆಲಸ ಅರ್ಧಕ್ಕೇ ನಿಂತಿದೆ. ಅಗತ್ಯ ಜಾಗ ಇದ್ದರೂ ಶೌಚಾಲಯದ ಕೆಲಸ ಆರಂಭಗೊಂಡಿಲ್ಲ. ಕೊಠಡಿಗಳ ಕೊರತೆಯಿಂದ ಬಯಲಲ್ಲಿ ಮತ್ತು ಅಪೂರ್ಣ ಸ್ಥಿತಿಯಲ್ಲಿರುವ ಕೊಠಡಿ ಗಳಲ್ಲೇ ಕುಳಿತು ವಿದ್ಯಾರ್ಥಿನಿಯರು ಸೋಮವಾರದಿಂದ ಅರ್ಧವಾರ್ಷಿಕ ಪರೀಕ್ಷೆ ಬರೆಯುತ್ತಿದ್ದಾರೆ.
ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮೂರೂ ವಿಭಾಗಗಳಲ್ಲಿ ಒಟ್ಟು 1,044 ವಿದ್ಯಾರ್ಥಿನಿಯರು ಕಲಿಯುತಿದ್ದಾರೆ. ಸದ್ಯ ಏಳು ಕೊಠಡಿಗಳು ಮಾತ್ರ ಇವೆ. ಇನ್ನೂ ಆರು ಕೊಠಡಿಗಳು ನಿರ್ಮಾಣಗೊಳ್ಳಬೇಕಿದೆ. ಡೆಸ್ಕ್ನಲ್ಲಿ ನಾಲೈದು ವಿದ್ಯಾರ್ಥಿನಿಯರು ಕುಳಿತುಕೊಳ್ಳುತ್ತಿದ್ದಾರೆ. ಡೆಸ್ಕ್ ಇಲ್ಲದ ಕಡೆ ನೆಲವೇ ಗತಿಯಾಗಿದೆ. ಒಂದೇ ಪ್ರಯೋಗಾಲಯವಿದ್ದು, ವಿಜ್ಞಾನ ವಿಭಾಗದ ತರಗತಿಗಳ ಪ್ರಯೋಗಾಲಯಕ್ಕೆ ಪ್ರತ್ಯೇಕ ಜಾಗವಿಲ್ಲದ ಕಾರಣ ಸರದಿ ಪ್ರಕಾರ ಪ್ರಯೋಗ ನಡೆಸಬೇಕಾಗಿದೆ. ಹೀಗಾಗಿ ಈ ವಿಭಾಗದ ವಿದ್ಯಾರ್ಥಿನಿಯರು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೂ ಕಾಲೇಜಿನಲ್ಲೇ ಇರಬೇಕಾಗುತ್ತದೆ.
2021-22 ರಲ್ಲಿ, ಕೆಕೆಆರ್ಡಿಬಿಯ ಮೈಕ್ರೋ ಯೋಜನೆಯಲ್ಲಿ ಕಾಲೇಜಿನಲ್ಲಿ ಮೂರು ಪ್ರಯೋಗಾಲಯ ಗಳ ನಿರ್ಮಾಣಕ್ಕೆ 1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ನೆಲಮಟ್ಟದ ಒಂದು ಮತ್ತು ಎರಡು ಅಂತಸ್ತಿನ ಕಟ್ಟಡದ ಕೆಲಸ ಅರೆಬರೆ ನಡೆದಿದ್ದು, ನಾಲ್ಕು ಕಾಮಗಾರಿ ತಿಂಗಳಿನಿಂದ ಸ್ಥಗಿತಗೊಂಡಿದೆ. ಕಾಮಗಾರಿಯ ಹೊಣೆ ಹೊತ್ತಿರುವ ನಿರ್ಮಿತಿ ಕೇಂದ್ರದ ಎಂಜಿನಿಯರ್ಗಳು ಇತ್ತ ಗಮನ ಕೊಡುತ್ತಿಲ್ಲ,
ವಸತಿ ನಿಲಯದ ಹಳೆ ಕಟ್ಟಡ ತೆರವುಗೊಳಿಸಿದ ಜಾಗದಲ್ಲಿ ಮೂತ್ರಾಲಯ, ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದು, ರೂ.21 ಲಕ್ಷ ಅನುದಾನ ಕೆಕೆಆರ್ಡಿಬಿಯಿಂದ ಬಿಡುಗಡೆಯಾಗಿದ್ದರೂ, ನಿರ್ಮಾಣ ಏಜೆನ್ಸಿಯಾಗಿರುವ ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಉಪವಿಭಾಗದವರು ಕೆಲಸ ಆರಂಭಿಸಿಲ್ಲವೆಂದರೆ, ಬಡವರ ಮಕ್ಕಳೇ ಹೆಚ್ಚಿರುವ ಕಾಲೇಜಿನ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಹಾಗೂ ಶಾಸಕರ ನಿರ್ಲಕ್ಷ್ಯ ಎದ್ದು ಕಾಣ್ತಾಯಿದೆ, ಈ ಕೂಡಲೇ ಈ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿ ಆದಷ್ಟು ಬೇಗ ಶೌಚಾಲಯ ಮತ್ತು ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಅಧಿಕಾರಿಗಳು ಮತ್ತು ಶಾಸಕರು ಮುಂದಾಗಬೇಕು ಇಲ್ಲವೆಂದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಬೃಹತ್ ಹೋರಾಟಕ್ಕೆ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.