Schedule of Central Drought Study Team
ವೇಳಾಪಟ್ಟಿ
👇🏻👇🏻👇🏻
ಕೊಪ್ಪಳ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲು ಇಂದು ಅಕ್ಟೋಬರ್ 06ರಂದು ಬರಲಿರುವ ಕೇಂದ್ರ ಬರ ಅಧ್ಯಯನ ತಂಡವು ಈ ಕೆಳಗಿನಂತೆ ಜಿಲ್ಲೆಯಲ್ಲಿ ಸಂಚರಿಸಲಿದೆ.
👇🏻👇🏻👇🏻
ಗಜೇಂದ್ರಗಡದಿಂದ ಮಧ್ಯಾಹ್ನ 3 ಗಂಟೆಗೆ ನಿರ್ಗಮಿಸಿ 3.20ಕ್ಕೆ ಬಂಡಿ ಕ್ರಾಸ್ ಗೆ ಆಗಮಿಸಿ 3.20ರಿಂದ 3.30ರವರೆಗೆ ಯಲಬುರ್ಗಾ ತಾಲೂಕಿನ ಯಲಬುರ್ಗಾ ಹೋಬಳಿ ವ್ಯಾಪ್ತಿಯ ರೈತರಾದ ಶಶಿಕಲಾ ಶರಣಪ್ಪ ರೊಟ್ಟಿ ಹಾಗೂ ಚಂದ್ರಪ್ಪ ಬಡಿಗೇರ ಅವರ ಹೊಲಗಳಿಗೆ ಭೇಟಿ
👇🏻👇🏻👇🏻👇🏻
ಬಳಿಕ 3.35 ರಿಂದ 3.50 ರವೆರೆಗೆ ಕುಷ್ಟಗಿ ತಾಲೂಕಿನ ಹನುಮಸಾಗರ ಹೋಬಳಿ ವ್ಯಾಪ್ತಿಯ
ಡೊಣ್ಣೆಗುಡ್ಡಾ ಗ್ರಾಮದ ಕಳಕಪ್ಪ ಬಸಪ್ಪ ಹಡಪದ ಮತ್ತು ಮಹಾದೇವಪ್ಪ ಪಕೀರಪ್ಪ ಹಿರೇಮನಿ, ಹೊನ್ನಪ್ಪ ದುರ್ಗಪ್ಪ ದೊಣ್ಣೆಗುಡ್ಡಾ ಎಂಬ ರೈತರ ಜಮೀನುಗಳಿಗೆ ಭೇಟಿ
👇🏻👇🏻👇🏻👇🏻
ಬಳಿಕ ಕುಷ್ಟಗಿ ತಾಲೂಕಿನ ಯಲಬುಣಚಿ ಗ್ರಾಮಕ್ಕೆ ತೆರಳಿ ಹನುಮನಾಳ ಹೋಬಳಿಯ ಪವಾಡೆಪ್ಪ ಈಳಗೇರ ಅವರ ಜಮೀನಿನಲ್ಲಿ 3.55 ರಿಂದ 04 ಗಂಟೆವರೆಗೆ ಬೆಳೆ ಹಾನಿ ವೀಕ್ಷಣೆ
👇🏻👇🏻👇🏻👇🏻
ಬಳಿಕ ಸಂಜೆ 4.05 ರಿಂದ 4.15 ರವರೆಗೆ ಬೆನಕನಾಳ ಗ್ರಾಮದ ಮಲ್ಲಯ್ಯ ಮಾಂತಗೇರಿ ಅವರ ಹೊಲದಲ್ಲಿ, ಸಂಜೆ 4.20 ರಿಂದ 4.30ರವರೆಗೆ ಮದ್ನಾಳ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಣೆ
👇🏻👇🏻👇🏻👇🏻
ಬಳಿಕ 4.40 ರಿಂದ 4.55ರವರೆಗೆ ಬಾದಿಮನಾಳ ಗ್ರಾಮದ ಕೆರೆಯ ಹತ್ತಿರ ಬೆಳೆ ಹಾನಿ ಮತ್ತು ನರೇಗಾ ಕಾಮಗಾರಿಯ ಬಗ್ಗೆ ಪರಿಶೀಲನೆ
👇🏻👇🏻👇🏻👇🏻
ಬಳಿಕ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮಕ್ಕೆ ತೆರಳಿ
5.10 ರಿಂದ 5.30 ರವರೆಗೆ ಚಳಗೇರಾ ಗ್ರಾಮದ ರೈತರಾದ ಬಸಮ್ಮ ವೀರಭದ್ರಪ್ಪ ಗಾಣಿಗೇರ ಹಾಗೂ ಓಂಪ್ರಕಾಶ ದೊಡ್ಡಯ್ಯ ಮರದ ಅವರ ಕೃಷಿ ಜಮೀನಿಗೆ ಭೇಟಿ ಮತ್ತು ಅದೇ ಗ್ರಾಮದ ರೈತರಾದ ಶರಣಪ್ಪ ಸೋಮಪ್ಪ ಬಾರಕೇರ ಅವರ ತೋಟಗಾರಿಕೆ ಬೆಳೆಯ ವೀಕ್ಷಣೆ ಹಾಗೂ ಆರ್.ಕೆ.ವಿ.ವೈ & ವರ್ಮಿ ಕಾಂಪೋಸ್ಟ್ ಘಟಕಕ್ಕೆ ಭೇಟಿ
👇🏻👇🏻👇🏻👇🏻
ಬಳಿಕ 5.45ಕ್ಕೆ ಕುಷ್ಟಗಿ ಮಾರ್ಗವಾಗಿ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮಕ್ಕೆ ತೆರಳಿ ಸಂಜೆ 5.50 ರಿಂದ 6.05 ರವರೆಗೆ ಕೃಷಿ ಬೆಳೆಗಳು ಮತ್ತು ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ
👇🏻👇🏻👇🏻👇🏻
ಬಳಿಕ ಕೊಪ್ಪಳ ತಾಲೂಕಿನ ಹೊಸೂರ ಕ್ರಾಸ್ ಬಳಿಗೆ ಬಂದು
ಸಂಜೆ 6.15 ರಿಂದ 6.25 ರವರೆಗೆ ಇರಕಲಗಡ ಹೋಬಳಿಯ ಮೆತಗಲ್ ಕ್ರಾಸ್ ಹತ್ತಿರ ಹನುಮಪ್ಪ ಶಂಕ್ರಪ್ಪ ಅವರ ಹೊಲದಲ್ಲಿ ಅದೇ ರೀತಿ ಬಿ.ಹೊಸಳ್ಳಿ ಗ್ರಾಮದ ಕೃಷ್ಣಪ್ಪ
ರಾಥೋಡ ಅವರ ಕೃಷಿ ಬೆಳೆ ವೀಕ್ಷಣೆ
👇🏻👇🏻👇🏻👇🏻
ಅಲ್ಲಿಂದ 6.45ಕ್ಕೆ ನಿರ್ಗಮಿಸಿ ಹಿಟ್ನಾಳ ಟೋಲ್‌ಗೇಟ್ ಮಾರ್ಗವಾಗಿ ವಿಜಯನಗರ ಜಿಲ್ಲೆಯ ಕಡೆಗೆ ಪಯಣ
ತಂಡದಲ್ಲಿ ಯಾರಿದ್ದಾರೆ?
ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ. ರಾಜಶೇಖರ್ ಐ.ಎ.ಎಸ್., ಪಶುಸಂಗೋಪನೆ ಇಲಾಖೆಯ ನಿರ್ದೇಶಕರಾದ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತರಾದ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಕರೀಗೌಡ ಐ.ಎ.ಎಸ್ ಅವರನ್ನೊಳಗೊಂಡ ತಂಡದಿಂದ ಪರಿಶೀಲನೆ