Receipt of 88 applications: 6 hours of public hearing, hearing
ಕೊಪ್ಪಳ ಅಕ್ಟೋಬರ್ 07 (ಕರ್ನಾಟಕ ವಾರ್ತೆ): ಕರ್ನಾಟಕ ಲೋಕಾಯುಕ್ತದ ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ ಅವರು ಅಕ್ಟೋಬರ್ 7ರಂದು ನಡೆಸಿದ ಸಾರ್ವಜನಿಕ ಅಹವಾಲು, ಕುಂದು ಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 88 ಅಹವಾಲು ಅರ್ಜಿಗಳು ಸ್ವೀಕೃತವಾದವು.
ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರಿಂದ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲನಲ್ಲಿ 6 ಗಂಟೆಗಳ ಕಾಲ ನಡೆದ ಅಹವಾಲು ಆಲಿಕೆ ಮತ್ತು ವಿಚಾರಣೆ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಸಾರ್ವಜನಿಕರು ಭಾಗಿಯಾಗಿ ತಮ್ಮ ಅಹವಾಲನ್ನು ಗೌರವಾನ್ವಿತ ಉಪ ಲೋಕಾಯುಕ್ತರಿಗೆ ನೇರವಾಗಿ ಸಲ್ಲಿಸಿದರು.
ಸ್ವೀಕೃತವಾದ ಒಟ್ಟು 88 ಸಾರ್ವಜನಿಕ ಅಹವಾಲುಗಳ ಪೈಕಿ ಮೊದಲನೇ ದಿನ 55 ಜನ ಅರ್ಜಿದಾರರೊಂದಿಗೆ ಅವರ ಅಹವಾಲುಗಳ ಬಗ್ಗೆ ಉಪ ಲೋಕಾಯುಕ್ತರು ಚರ್ಚಿಸಿದರು. ಕೆಲವು ಅರ್ಜಿಗಳ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವಿವಿಧ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವು ಅರ್ಜಿಗಳಿಗೆ ಉಪ ಲೋಕಾಯುಕ್ತರು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು.
ಸ್ವೀಕೃತವಾದ ಅಹವಾಲು ಅರ್ಜಿಗಳನ್ನು ಪರಿಶೀಲಿಸುವುದಾಗಿ ಕೆಲವು ಅರ್ಜಿದಾರರಿಗೆ ತಿಳಿಸಿದರು. ಕಾನೂನಿನಲ್ಲಿ ಅವಕಾಶವಿದ್ದರೆ ಅಧಿಕಾರಿಗಳು ಬೇಗನೇ ಮಾಡಿಕೊಡುತ್ತಾರೆ ಎಂದು ಅರ್ಜಿದಾರರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತದ ರಾಯಚೂರಿನ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಲಕ್ಷ್ಮಣ ಅರಸಿದ್ಧಿ, ಕೊಪ್ಪಳ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಸಲೀಂ ಪಾಶಾ, ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್‌ಗಳಾದ ಗಿರೀಶ್ ರೋಡಕರ, ಚಂದ್ರಪ್ಪ, ರಾಜೇಶ ಹಾಗೂ ಇನ್ನೀತರರು ಇದ್ದರು.