Let’s go for educational reform
ಗಂಗಾವತಿ ನಗರದ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ 2023-24 ನೇ ಸಾಲಿನ ನಲಿ-ಕಲಿ ತರಬೇತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಡಿ.ಇ.ಎಲ್.ಇಡಿ ಪ್ರಶಿಕ್ಷಣಾರ್ಥಿಗಳಿಗೆ ನಲಿ-ಕಲಿ ತರಬೇತಿಯು ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರಾಮುಖ್ಯತೆಯನ್ನು ವಹಿಸುತ್ತದೆ, ಎಂದು ನಲಿ-ಕಲಿ ತರಬೇತಿಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಛತ್ರಪ್ಪ ತಂಬೂರಿ ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ.ಶಾಲೆ. ಬಸವನದುರ್ಗ, ಶ್ರೀಮತಿ ಜಯಮ್ಮ ಸ.ಶಿ.ಸ.ಪ್ರಾ.ಶಾಲೆ. ಗುಡ್ಡದ ಕ್ಯಾಂಪ್ ಹಾಗೂ ಶ್ರೀ ಹೆಚ್.ಆರ್.ಸತೀಶ್ ಸ.ಹಿ.ಪ್ರಾ.ಶಾಲೆ.ಮೂಡಿಗೆರೆ ಇವರು ಮಕ್ಕಳಿಗೆ ನಲಿ- ಕಲಿ ತರಬೇತಿ ನೀಡಿದರು ಹಾಗೆ ತರಬೇತಿ ಪಡೆದ ಶಿಕ್ಷಕರು ಉತ್ತಮ ಹಾಗೂ ಪರಿಣಾಮಕಾರಿ ಶಿಕ್ಷಕರಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಹಾಗೆ ಇದೇ ಸಂದರ್ಭದಲ್ಲಿ ಎಸ್.ಕೆ.ವಿ.ಎಸ್.ಕೆ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ.ಡಾ.ಕೊಟ್ಟೂರು ಮಹಾಸ್ವಾಮಿಗಳು ಆಶೀರ್ವದಿಸಿ ವಿದ್ಯಾರ್ಥಿಗಳಿಗೆ ಇದರ ಸದುಪಯೋಗವನ್ನು ಎಲ್ಲಾ ಪ್ರಶಿಕ್ಷಣಾರ್ಥಿಗಳು ಪಡೆದುಕೊಳ್ಳಬೇಕು ಮತ್ತು ಭದ್ರಬುನಾದಿಗೆ ಸಾಧನೆಯ ನಲಿ-ಕಲಿ ತರಬೇತಿ ಅವಶ್ಯ ಹಾಗೂ ಶಿಕ್ಷಕರ ಮನೋಧೋರಣೆ ಬದಲಾಗಬೇಕೆಂದು ಆಶೀರ್ವದಿಸಿದರು, ಇದೇ ಈ ಸಂದರ್ಭದಲ್ಲಿ ಎಸ್.ಕೆ ವಿ.ಎಸ್.ಕೆ ಟ್ರಸ್ಟ್ ಉಪಾಧ್ಯಕ್ಷರಾದ ಲಿಂಗಪ್ಪ ಕಮತಗಿ. ಮತ್ತು ಲಕ್ಷ್ಮಿಕಾಂತ್ ಮುಖ್ಯೋಪಾಧ್ಯಾಯರು ಹಾಗೂ ಪ್ರಾಚಾರ್ಯರಾದ ಶ್ರೀ ಜೆಡೆಪ್ಪ ಬಿ.ಕೆ ಹಾಗೂ ಉಪನ್ಯಾಸಕರುಗಳಾದ ಶ್ರೀ ಮಂಜುನಾಥ. ಎಮ್. ನೂರೊಂದ್ಯ ಅಣ್ಣಿಗೇರಿ,
ಶ್ರೀ ಮತಿ ಮಣಿಕ್ಯ ವರ್ಣಿಕರ್.ಶ್ರೀ ದಾನನಗೌಡ, ಶಾಂಭವಿ ಇವರು ಉಪಸ್ಥಿತರಿದ್ದರು ಮತ್ತು ಪ್ರಥಮ ವರ್ಷದ ಈಶ್ವರಿ ನಿರೂಪಣೆ ಮಾಡಿದರು.