Swabhimani Kalyan Parva Utsav on October 21st and 22nd at Basava Kalyan
ಜಾಹೀರಾತು
- ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿರುವ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಇದೇ ತಿಂಗಳ ದಿನಾಂಕ: ೨೧ ಹಾಗೂ ೨೨ ರಂದು ಸ್ವಾಭಿಮಾನಿ ಕಲ್ಯಾಣ ಪರ್ವವನ್ನು ಆಯೋಜಿಸಲಾಗಿದೆ ಎಂದು ಕಲ್ಯಾಣ ಪರ್ವ ಉತ್ಸವ ಸಮಿತಿಯ ಅಧ್ಯಕ್ಷರಾದ ಕುಂಬಳಗೂಡಿನ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಜಗದ್ಗುರು ಪೂಜ್ಯ ಡಾ||ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ೧೨ನೇ ಶತಮಾನದಲ್ಲಿ ಗುರು ಬಸವಣ್ಣರವರು ಅನುಭವ ಮಂಟಪವನ್ನು ಸ್ಥಾಪಿಸಿದರು. ಯಾವುದೇ ಜಾತಿ, ಮತ, ಪಂಥ ಹಾಗೂ ಪ್ರದೇಶದ ಬೇದವಿಲ್ಲದೆ ಎಲ್ಲರಿಗೂ ಅವಕಾಶ ನೀಡಿದರು. ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಎನಿಸಿರುವ ಅನುಭವ ಮಂಟಪಕ್ಕೆ ಕಾಶ್ಮೀರದಿಂದ ಮೋಳಿಗೆ ಮಾರಯ್ಯನವರು, ಆಫ್ಘಾನಿಸ್ತಾನದಿಂದ ಮರುಳಶಂಕರ ದೇವರು, ಸೌರಾಷ್ಟçದಿಂದ ಅದಯ್ಯ ಶರಣರು, ಓರಿಸ್ಸದಿಂದ ಸುಜ್ಞಾನಿದೇವರು ಹೀಗೆ ನಾನಾ ಭಾಗಗಳಿಂದ ಸಹಸ್ರಾರು ಶರಣರು ಆಗಮಿಸುತ್ತಾರೆ. ಬ್ರಾಹ್ಮಣರಿಂದ ಶೂದ್ರರವರೆಗೆ ಎಲ್ಲರಿಗೂ ಮುಕ್ತವಾದ ಅವಕಾಶ ನೀಡಲಾಗಿತ್ತು.
ಬ್ರಾಹ್ಮಣ ಮದುವರಸರು ಮತ್ತು ಸಮಗಾರ ಹರಳಯ್ಯ ಉಭಯತರು ಇಷ್ಟಲಿಂಗ ದೀಕ್ಷೆ ಪಡೆದು ಲಿಂಗಾಯತ ಧರ್ಮಿಯರಾಗಿದ್ದರಿಂದ ಹರಳಯ್ಯ ರವರ ಮಗ ಶೀಲವಂತನಿಗೆ ಮದುವರಸರ ಮಗಳು ಲಾವಣ್ಯಳನ್ನು ಕೊಟ್ಟು ಅನುಭವ ಮಂಟಪದಲ್ಲಿ ಮದುವೆ ಮಾಡಿಸಲಾಯಿತು. ಇದರಿಂದ ಸಿಡಿದೆದ್ದ ಜಾತಿ ವಾದಿಗಳು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ವಿಧಿಸಿದರು. ವರ್ಣಾಂತರ ವಿವಾಹದಲ್ಲಿ ಭಾಗಿಯಾದ ಶರಣರಿಗೆ ಆನೆ ಕಾಲಿಗೆ ಕಟ್ಟಿ ಎಳೆಹೂಟೆ ಶಿಕ್ಷೆ ನೀಡಲಾಯಿತು ಎಂದ್ರು ಜಾತಿವಾದಿಗಳು ವಚನ ಸಾಹಿತ್ಯ ನಾಶಮಾಡ ತೊಡಗಿದಾಗ ವಚನ ಸಾಹಿತ್ಯದ ರಕ್ಷಣೆಗಾಗಿ ಸಹಸ್ರಾರು ಶರಣರು ಕಲ್ಯಾಣ ಬಿಟ್ಟು ಹತ್ತು ಹಲವು ದಿಕ್ಕಿಗೆ ಚದುರಿ ಹೋದರು.
ಪೂಜ್ಯರಾದ ಡಾ||ಮಾತೆ ಮಹಾದೇವಿಯವರ ನೇತೃತ್ವದಲ್ಲಿ ೨೦೦೨ರಲ್ಲಿ ಮತ್ತೆ ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ ಉತ್ಸವ ಪ್ರಾರಂಭವಾಯಿತು. ಮೊದಲಿನ ವೈಭವದಂತೆ ಮಾತೆ ಮಹಾದೇವಿಯವರ ಸಂಕಲ್ಪ ಪೂರೈಸಲು ನಾವು ಇದೇ ತಿಂಗಳ ೨೧ ಹಾಗೂ ೨೨ ರಂದು ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಿದ್ದೇವೆ. ಬಸವ ಕಲ್ಯಾಣದ ಸಸ್ತಾಪುರ್ ಬಂಗ್ಲ ಹತ್ತಿರದ ಬೇಗ್ ಸಭಾ ಮಂಟಪದ ಆವರಣದಲ್ಲಿ ೨೧ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಸ್ವಾಭಿಮಾನಿ ಕಲ್ಯಾಣ ಪರ್ವ
ಉತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರನನ್ನಾಗಿ ಬೆಳಗಾವಿಯ ಶರಣ ಅಶೋಕ್ ಬೆಂಡಿಗೇರಿ ಮತ್ತು ಪ್ರಧಾನ ಕಾರ್ಯದರ್ಶಿಯನ್ನಾಗಿ ಬೀದರಿನ ಡಾ|| ಮಹೇಶ್ ಬಿರಾದರ, ಹೈದರಬಾದಿನ ವೆನ್ನ ಈಶ್ವರಪ್ಪ ಅವರನ್ನು ದಾಸೋಹ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ, ಹಲವಾರು ಶಾಸಕರು, ಸಚಿವರು, ಸಮಾಜದ ಗಣ್ಯರು, ಧಾರ್ಮಿಕ ಮುಖಂಡರು, ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಮಹಿಳಾ ಗೋಷ್ಠಿ, ಬಾವೈಕತಾ ಗೋಷ್ಠಿ, ಇಷ್ಟಲಿಂಗ ಪೂಜೆಯ ಮಹತ್ವ, ಮುಂತಾದ ವಿಷಯಗಳ ಕುರಿತು ಗೋಷ್ಠಿಗಳು ಜರುಗಲಿದೆ. ಕರ್ನಾಟಕ, ಮಹಾರಾಷ್ಟç, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ದೆಹಲಿ ಮುಂತಾದ ರಾಜ್ಯಗಳಿಂದ ಸಹಸ್ರಾರು ಜನರು ಭಾಗವಹಿಸಲಿದ್ದಾರೆ. ಯಾವುದೇ ಜಾತಿ ಬೇದವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಬಸವಭಕ್ತರು ಈ ಉತ್ಸವದಲ್ಲಿ ಭಾಗವಹಿಸಬೇಕು ಎಂದರು
ಪತ್ರಿಕಾಗೋಷ್ಠಿ ಯಲ್ಲಿ ಬಸಯ್ಯ ಗಣಾಚಾರಿ. ಶಿವಾನಂದ್ ಅಬಲೂರ್. ಅಶೋಕ ಶೀಲವಂತ ವೀರಣ್ಣ ಹಳಿಯಾಳ ವೈ. ಎಸ್ ನಂದೆ ನ್ನವರ ಬಿ ಬಿ ಸಂಕನಗೌಡರ