Vanasiri Foundation’s work in nature conservation is commendable- Sri Mahanta Swamilu Kalyana Ashram Thimmapura (Mudagalla
ಸಿಂಧನೂರು ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ತಿಮ್ಮಾಪೂರ(ಮುದುಗಲ್ಲ) ಕಲ್ಯಾಣ ಆಶ್ರಮದ ಪರಮ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಭೇಟಿ ನೀಡಿ ವನಸಿರಿ ಫೌಂಡೇಶನ್ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪರಮ ಪೂಜ್ಯರಿಗೆ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರು ಸಸಿ ನೀಡಿ ಸನ್ಮಾನಿಸಿ ಆರ್ಶೀವಾದ ಪಡೆದರು.
ಈ ಸಂದರ್ಭದಲ್ಲಿ ತಿಮ್ಮಾಪೂರ(ಮುದಗಲ್ಲ ಸಮೀಪ) ಪರಮ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಮಾನಾಡಿ ನಾವು ಪ್ರಕೃತಿಯನ್ನು ಜೀವಂತವಾಗಿಟ್ಟರೆ,ಪ್ರಕೃತಿ ನಮ್ಮ ಜೀವನವನ್ನು ನೋಡಿಕೊಳ್ಳುತ್ತದೆ.ನಾವು ಪ್ರಕೃತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು ಏಕೆಂದರೆ ಪ್ರಕೃತಿಯಿಂದ ನಾವು ಎಲ್ಲವನ್ನೂ ಪಡೆಯುತ್ತೇವೆ. ಭೂಮಿ,ಮರ,ನೀರು,ಗಾಳಿ ಪಡೆಯುತ್ತೇವೆ.ಪ್ರಾಣಿ ಮತ್ತು ಪಕ್ಷಿಗಳಿಗೂ ವಾಸಿಸಲು ಅನುಕೂಲ ಮಾಡಿಕೊಟ್ಟಿದೆ. ನಮ್ಮ-ಮನುಷ್ಯರೊಂದಿಗಿನ ಸಮಸ್ಯೆಯೆಂದರೆ,ನಮ್ಮ ಉಳಿವಿಗಾಗಿ ನಾವು ಪ್ರಕೃತಿಯಿಂದ ಎಲ್ಲವನ್ನೂ ಪಡೆದರೂ ನಾವು ಪ್ರಕೃತಿಗೆ ಏನಾದರೂ ಹಿಂತಿರುಗಿಸಲು ಆಲೋಚನೆ ಮಾಡುವುದಿಲ್ಲ. ಎಲ್ಲ ಸಹೃದಯಿಗಳು, ಶಿವಭಕ್ತರು ದೇವರು ಕೊಟ್ಟ ಈ ಪ್ರಕೃತಿಯನ್ನು ಉಳಿಸಿ ಬೆಳಸಲು ಮುಂದಾಗಬೇಕು ಮತ್ತು ಇಂತಹ ಒಂದು ದೇವರ ಕಾರ್ಯದಲ್ಲಿ ದಿನನಿತ್ಯ ತೊಡಗಿ ದೇವರ ಕೃಪೆಗೆ ಪಾತ್ರಾರಾಗಿರುವ ವನಸಿರಿ ಫೌಂಡೇಶನ್ ಸಂಸ್ಥೆಯ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮತ್ತು ಎಲ್ಲಾ ಸದಸ್ಯರುಗಳಿಗೆ ದೇವರು ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಆರ್ಶೀವದಿಸಿದರು.
ಈ ಸಂದರ್ಭದಲ್ಲಿ ಪರಮ ಪೂಜ್ಯರು,ಭಕ್ತರು,ವನಸಿರಿ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.