ಕೊಪ್ಪಳ ಸೆಪ್ಟೆಂಬರ್ 21 (ಕರ್ನಾಟಕ ವಾರ್ತೆ): ಕಲೆ, ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಹೇಳಿದರು. ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಸೆಪ್ಟೆಂಬರ್ 21ರಂದು ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಕರ್ಮ ಸಮಾಜಕ್ಕೆ ದೈವಶಕ್ತಿ ಇರುವ ಕಾರಣ ಸಕಲ ಕಲೆಗಳನ್ನು ಕರಗತ ಮಾಡಿಕೊಂಡು ಸಮಾಜದಲ್ಲಿಂದು ಸ್ಮರಣಿಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅದಕ್ಕೆ ನಾವಿಂದು ವಿಶ್ವಕರ್ಮ ಸಮಾಜವು ನಿರ್ಮಿಸಿದ ಶಿಲ್ಪಕಲೆಯ ಸೃಷ್ಟಿಯನ್ನು ನೋಡಬಹುದು. ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯಗಳನ್ನು ದೊರೆಯಲಿವೆ. ಅಲ್ಲದೆ ಕರಕುಶಲ ವಸ್ತುಗಳು, ಕಲೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಕೌಶಲ್ಯ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಬಹುದು. ಕುಲಕಸುಬುದಾರರಿಗೆ ತರಬೇತಿ ಕಾರ್ಯಕ್ರಮ, ತರಬೇತಿ ಭತ್ಯೆ, ಸಾಲ ಮತ್ತು ಸಹಾಯಧನ ಹೀಗೆ ಹಲವಾರು ಸೌಲಭ್ಯಗಳಿವೆ. ಇವುಗಳ ಸದುಪಯೋಗ ಪಡೆದುಕೊಂಡು, ಅಭಿವೃದ್ಧಿ ಹೊಂದಿ ಸಮಾಜದ ಮುನ್ನೆಲೆಗೆ ಬರಬೇಕು ಎಂದು ಹೇಳಿದರು. ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು, ವಿಶ್ವಕರ್ಮ ಸಮಾಜ ಜಗತ್ತಿಗೆ ಅದ್ಭುತ ಕಲೆ ನೀಡಿದ ಸಮಾಜವಾಗಿದೆ ಎಂದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ ವೀರೇಶ ಬಡಿಗೇರ ಅವರು ಶ್ರೀ ವಿಶ್ವಕರ್ಮರ ಕುರಿತು ವಿಶೇಷ ಉಪನ್ಯಾಸ ನೀಡಿ, ತ್ರಿಮೂರ್ತಿಗಳು ಹುಟ್ಟದೇ ಇರುವಂತಹ ಸಂದರ್ಭದಲ್ಲಿ ಜಗತ್ತನ್ನು ಸೃಷ್ಠಿಸಿ, ಜಗತ್ತಿಗೆ ಕತೃತ್ವ ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿಕೊಟ್ಟವರು ವಿಶ್ವಕರ್ಮ. ಈ ಮಾತು ಪುರಾಣ, ವೇದಗಳಲ್ಲಿದೆ. ಸಕಲ ಚೈತನ್ಯವನ್ನು ಸೃಷ್ಠಿಗೆ ನೀಡಿದವರು ವಿಶ್ವಕರ್ಮ. ಇಡಿ ಪ್ರಪಂಚಕ್ಕೆ ಬೆಳಕು ನೀಡಿದವರು ವಿಶ್ವಕರ್ಮರಾಗಿದ್ದು, ಇದು ಋಗ್ವೇದಲ್ಲಿ ಕೂಡ ತಿಳಿಸಲಾಗಿದೆ. ವಿಶ್ವಕರ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿರುವುದು ಸಂತೋಷ. ವಿಶ್ವಕರ್ಮ ಸಂಶೋಧನಾ ಕೇಂದ್ರ ಸ್ಥಾಪಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿರಸಪ್ಪಯ್ಯ ಮಹಾಸ್ವಾಮಿಗಳು, ದೇವೇಂದ್ರ ಮಹಾಸ್ವಾಮಿಗಳು, ಗುರುನಾಥ ಮಹಾಸ್ವಾಮಿಗಳು, ನಾಗರಮೂರ್ತಿ ಮಹಾಸ್ವಾಮಿಗಳು, ಸುಬ್ಬಣ್ಣಾಚಾರ ಹಾಗೂ ಕೊಪ್ಪಳ ತಹಶೀಲ್ದಾರರಾದ ವಿಠ್ಠಲ್ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಗಣ್ಯರಾದ ಮಂಜುಳಾ ಕರಡಿ, ಸಮಾಜದ ಜಿಲ್ಲಾಧ್ಯಕ್ಷ ಈಶಪ್ಪ ಬಡಿಗೇರ, ಗೌರವಾಧ್ಯಕ್ಷ ರುದ್ರಪ್ಪ ಬಡಿಗೇರ, ವಿಶ್ವಕರ್ಮ ಅಭಿವೃದ್ಧಿ ನಿಗಮದ ನಾಮ ನಿರ್ದೆಶನ ಸದಸ್ಯರಾದ ಪ್ರಭಾಕರ ಬಡಿಗೇರ, ಮುಖಂಡರಾದ ಶೇಖರಪ್ಪ ಬಡಿಗೇರ, ದೇವಪ್ಪ ಬಡಿಗೇರ, ಎ.ಪ್ರಕಾಶ, ಮುತ್ತಣ್ಣ ಬಡಿಗೇರ, ಈಶಪ್ಪ ಬಡಿಗೇರ ಮುರಡಿ,ಅಯ್ಯೆಂದ್ರ ಬಡಿಗೇರ ಲೇಬಗೇರಿ, ಪ್ರಭಾಕರ ಬಡಿಗೇರ ಕರ್ಕಿಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಾಹಿತಿಗಳಾದ ಸಾವಿತ್ರಿ ಮುಜುಮದಾರ ಅವರು ಕಾರ್ಯಕ್ರಮ ನಿರೂಪಿಸಿದರು. ಸನ್ಮಾನ: ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಿಗೆ, ನಗರಸಭೆ ಅಧ್ಯಕ್ಷರಿಗೆ, ವಿಶೇಷ ಉಪನ್ಯಾಸಕರಿಗೆ ಹಾಗೂ ಇತರ ಗಣ್ಯರಿಗೆ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು. ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶ್ರೀ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆಯೂ ಶ್ರೀ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು ಗಡಿಯಾರ ಕಂಬ, .
ಕಲೆ, ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ಹೇಮಲತಾ ನಾಯಕ
ಜಾಹೀರಾತು